ETV Bharat / city

ನಶೆಯಲ್ಲಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ: ಕೊಟ್ಟಿರುವ ಸಾಲ ಕೇಳಿದ್ದಕ್ಕೆ ತಳ್ಳಿ ಕೊಲೆ

ಪಾರ್ಟಿಯ ನಶೆಯ ಗುಂಗಿನ ಸಮಯದಲ್ಲಿ ಸ್ನೇಹಿತ ಹಳೆ ಸಾಲ ಹಿಂತಿರುಗಿಸಲು ಹೇಳಿದ್ದಕ್ಕೆ ತಳ್ಳಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿ ನಡೆದಿದೆ.

murder
ಕೊಲೆ
author img

By

Published : Jul 11, 2022, 8:52 PM IST

ಬೆಂಗಳೂರು : ಕೊಟ್ಟಿರುವ ಸಾಲ ಕೇಳಿದ ಅಂತಾ ಎಣ್ಣೆ ಏಟಲ್ಲಿ ವ್ಯಕ್ತಿಯೊಬ್ಬ ತನ್ನ ಗೆಳೆಯನನ್ನೇ ತಳ್ಳಿ ಕೊಲೆ ಮಾಡಿರುವ ಘಟನೆ ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಿನ್ನೆ ತಡರಾತ್ರಿ ನಡೆದಿರೋ ಜಗಳದಲ್ಲಿ ಸುಬ್ರಮಣಿ ಎಂಬಾತನನ್ನು ಆತನ ಸ್ನೇಹಿತರಾದ ನಾಗರಾಜ್ ಮತ್ತು ವಸಂತ್ ಎಂಬುವರು ಕೊಲೆ ಮಾಡಿದ್ದಾರೆ.

ಕೊಲೆಯಾದ ಸುಬ್ರಮಣಿ ಆರೋಪಿಗಳಾದ ನಾಗರಾಜ್ ಮತ್ತು ವಸಂತ್ ಕಳೆದ ಹತ್ತಾರು ವರ್ಷಗಳಿಂದಲೂ ಗೆಳೆಯರು. ಮೂವರೂ ವೃತ್ತಿಯಲ್ಲಿ ಟೈಲರ್​ಗಳಾಗಿದ್ದರು. ಆಗಾಗ ಸ್ನೇಹಿತರು ಸೇರಿಕೊಂಡು ಪಾರ್ಟಿ ಮಾಡುತ್ತಿದ್ದರು. ನಿನ್ನೆಯೂ ಅದೇ ರೀತಿ ಪಾರ್ಟಿ ಮಾಡಿದ್ದಾರೆ.

ಪಾರ್ಟಿ ಮುಗಿಸಿ ಮನೆಗೆ ಬರುವ ವೇಳೆ ಸುಬ್ರಮಣಿ ಹಳೆ ಸಾಲದ ಬಾಕಿ 10 ಸಾವಿರ ಕೊಡುವಂತೆ ಒತ್ತಾಯಿಸಿ ಒಂದೇಟು ಹೊಡೆದಿದ್ದಾನೆ. ಇದಕ್ಕೆ ಪ್ರತಿಯಾಗಿ ನಾಗರಾಜ್​ ಸುಬ್ರಮಣಿಯನ್ನು ಜೋರಾಗಿ ತಳ್ಳಿದ್ದಾನೆ. ಕಳಗೆ ಬಿದ್ದ ಸುಬ್ರಮಣಿಗೆ ರಕ್ತಸ್ರಾವ ಆಗಿದೆ. ಆಸ್ಪತ್ರೆಗೆ ಸೇರಿಸುವ ಒಳಗೆ ಸುಬ್ರಮಣಿ ಮರಣ ಹೊಂದಿದ್ದಾನೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಕೊಡಿಗೇಹಳ್ಳಿ ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ : ವಿದ್ಯಾರ್ಥಿಗಳ ಮಧ್ಯೆ ಮಾರಾಮಾರಿ: ಒಬ್ಬ ಸ್ಟೂಡೆಂಟ್​​ ದುರ್ಮರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.