ಬೆಂಗಳೂರು : ಬಿಡಿಎ ಭ್ರಷ್ಟ ಅಧಿಕಾರಿಗಳಿಗೆ ಬಂಧನ ಭೀತಿ ಎದುರಾಗಿದೆ. ಭ್ರಷ್ಟ ಬಿಡಿಎ ಅಧಿಕಾರಿಗಳು ಹಾಗೂ ಸೈಟ್ ಪಡೆದವರ ಮೇಲೆ ಇದೀಗ ಎಫ್ಐಆರ್ ದಾಖಲು ಮಾಡಲಾಗಿದೆ. ಅಕ್ರಮವಾಗಿ ನಿವೇಶನ ಹಂಚಿಕೆ ಸಂಬಂಧ ಶೇಷಾದ್ರಿಪುರಂ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

ಹೊಸಕರೆಹಳ್ಳಿ ಗ್ರಾಂ ಸರ್ವೆ ನಂಬರ್ 89, 90, 91 ಮತ್ತು 94 ಸೈಟ್ ಹಂಚಿಕೆಯಲ್ಲಿ ಭಾರಿ ಅಕ್ರಮವಾಗಿದೆ. ಹೀಗಾಗಿ ಅಕ್ರಮ ಸೈಟ್ ಹಂಚಿಕೆ ಸಂಬಂಧ ಶೇಷಾದ್ರಿ ಪುರಂ ಠಾಣೆಯಲ್ಲಿ ಕೆಎಎಸ್ ಹಾಗೂ ಬಿಡಿಎ ಸಿಬ್ಬಂದಿ ಮೇಲೆ ಎಫ್ಐಆರ್ ದಾಖಲಸಲಾಗಿದೆ ಎನ್ನಲಾಗಿದೆ.
ಈ ಎಫ್ಐಆರ್ನಿಂದ ಕೆಎಎಸ್ ಅಧಿಕಾರಿ ಅನಿಲ್ ಕುಮಾರ್, ಭಾಸ್ಕರ್, ಡಾ.ಸುಧಾ, ಮುಂತಾದ ಅಧಿಕಾರಿಗಳಿಗೆ ಸಂಕಷ್ಟ ಎದುರಾಗಿದೆ. ಕೆಎಎಸ್ ಹಾಗೂ ಸಿಬ್ಬಂದಿ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.