ETV Bharat / city

ಹಿಂದಿನ ಮೈತ್ರಿ ನಾಯಕರಿಗೆ ಶುರುವಾಯ್ತು ಕಂಟಕ: ದಾಖಲಾಯ್ತು ಎಫ್ಐಆರ್​​​​

2019ನೇ ಸಾಲಿನ ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದ ಸಮಯದಲ್ಲಿ ಮೈತ್ರಿ ಸರ್ಕಾರದ ಮುಖಂಡರು ಆದಾಯ ತೆರಿಗೆ ಇಲಾಖೆ ಬಳಿ ಪ್ರತಿಭಟನೆ ಮಾಡಿದ್ದರು. ಈ ಕುರಿತು ಎ.ಮಲ್ಲಿಕಾರ್ಜುನ ದೂರು ದಾಖಲಿಸಿದ್ದು, ಹಿಂದಿನ ಮೈತ್ರಿ ನಾಯಕರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಎಫ್ಐಆರ್
ಎಫ್ಐಆರ್
author img

By

Published : Nov 28, 2019, 6:42 PM IST

ಬೆಂಗಳೂರು: 2019ನೇ ಸಾಲಿನ ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದ ಸಮಯದಲ್ಲಿ ಮೈತ್ರಿ ಸರ್ಕಾರದ ಮುಖಂಡರು ಆದಾಯ ತೆರಿಗೆ ಇಲಾಖೆ ಬಳಿ ಪ್ರತಿಭಟನೆ ಮಾಡಿದ್ದರು. ಈ ಕುರಿತು ಎ.ಮಲ್ಲಿಕಾರ್ಜುನ ದೂರು ದಾಖಲಿಸಿದ್ದು, ಹಿಂದಿನ ಮೈತ್ರಿ ನಾಯಕರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಎ.ಮಲ್ಲಿಕಾರ್ಜುನ ದೂರು
ಎ.ಮಲ್ಲಿಕಾರ್ಜುನ ದೂರು

ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರ ಮೇಲೆ ಆದಾಯ ತೆರಿಗೆ ಇಲಾಖೆಯವರು ದಾಳಿ ನಡೆಸಿದ್ದನ್ನ ಖಂಡಿಸಿ ಹಿಂದಿನ ಮೈತ್ರಿ ನಾಯಕರು ಪ್ರತಿಭಟನೆ ನಡೆಸಿದ್ದರು. ಆದರೆ ಪೊಲೀಸರು ಎಫ್​ಐಆರ್ ದಾಖಲಿಸದೇ ಇರುವ ಹಿನ್ನೆಲೆ ಎ.ಮಲ್ಲಿಕಾರ್ಜುನ ಎಂಬುವವರು ಜನಪ್ರತಿನಿಧಿಗಳ ವಿಶೇಷ ನ್ಯಾಯಲಯದಲ್ಲಿ ದೂರು ದಾಖಲಿಸಿದ್ರು. ಸದ್ಯ ನ್ಯಾಯಾಲಯದ ಆದೇಶದ ಮೇರೆಗೆ ಹಿಂದಿನ ಮೈತ್ರಿ ಸರ್ಕಾರದ ಮುಖಂಡರಾದ ಮಾಜಿ ಸಿಎಂ ಹೆಚ್‌ಡಿಕೆ, ಡಾ. ಜಿ.ಪರಮೇಶ್ವರ್,‌ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಡಿ.ಕೆ.ಶಿವಕುಮಾರ್, ಸಾ.ರಾ. ಮಹೇಶ್, ಡಿ.ಸಿ.ತಮ್ಮಣ್ಣ, ಮುನಿರತ್ನ ನಾಯ್ಡು ವಿರುದ್ಧ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಘಟನೆ ಹಿನ್ನೆಲೆ:

27/03/2019ರಂದು ಕರ್ನಾಟಕದ ಅಂದಿನ ಮುಖ್ಯಮಂತ್ರಿಗಳಾಗಿದ್ದ ಹೆಚ್.ಡಿ.ಕುಮಾರಸಾಮಿ ಅವರು ತೆರಿಗೆ ಇಲಾಖೆಯ ದಾಳಿ‌ ಖಂಡಿಸಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಮಾಡಿದ್ದಾರೆ ಎನ್ನುವ ಆರೋಪವಿದೆ. ಈ ಬಗ್ಗೆ ಪೊಲೀಸರು ಸರಿಯಾದ ತನಿಖೆ ನಡೆಸದ ಕಾರಣ ಎ.ಮಲ್ಲಿಕಾರ್ಜುನ ಜನಪ್ರತಿನಿಧಿಗಳ ವಿಶೇಷ ನ್ಯಾಯಲಯದಲ್ಲಿ ದೂರು ದಾಖಲಿಸಿದ್ರು. ನ್ಯಾಯಾಲಯ ಪೊಲೀಸರ ಕ್ರಮ ಪ್ರಶ್ನಿಸಿ ಎಫ್ಐಆರ್ ದಾಖಲಾಗದೆ ಇರಲು ಕಾರಣವೇನು?, ಮುಂದಿನ ತಿಂಗಳೊಳಗೆ ದೋಷಾರೋಪಪ ಪಟ್ಟಿ ಸಲ್ಲಿಸುವಂತೆ ತನಿಖಾಧಿಕಾರಿಗೆ ಸೂಚಿಸಿತ್ತು. ‌ಸದ್ಯಕ್ಕೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶದ ಮೇರೆಗೆ ಎಫ್ಐಆರ್ ದಾಖಲಾಗಿದೆ.

