ETV Bharat / city

ಕಳ್ಳತನವಾದಾಗ ಮೊದಲು FIR ದಾಖಲಿಸಿ‌ ತ್ವರಿತವಾಗಿ ತನಿಖೆ ನಡೆಸಿ: ಕಮಲ್‌ ಪಂತ್​​

ಯಾವ ರೀತಿಯ ಕಳ್ಳತನ ನಡೆದರೂ ಕಡ್ಡಾಯವಾಗಿ ಎಫ್ಐಆರ್ ದಾಖಲಿಸಿಕೊಂಡು‌ ತನಿಖೆ ನಡೆಸಿ ಪ್ರಕರಣ ಭೇದಿಸಿ ಎಂದು ಪೊಲೀಸರಿಗೆ ಕಮಲ್​ ಪಂತ್​ ಖಡಕ್ ಸೂಚನೆ ನೀಡಿದ್ದಾರೆ.

Kamal Pant
ಕಮಲ್‌ ಪಂತ್​​
author img

By

Published : Nov 26, 2020, 2:52 PM IST

ಬೆಂಗಳೂರು: ನಗರದಲ್ಲಿ ಕಳ್ಳತನದ ಘಟನೆಗಳು ನಡೆದಾಗ ಮೊದಲು ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸಬೇಕು. ದೂರುದಾರರಿಗೆ ಇ-ಲಾಸ್ಟ್ ಪೋರ್ಟಲ್ ಮೂಲಕ ದೂರು ನೀಡಿ ಎಂಬ ಸಲಹೆಯನ್ನು ಕೊನೆಗಾಣಿಸಬೇಕು ಎಂದು ನಗರ ಪೊಲೀಸ್ ಆಯುಕ್ತ ಕಮಲ್‌ ಪಂತ್ ನಗರದ ಎಲ್ಲಾ‌ ವಿಭಾಗದ ಡಿಸಿಪಿಗಳ‌ ಮುಖಾಂತರ ಇನ್ಸ್​ಪೆಕ್ಟರ್​​ಗಳಿಗೆ ತಾಕೀತು ಮಾಡಿದ್ದಾರೆ.

ಹಲವು ಮಾದರಿಯ ಕಳ್ಳತನ ನಡೆದಾಗ‌ ಆನ್​​ಲೈನ್ ಮೂಲಕ ಇ-ಲಾಸ್ಟ್ ಆ್ಯಪ್​ನಲ್ಲಿ ದೂರು ನೀಡಿ ಎಂದು ಠಾಣಾಧಿಕಾರಿಗಳು ದೂರುದಾರರಿಗೆ ಸಲಹೆ‌ ನೀಡುತ್ತಿದ್ದರು.‌ ಇದರಂತೆ‌‌‌ ಆನ್​​ಲೈನ್​​ನಲ್ಲಿ ದೂರು ದಾಖಲಾದರೂ‌ ಪ್ರಕರಣಗಳನ್ನು ಭೇದಿಸುವಲ್ಲಿ ಪೊಲೀಸರು ವಿಫಲವಾಗುತ್ತಿದ್ದರು.‌ ಇದರಿಂದ‌ ಪೊಲೀಸರ ವಿರುದ್ಧ ಕಳ್ಳತನಕ್ಕೆ‌ ಒಳಗಾದ ಮಾಲೀಕರು ಅಸಮಾಧಾನ ಹೊರಹಾಕಿದ್ದರು.

Kamal Pant
ಕಮಲ್‌ ಪಂತ್​​ ಸೂಚನೆ

ಕಳೆದ ಶನಿವಾರ ಕಮಲ್‌ ಪಂತ್​ರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಈ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬಂದಿದ್ದವು. ಇದರಿಂದ ಎಚ್ಚೆತ್ತ ಪೊಲೀಸ್​ ಆಯುಕ್ತರು ಇನ್ನು‌ ಮುಂದೆ ಯಾವ ರೀತಿಯ ಕಳ್ಳತನ ನಡೆದರೂ ಕಡ್ಡಾಯವಾಗಿ ಎಫ್ಐಆರ್ ದಾಖಲಿಸಿಕೊಂಡು‌ ತನಿಖೆ ನಡೆಸಿ ಪ್ರಕರಣ ಭೇದಿಸಬೇಕು. ಸಾರ್ವಜನಿಕರಿಗೆ ಸುಖಾಸುಮ್ಮನೆ ಆನ್​​ಲೈನ್​​​ನಲ್ಲಿ ದೂರು ನೀಡಿ ಎಂಬ ಸಲಹೆ ಕೊಡದಂತೆ ನಗರದ ಎಲ್ಲಾ ಠಾಣಾಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.