ETV Bharat / city

ರಾಜ್ಯ ಕಾಂಗ್ರೆಸ್ ನಾಯಕರ ಆತ್ಮಬಲ ಕುಗ್ಗಿಸಿದ ಪಂಚರಾಜ್ಯಗಳ ಚುನಾವಣೆ ಫಲಿತಾಂಶ! - ರಾಜ್ಯ ಕಾಂಗ್ರೆಸ್​ಗೆ ಮುಳ್ಳಾದ ಪಂಚರಾಜ್ಯಗಳ ಚುನಾವಣೆ ಫಲಿತಾಂಶ

ಕರ್ನಾಟಕದಲ್ಲಿ ಮೇಕೆದಾಟು ಪಾದಯಾತ್ರೆಯಂತಹ ಸಾಹಸಗಳನ್ನು ನಡೆಸಿ ರಾಜ್ಯದ ಅಧಿಕಾರ ಹಿಡಿಯಲು ಹವಣಿಸುತ್ತಿರುವ ಕಾಂಗ್ರೆಸ್​ಗೆ ಪಂಚರಾಜ್ಯ ಚುನಾವಣೆ ಭಾರಿ ಪೆಟ್ಟು ನೀಡಿದೆ. ಹೊಸ ಉತ್ಸಾಹದಲ್ಲಿ ಕಾರ್ಯಕರ್ತರಲ್ಲಿ ಈ ಫಲಿತಾಂಶ ಧೃತಿಗೆಡುವಂತೆ ಮಾಡಿದೆ.

congress
ಕಾಂಗ್ರೆಸ್
author img

By

Published : Mar 11, 2022, 10:14 PM IST

ಬೆಂಗಳೂರು: ಇನ್ನೊಂದು ವರ್ಷದಲ್ಲಿ ವಿಧಾನಸಭೆ ಚುನಾವಣೆ ಮುಂದಿಟ್ಟುಕೊಂಡು ಪಕ್ಷ ಸಂಘಟನೆಗೆ ಮುಂದಾಗಿರುವ ರಾಜ್ಯ ಕಾಂಗ್ರೆಸ್ ನಾಯಕರಿಗೆ ಪಂಚರಾಜ್ಯಗಳ ಚುನಾವಣೆ ನಾಯಕರ ಆತ್ಮಬಲವನ್ನು ಅದುರಿಸಿದೆ.

2013ರಲ್ಲಿ ಅಧಿಕಾರಕ್ಕೆ ಬಂದು ಐದು ವರ್ಷ ಪೂರ್ಣಾವಧಿ ಸರ್ಕಾರ ನಡೆಸಿದ ಕಾಂಗ್ರೆಸ್​ಗೆ 2018 ರ ಚುನಾವಣೆಯಲ್ಲಿ ಪೂರ್ಣ ಬಹುಮತ ಸಿಗಲಿಲ್ಲ. ಈ ಮಧ್ಯೆ ಜೆಡಿಎಸ್ ಜೊತೆ ಮೈತ್ರಿ ಸರ್ಕಾರ ಮಾಡಿಕೊಂಡರೂ ಪರಸ್ಪರ ಭಿನ್ನಾಭಿಪ್ರಾಯ ಸರ್ಕಾರವನ್ನು ಹೆಚ್ಚು ಸಮಯ ಮುಂದುವರಿಯದಂತೆ ಮಾಡಿತು. ಅಂತಿಮವಾಗಿ ಆಪರೇಷನ್ ಕಮಲದಿಂದಾಗಿ 17 ಶಾಸಕರು ಮೈತ್ರಿ ಸರ್ಕಾರಕ್ಕೆ ಕೈಕೊಟ್ಟಿದ್ದರಿಂದ ಸರ್ಕಾರ ಪತನವಾಗಿ ಬಿಜೆಪಿ ಅಧಿಕಾರಕ್ಕೆ ಬಂತು.

ಇದೀಗ 2023ರ ವಿಧಾನಸಭೆ ಚುನಾವಣೆಯಲ್ಲಿ ಶತಾಯಗತಾಯ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿರುವ ಕಾಂಗ್ರೆಸಿಗೆ ಪಂಚರಾಜ್ಯಗಳ ಚುನಾವಣೆ ತೀವ್ರ ಆಘಾತವನ್ನು ಉಂಟುಮಾಡಿದೆ. ಪಕ್ಷ ಸಂಘಟನೆಗೆ ಮುಂದಾಗುವ ಉತ್ಸಾಹದಲ್ಲಿದ್ದ ರಾಜ್ಯ ಕಾಂಗ್ರೆಸ್ ನಾಯಕರ ಆತ್ಮ ಬಲಕ್ಕೆ ಪೆಟ್ಟು ನೀಡಿದೆ.

