ETV Bharat / city

ವೈದ್ಯಕೀಯ ಕೋರ್ಸ್‌ ಮಾಡುವ ಆಕಾಂಕ್ಷಿಗಳಿಗೆ ಸರ್ಕಾರದಿಂದ ಸಿಹಿ ಸುದ್ದಿ.. ಸಚಿವ ಡಾ. ಕೆ.ಸುಧಾಕರ್ ಹೇಳಿದ್ದೇನು? - ಬೆಂಗಳೂರು.

ಯಾವುದೇ ಕಾರಣಕ್ಕೂ ವೈದ್ಯಕೀಯ ಕೋರ್ಸ್‌ಗಳ ಶುಲ್ಕ ಹೆಚ್ಚಳ ಮಾಡುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಸ್ಪಷ್ಟಪಡಿಸಿದ್ದಾರೆ.

fee for medical courses does not increase - Minister Dr.K Sudhakar says in Bangalore
ವೈದ್ಯಕೀಯ ಕೋರ್ಸ್‌ಗಳ ಶುಲ್ಕ ಹೆಚ್ಚಳ ಮಾಡುವುದಿಲ್ಲ - ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್
author img

By

Published : Nov 9, 2021, 12:29 PM IST

Updated : Nov 9, 2021, 1:38 PM IST

ಬೆಂಗಳೂರು: ಮೆಡಿಕಲ್ ಕಾಲೇಜು ಒಕ್ಕೂಟ ತಮ್ಮ ಪಟ್ಟು ಬಿಡದೆ ವೈದ್ಯಕೀಯ ಕೋರ್ಸ್‌ಗಳ ಶುಲ್ಕ ಹೆಚ್ಚಳ ಮಾಡುವಂತೆ ಬೇಡಿಕೆ ಇಟ್ಟಿರುವ ಬೆನ್ನಲ್ಲೇ ಈ ಬಗ್ಗೆ ಪ್ರತಿಕ್ರಿಯಿಸಿರುವ ವೈದ್ಯಕೀಯ ಹಾಗೂ ಆರೋಗ್ಯ ಸಚಿವ ಸುಧಾಕರ್, ಕೋವಿಡ್ ನಿಂದಾಗಿ ಜನ-ಸಾಮಾನ್ಯರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಶುಲ್ಕ ಹೆಚ್ಚಳ ಮಾಡುವುದರಿಂದ ಇನ್ನಷ್ಟು ಹೊರೆಯಾಗಲಿದೆ ಎಂದು ಹೇಳಿದ್ದಾರೆ.

ವೈದ್ಯಕೀಯ ಕೋರ್ಸ್‌ ಮಾಡುವ ಆಕಾಂಕ್ಷಿಗಳಿಗೆ ಸರ್ಕಾರದಿಂದ ಸಿಹಿ ಸುದ್ದಿ.. ಸಚಿವ ಡಾ. ಕೆ.ಸುಧಾಕರ್ ಹೇಳಿದ್ದೇನು?
ಕಳೆದ ಬಾರಿಯೇ ಕೋವಿಡ್ ನಡುವೆಯುೂ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಶುಲ್ಕ ಹೆಚ್ಚಳ ಮಾಡಲಾಗಿತ್ತು. ಈ ವರ್ಷವೂ ಹೆಚ್ಚುವರಿ ಮಾಡಲು ಆಗುವುದಿಲ್ಲ. ತಮ್ಮ ಅಭಿಪ್ರಾಯವನ್ನ ತಿಳಿಸಿದ್ದೇವೆ. ಆದರೆ ಅವರು ಅದಕ್ಕೆ ಒಪ್ಪಿಲ್ಲ. ಇಂದು ಮತ್ತೊಂದು ಸುತ್ತಿನ ಸಭೆ ಇದ್ದು, ಇನ್ನೊಮ್ಮೆ ಚರ್ಚೆ ಮಾಡಲಾಗುವುದು. ನಮ್ಮ ಸರ್ಕಾರದ ನಿಲುವು ಸ್ಪಷ್ಟವಾಗಿದ್ದು, ಪೋಷಕರಿಗೆ ಹೊರೆ ಮಾಡಲು ಇಷ್ಟವಿಲ್ಲ. ಹೀಗಾಗಿ ಈ ವರ್ಷ ವೈದ್ಯಕೀಯ ಶುಲ್ಕ ಹೆಚ್ಚಳ ಮಾಡುವುದಿಲ್ಲ ಅಂತ ಸಚಿವರು ಸ್ಪಷ್ಟ ಪಡಿಸಿದ್ದಾರೆ‌‌.
ಒಕ್ಕೂಟದ ನಿಲುವೇನು? ಫೀ ಹೆಚ್ಚಳಕ್ಕೆ ಒತ್ತಾಯ ಯಾಕೆ?
ಮೆಡಿಕಲ್ ಕಾಲೇಜು ಒಕ್ಕೂಟದವರು ಶೇ.30 ರಷ್ಟು ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಕಳೆದ ವರ್ಷ ಸಾಂಕ್ರಾಮಿಕ ಸೋಂಕಿನ ಆರ್ಥಿಕ ಸಂಕಷ್ಟದಲ್ಲೂ ಶೇ.15 ರಷ್ಟು ಶುಲ್ಕ ಹೆಚ್ಚಳ ಮಾಡಲಾಗಿತ್ತು‌. ಈ ನಡುವೆ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ದುಪ್ಪಟ್ಟು ಶುಲ್ಕ ಹೆಚ್ಚಳಕ್ಕೆ ಪ್ರಸ್ತಾವನೆಯನ್ನ ಸರ್ಕಾರ ಮುಂದಿಟ್ಟಿವೆ. ಕೋವಿಡ್‌ನಿಂದಾಗಿ ಸರ್ಕಾರ ನೀಡುವ ಮಾನದಂಡಗಳ ಅನ್ವಯ ಸೇವೆ ಒದಗಿಸುವುದು ಕಷ್ಟವಾಗಿದ್ದು, ಕಾಲೇಜು ನಿರ್ವಹಣೆ ಎಂದಿಗಿಂತ ದುಬಾರಿಯಾಗಿದೆ. ಈನಿಟ್ಟಿನಲ್ಲಿ ಶುಲ್ಕ ಹೆಚ್ಚಳ ಮಾಡುವುದು ಅನಿರ್ವಾಯ ಅನ್ನೋದು ಕಾಲೇಜುಗಳ ವಾದ. ಒಟ್ಟಾರೆ ಇಂದು ನಡೆಯಲಿರುವ ಸಭೆಯಲ್ಲಿ ಸಚಿವರು ಮತ್ತೊಮ್ಮೆ ಒಕ್ಕೂಟದ ಮನವೊಲಿಸುವ ಕೆಲಸ ಮಾಡಲಿದ್ದಾರೆ.

Last Updated : Nov 9, 2021, 1:38 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.