ETV Bharat / city

ಕೊರೊನಾ​​ ಆಸ್ಪತ್ರೆಗಳಲ್ಲಿ ಅಗ್ನಿ ಸುರಕ್ಷತೆ ಹೇಗಿದೆ? - Fire accident in Covid care centers

ಅಗ್ನಿ ಅವಘಡಗಳು ಸಂಭವಿಸದಂತೆ ರಾಜ್ಯದಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ಅಗ್ನಿ ಶಾಮಕ ಇಲಾಖೆ ಹಲವಾರು ಕ್ರಮ ಕೈಗೊಂಡಿವೆ. ಆದರೆ, ಎಷ್ಟೋ ಆಸ್ಪತ್ರೆಗಳಲ್ಲಿ ಅತ್ಯಾಧುನಿಕ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ. ಹೀಗಾಗಿ, ಆಗಾಗ್ಗೆ ದುರಂತ ಸಂಭವಿಸುತ್ತಿವೆ. ಈ ಕುರಿತು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕಿದೆ.

Fire Incident Reporting
ಅಗ್ನಿ ಸುರಕ್ಷತೆ
author img

By

Published : Aug 22, 2020, 2:30 PM IST

ಬೆಂಗಳೂರು: ಅಹಮದಾಬಾದ್​​​​ನ ಕೋವಿಡ್​​ ಕೇರ್​​ ಸೆಂಟರ್​​​ನಲ್ಲಿ ಸಂಭವಿಸಿದ ಆಕಸ್ಮಿಕ ಅಗ್ನಿ ದುರಂತದಲ್ಲಿ ಅಪಾರ ಪ್ರಮಾಣದ ಸಾವು - ನೋವು ಉಂಟಾಗಿದ್ದು, ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ದುರಂತ ಸಂಭವಿಸಿದಾಗ ಪರಿಸ್ಥಿತಿ ಹತೋಟಿಗೆ ತರಲು ಅಗತ್ಯ ಮುಂಜಾಗ್ರತೆ ತೆಗೆದು ಕೊಂಡಿರುವುದಿಲ್ಲ. ಈ ಕಾರಣಕ್ಕೆ ಹೆಚ್ಚು ಪ್ರಾಣಹಾನಿ ಸಂಭವಿಸಿದ ಅದೆಷ್ಟೋ ನಿದರ್ಶನಗಳಿವೆ. ಈ ಹಿನ್ನೆಲೆಯಲ್ಲಿ ಅಗ್ನಿ ಅವಘಡಗಳು ಸಂಭವಿಸದಂತೆ ರಾಜ್ಯದಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ಅಗ್ನಿಶಾಮಕ ಇಲಾಖೆ ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮಗಳ ನೋಟ ಇಲ್ಲಿದೆ.

ಕುಂದಾನಗರಿ ಬೆಳಗಾವಿ ಸ್ಮಾರ್ಟ್​​ ಸಿಟಿಯಾಗಿ ಪರಿವರ್ತನೆಗೊಳ್ಳುತ್ತಿದ್ದರೂ ಬೀಮ್ಸ್ ಆಸ್ಪತ್ರೆ ಮಾತ್ರ ಅಗ್ನಿ ಸುರಕ್ಷತೆಗಳಿಲ್ಲದೇ ಬಳಲುತ್ತಿದೆ. ಜಿಲ್ಲಾಸ್ಪತ್ರೆಯಲ್ಲಿ ಅಗ್ನಿ ಅವಘಡ ಸಂಭವಿಸಿದರೆ ಇಂದಿಗೂ ಅನ್ಯರನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ಇದೆ. ಮತ್ತೊಂದು ವಿಪರ್ಯಾಸ ಅಂದರೆ, 740 ಬೆಡ್‌ಗಳನ್ನು ಹೊಂದಿರುವ ಈ ಆಸ್ಪತ್ರೆಯಲ್ಲಿ ಅಗ್ನಿನಂದಕ ಸಿಲಿಂಡರ್ ಇರುವುದು ಕೇವಲ 40 ಮಾತ್ರ. ಜಿಲ್ಲೆಗೆ ಅತಿಹೆಚ್ಚು ರಾಜಕೀಯ ಪ್ರಾತಿನಿಧ್ಯವೇನೋ ಇದೆ. ರಾಜಕೀಯವಾಗಿ ಇಷ್ಟೆಲ್ಲ ಅವಕಾಶ ಸಿಕ್ಕರೂ ಆಸ್ಪತ್ರೆಗೆ ಅತ್ಯಾಧುನಿಕ ವ್ಯವಸ್ಥೆ ಕಲ್ಪಿಸಲು ಜನಪ್ರತಿನಿಧಿಗಳು ಇಚ್ಚಾಶಕ್ತಿ ತೋರಿಸುತ್ತಿಲ್ಲ ಎಂಬುದು ಜನರ ಆರೋಪ.