ನಾಯಕರ ಮಧ್ಯೆ ಕಿತ್ತಾಟ: ಒಂದೆಡೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಡುವೆ ಆಂತರಿಕ ಭಿನ್ನಾಭಿಪ್ರಾಯ ದಿನದಿಂದ ದಿನಕ್ಕೆ ಪಕ್ಷದ ಸಂಘಟನೆಗೆ ಹೊಡೆತ ನೀಡುತ್ತಿದೆ. ಇನ್ನೊಂದೆಡೆ ಇವರಿಬ್ಬರನ್ನು ಹೊರತುಪಡಿಸಿ ಬಿ.ಕೆ. ಹರಿಪ್ರಸಾದ್, ಸತೀಶ್ ಜಾರಕಿಹೊಳಿ, ಕೃಷ್ಣಬೈರೇಗೌಡ, ಎಂ.ಬಿ.ಪಾಟೀಲ್, ಎಚ್.ಕೆ.ಪಾಟೀಲ್ ಹಾಗೂ ಆರ್.ವಿ.ದೇಶಪಾಂಡೆ ಸೇರಿದಂತೆ ಹಲವು ಪ್ರಮುಖ ನಾಯಕರು ಸಿಎಂ ಸ್ಥಾನದತ್ತ ದೃಷ್ಟಿ ನೆಟ್ಟಿದ್ದಾರೆ. ಪಕ್ಷವನ್ನು ಅಧಿಕಾರಕ್ಕೆ ತರುವ ಉತ್ಸಾಹದ ಜೊತೆಗೆ, ತಮಗೂ ಒಂದು ಆಯಕಟ್ಟಿನ ಸ್ಥಾನಮಾನವನ್ನು ನಿರೀಕ್ಷಿಸುತ್ತಿರುವ ಕಾಂಗ್ರೆಸ್ ನಾಯಕರಿಗೆ ಪಂಚರಾಜ್ಯ ಚುನಾವಣೆ ಫಲಿತಾಂಶ ಆಘಾತ ನೀಡಿದೆ.

ಅರಗಿಸಿಕೊಳ್ಳಲಾಗದ ತುತ್ತು: ಒಂದೆಡೆ ಅಧಿಕಾರದಲ್ಲಿದ್ದ ಪಂಜಾಬ್ ರಾಜ್ಯ ಕೈಬಿಟ್ಟು ಹೋಗಿದೆ. ಉತ್ತರಾಖಂಡ ಮತ್ತು ಉತ್ತರಪ್ರದೇಶ ರಾಜ್ಯಗಳಲ್ಲಿ ಕಳೆದ ಸಾಲಿಗಿಂತ ಸಾಧನೆ ಕಳಪೆಯಾಗಿದೆ. ಗೋವಾದಲ್ಲಿ ಅಧಿಕಾರವನ್ನು ಹಿಡಿಯುವ ನಿರೀಕ್ಷೆ ಹುಸಿಯಾಗಿದೆ. ಮಣಿಪುರದಲ್ಲಿಯೂ ಬಿಜೆಪಿ ಭರ್ಜರಿ ಸಾಧನೆ ಮಾಡಿರುವುದು ಕಾಂಗ್ರೆಸ್ ಪಾಲಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. 5 ರಾಜ್ಯಗಳ ಪೈಕಿ ಎರಡು ರಾಜ್ಯದಲ್ಲಿ ಆದರೂ ಅಧಿಕಾರ ಹಿಡಿಯುತ್ತೇವೆ. ಉಳಿದ ರಾಜ್ಯಗಳಲ್ಲಿ ಬಾಲ ಹೆಚ್ಚಿಸಿಕೊಳ್ಳುತ್ತವೆ ಎಂದು ನಿರೀಕ್ಷಿಸಿದ್ದ ಕಾಂಗ್ರೆಸ್ಸಿಗೆ ನಿರಾಸೆ ಎದುರಾಗಿದೆ.

ರಾಜ್ಯದಲ್ಲಿ ಕಾಂಗ್ರೆಸ್​ಗಿದೆ ಉತ್ತಮ ಸ್ಥಿತಿ: ರಾಜ್ಯದಲ್ಲಿ ಇತ್ತೀಚೆಗೆ ನಡೆದ ವಿಧಾನಪರಿಷತ್ ಚುನಾವಣೆ, ಗ್ರಾಮ ಪಂಚಾಯತಿ ಚುನಾವಣೆ ಹಾಗೂ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸಾಧನೆ ಉತ್ತಮವಾಗಿದೆ. ಲೋಕಸಭೆಯ ಒಂದು ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಸತೀಶ್ ಜಾರಕಿಹೊಳಿ ಬಹುತೇಕ ಗೆದ್ದೇ ಬಿಟ್ಟರು ಅನ್ನುವ ಮಟ್ಟಿಗೆ ನಿರೀಕ್ಷಿಸಿದ್ದರು. ಈ ಎಲ್ಲಾ ನಿಟ್ಟಿನಲ್ಲಿ ಕರ್ನಾಟಕದ ಜನತೆ ಕಾಂಗ್ರೆಸ್​ಗೆ ಅನುಕೂಲಕರವಾಗಿ ಇದ್ದಾರೆ.

2023ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುತ್ತಾರೆ ಎಂಬ ನಿರೀಕ್ಷೆ ಇದುವರೆಗೂ ಇತ್ತು. ಆದರೆ ಪಂಚರಾಜ್ಯ ಚುನಾವಣೆ ಫಲಿತಾಂಶ ಉತ್ಸಾಹಕ್ಕೆ ತಣ್ಣೀರು ಎರಚಿದೆ. ಕಾಂಗ್ರೆಸ್​ಗೆ ಉಂಟಾಗಿರುವ ಭಾರಿ ಹಿನ್ನಡೆಯ ಚರ್ಚೆ ವ್ಯಾಪಕವಾಗಿ ಶುರುವಾಗಿದ್ದು, ಇದು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಜನತೆಯ ಮೇಲೆ ಪರಿಣಾಮ ಬೀರಲಿದೆ ಎಂಬ ಆತಂಕ ಕಾಂಗ್ರೆಸ್ ನಾಯಕರಿಗೆ ಕಾಡಲಾರಂಭಿಸಿದೆ.

ಇದನ್ನೂ ಓದಿ: ಪಂಚರಾಜ್ಯಗಳಲ್ಲಿ ಕಾಂಗ್ರೆಸ್​ ಹೀನಾಯ ಸೋಲು: ದೆಹಲಿಯಲ್ಲಿ ಭಿನ್ನಮತೀಯ ನಾಯಕರ ಸಭೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.