ಬೆಂಗಳೂರು : 2021-22ನೇ ಸಾಲಿನ ಬಿ.ಇಡಿ ಕೋರ್ಸಿಗೆ ಸಂಬಂಧಪಟ್ಟಂತೆ ಕೌನ್ಸಿಲಿಂಗ್‌ನ್ನು ಡಿಸೆಂಬರ್ 21ರಿಂದ ಕೇಂದ್ರೀಕೃತ ದಾಖಲಾತಿ ಘಟಕದಲ್ಲಿ ಆಯೋಜಿಸಲಾಗಿದೆ. ಕೌನ್ಸಿಲಿಂಗ್‌ನಲ್ಲಿ ಭಾಗವಹಿಸಲು ಆಯ್ಕೆಯಾಗಿರುವ ಕಲಾ ವಿಭಾಗ ಹಾಗೂ ವಿಜ್ಞಾನ ವಿಭಾಗದ ಅಭ್ಯರ್ಥಿಗಳ ಪಟ್ಟಿಯನ್ನು 'ಇಲಾಖಾ ವೆಬ್‌ಸೈಟ್'ನಲ್ಲಿ ಪ್ರಕಟಿಸಲಾಗಿದೆ.
ಬಿಇಡಿ ಕೋರ್ಸ್ ಕೌನ್ಸಿಲಿಂಗ್ : ಆಯ್ಕೆ ಪಟ್ಟಿಯಲ್ಲಿ ಹೆಸರಿದ್ದು, ಮೂಲ ದಾಖಲೆಗಳ ಪರಿಶೀಲನೆಗೆ ಗೈರುಹಾಜರಾದ ಅಭ್ಯರ್ಥಿಗಳಿಗೂ ಸಹ ಕೇಂದ್ರೀಕೃತ ದಾಖರಾತಿ ಘಟಕದಲ್ಲೇ ಮೂಲ ದಾಖಲೆಗಳ ಪರಿಶೀಲನೆಗೆ ಅವಕಾಶ ಕಲ್ಪಿಸಿ ಕೌನ್ಸಿಲಿಂಗ್ ನೀಡಲಾಗುವುದು. ಆದರೆ ಈ ಅಭ್ಯರ್ಥಿಗಳಿಗೆ ವೇಳಾಪಟ್ಟಿಯಲ್ಲಿ ನಿಗದಿಪಡಿಸಿರುವ ದಿನಾಂಕಗಳಂದು ಪರಿಶೀಲನೆಗೆ ಹಾಜರಾದಲ್ಲಿ ಮಾತ್ರ ಪರಿಗಣಿಸಲಾಗುತ್ತೆ.
ಕೌನ್ಸಿಲಿಂಗ್‌ಗೆ ವಿವಿಧ ಜಿಲ್ಲೆಗಳ ಬಿ.ಇಡಿ ಸಂಸ್ಥೆಗಳಲ್ಲಿ ಲಭ್ಯವಿರುವ ಪ್ರವರ್ಗವಾರು ಸೀಟುಗಳ ಸಂಖ್ಯೆಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತೆ. ಪ್ರತಿನಿತ್ಯ ಕೌನ್ಸಿಲಿಂಗ್ ಮುಗಿದ ನಂತರ ಉಳಿಕೆ ಸೀಟುಗಳ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಹಾಗೂ ಆಯಾ ದಿನ ಬೆಳಗ್ಗೆ ಕೇಂದ್ರೀಕೃತ ದಾಖಲಾತಿ ಘಟಕದ ಪ್ರಕಟಣಾ ಫಲಕದಲ್ಲಿ ಪ್ರಕಟಿಸಲಾಗುತ್ತೆ.
ಬಿಇಡಿ ದಾಖಲಾತಿಗೆ ಪ್ರಥಮ ಸುತ್ತಿನ ಕೌನ್ಸಿಲಿಂಗ್ : ಇಂದು ಇಲಾಖಾ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ ಪಟ್ಟಿಯಲ್ಲಿ ಹೆಸರಿರುವ ಅಭ್ಯರ್ಥಿಗಳು ಮಾತ್ರ ಕೌನ್ಸಿಲಿಂಗ್‌ಗೆ ಹಾಜರಾಗಲು ಅರ್ಹತೆ ಹೊಂದಿದ್ದು, ಅಂತಹವರು ಕೌನ್ಸಿಲಿಂಗ್‌ನಲ್ಲಿ ಭಾಗವಹಿಸುವ ಮುನ್ನ ಪ್ರವರ್ಗವಾರು ಸೀಟುಗಳು ಲಭ್ಯವಿರುವ ಜಿಲ್ಲೆ ಮತ್ತು ಕಾಲೇಜುಗಳನ್ನು ಪರಿಶೀಲಿಸಿ ಹಾಜರಾಗಬೇಕು.