ಕೊರೊನಾ​​ ಆಸ್ಪತ್ರೆಗಳಲ್ಲಿ ಅಗ್ನಿ ಸುರಕ್ಷತೆ

ಎರಡು ತಿಂಗಳ ಹಿಂದೆ ಬಳ್ಳಾರಿ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲೇ ಅಗ್ನಿ ಅವಘಡ ಸಂಭವಿಸಿತ್ತು. ಇಲಾಖೆಯಲ್ಲೇ ಈ ರೀತಿ ಎಡವಟ್ಟಾದರೆ ಆಸ್ಪತ್ರೆಗಳ ಇನ್ನೆಷ್ಟು ಅನಾಹುತಗಳು ಸಂಭವಿಸಬಹುದು ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಈ ಕುರಿತು ಎಚ್ಚೆತ್ತುಕೊಂಡ ಅಧಿಕಾರಿಗಳು ಕೋವಿಡ್ ಆಸ್ಪತ್ರೆಗಳಲ್ಲಿ ಅಗ್ನಿ ಅವಘಡ ತಡೆಗೆ ಕ್ರಮ ವಹಿಸುವಂತೆ ಸೂಚಿಸಿದ್ದರು. ಶಿವಮೊಗ್ಗದ ಇತಿಹಾಸದಲ್ಲೇ ಖಾಸಗಿ ನರ್ಸಿಂಗ್ ಹೋಂ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಯಾವುದೇ ಅಗ್ನಿ ದುರಂತ ಸಂಭವಿಸಿಲ್ಲ. ಇದು ಶುಭ ಸುದ್ದಿಯಾದರೂ ಎಚ್ಚರಿಕೆ ಇರಲೇಬೇಕು. ಸ್ವಲ್ಪ ಎಡವಟ್ಟಾದರೂ ಅನಾಹುತ ತಪ್ಪಿದ್ದಲ್ಲ.

ಮೈಸೂರಿನಲ್ಲಿ ಜಿಲ್ಲಾ ಕೋವಿಡ್ ಕೇಂದ್ರಗಳು, ಕೋವಿಡ್​ ಕೇರ್ ಸೆಂಟರ್​ಗಳಲ್ಲಿ ಅಗ್ನಿ ಸುರಕ್ಷತೆಗಳನ್ನು ಆರೋಗ್ಯಾಧಿಕಾರಿಗಳ ತಂಡ ತಪಾಸಣೆ ನಡೆಸಿದೆ. ಮಂಗಳೂರಿನಲ್ಲಿಯೂ ಸಹ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇನ್ನು ಆಸ್ಪತ್ರೆಗಳಲ್ಲಿ ಅತ್ಯಾಧುನಿಕ ಅಗ್ನಿನಂದಕ ಸಿಲಿಂಡರ್ ಅಳವಡಿಸದೇ ಇದ್ದರೆ ಅಹಮದಾಬಾದ್ ಘಟನೆ ಮರುಕಳಿಸುವುದರಲ್ಲಿ ಅನುಮಾನವಿಲ್ಲ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.