Intro:ಹಿಂದಿನ ಮೈತ್ರಿ ಸರ್ಕಾರ ನಾಯಕರಿಗೆ ಶುರುವಾಯ್ತು ಕಂಟಕ
ಕೊನೆಗು ದಾಖಲಾಯ್ತು ಎಫ್ಐ ಆರ್

ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರ ಮೇಲೆ ಆದಾಯ ತೆರಿಗೆ ಇಲಾಖೆಯವರು ದಾಳಿ ನಡೆಸಿದ್ದ ನ್ನ ಖಂಡಿಸಿ ‌2019 ನೇ ಸಾಲಿನ ಸಾರ್ವತ್ರಿಕ ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದ ಸಮಯದಲ್ಲಿ ಮೈತ್ರಿ ಸರ್ಕಾರದ ಮುಖಂಡರು ಆದಾಯ ತೆರಿಗೆ ಇಲಾಖೆ ಕಚೇರಿ ಬಳಿ ಪ್ರತಿಭಟನೆ ಮಾಡಿದ್ದರು.

ಆದರೆ ಪೊಲಿಸರು ಎಫ್ ಐಆರ್ ದಾಖಲಿಸದೆ ಇರುವ ಹಿನ್ನೆಲೆ ಎ. ಮಲ್ಲಿಕಾರ್ಜುನ ಎಂಬುವವರು ಜನಪ್ರತಿನಿಧಿ ನ್ಯಾಯಲಯದ ಲ್ಲಿ ದೂರು ದಾಖಲಿಸಿದ್ರು .ಸದ್ಯ ನ್ಯಾಯಾಲಯ ಆದೇಶದ ಮೇರೆಗೆ ಹಿಂದಿನ ಮೈತ್ರಿ ಸರ್ಕಾರದ ಮುಖಂಡರಾದ ಮಾಜಿ ಸಿಎಂ ಹೆಚ್‌ಡಿಕೆ, ಡಾ. ಜಿ. ಪರಮೇಶ್ವರ್,‌ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಡಿಕೆಶಿವಕುಮಾರ್, ಸಾರಾ ಮಹೇಶ್, ಡಿಸಿ ತಮ್ಮಣ್ಣ, ಮುನಿರತ್ನ ನಾಯ್ಡು ವಿರುದ್ಧ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಆಗಿ ತನೀಕೆ ಮುಂದುವರೆದಿದೆ.

ಹಿನ್ನೆಲೆ

27/03/2019 ರಂದು ಕರ್ನಾಟಕ ರಾಜ್ಯದ ಹಿಂದಿನ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸಾಮಿ ಅವರು ತೆರಿಗೆ ಇಲಾಖೆಯ ದಾಳಿ‌ ಖಂಡಿಸಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿ,ಸಾರ್ವಜನಿಕ ಸುಗಮ ಸಂಚಾರಕ್ಕೆ ಅಡ್ಡಿ
ಮಾಡಿದ್ದರು..

ನಂತ್ರ ಈ ಬಗ್ಗೆ ಪೊಲೀಸರು ಸರಿಯಾದ ರೀತಿ ತನಿಖೆ ನಡೆಸದ ಕಾರಣ ಎ. ಮಲ್ಲಿಕಾರ್ಜುನ ಎಂಬುವವರು ಜನಪ್ರತಿನಿಧಿ ನ್ಯಾಯಲಯದ ಲ್ಲಿ ದೂರು ದಾಖಲಿಸಿದ್ರು. ಇನ್ನು ನ್ಯಾಯಲಯ ಪೊಲೀಸರ ಕ್ರಮ ಪ್ರಶ್ನೀಸಿ ಎಫ್ಐ ಆರ್ ದಾಖಲಾಗದೆ ಇರಲು ಕಾರಣವೇನು .ಚಾರ್ಜ್ ಶೀಟ್ ಸಲ್ಲಿಸೋಕೆ ೬ ತಿಂಗಳು ಕೊಡಬೇಕ ಮುಂದಿನ ತಿಂಗಳೊಳಗೆ ದೋಷಾರೋಪಣೆ ಪಟ್ಟಿ ಸಲ್ಲಿಸಲು ತನಿಖಾಧಿಕಾರಿಗೆ ವಾರ್ನಿಂಗ್ ಮಾಡಿದ್ದರು.‌ಸದ್ಯ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ದ ಮೇರೆಗೆ ಎಫ್ಐ ಆರ್ ದಾಖಲಾಗಿದೆ

Body:KN_bNG_09_KUMARSWMI_7204498Conclusion:KN_bNG_09_KUMARSWMI_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.