ETV Bharat / city

ಆನ್​ಲೈನ್​ ಕ್ಲಾಸ್​​ ಮುಂದುವರೆದರೆ ಮಾತ್ರ ಶುಲ್ಕ ಕಡಿತ : ರೂಪ್ಸಾ ನಿರ್ಧಾರ - ರುಪ್ಸಾ ರಾಜ್ಯಾಧ್ಯಕ್ಷ ಲೋಕೇಶ್​ ತಾಳಿಕಟ್ಟೆ

ಖಾಸಗಿ ಶಾಲೆಗಳ ಶುಲ್ಕ ಗೊಂದಲ ಹಾಗೂ ಖಾಸಗಿ ಶಾಲೆಗಳು ಮತ್ತು ಪೋಷಕರ ನಡುವೆ ಫೀಸ್ ಫೈಟ್ ಮುಂದುವರೆದಿದೆ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಖಾಸಗಿ ಶಾಲಾ-ಕಾಲೇಜು ಆಡಳಿತ ಮಂಡಳಿಗಳ ಒಕ್ಕೂಟದಿಂದ ಇಂದು ಮಹತ್ವದ ಸಭೆ ನೆಡೆಸಿ 2021-22ನೇ ಸಾಲಿನ ಶುಲ್ಕ ವಿಚಾರವಾಗಿ ಪ್ರಮುಖ ನಿರ್ಣಯಗಳನ್ನ ಕೈಗೊಳ್ಳಲಾಗಿದೆ..

fee-cuts-only-if-the-online-class-continues-rupsa-statement
ಶಾಲಾ ಕಾಲೇಜು ಶುಲ್ಕ ನಿರ್ಧಾರ
author img

By

Published : Jun 20, 2021, 5:07 PM IST

ಬೆಂಗಳೂರು : 12 ಖಾಸಗಿ ಶಾಲಾ-ಕಾಲೇಜು ಸಂಘಟನೆಗಳ ಒಕ್ಕೂಟ ಸರ್ಕಾರದ ನಿರ್ಧಾರಕ್ಕೆ ಬದ್ಧವಾಗಿದೆ. ಆನ್‌ಲೈನ್ ಕ್ಲಾಸ್ ಮುಂದುವರದರೆ ಮಾತ್ರ ಶುಲ್ಕ ಕಡಿತ ಮಾಡುತ್ತೇವೆ. ಭೌತಿಕ ತರಗತಿ ಶುರುವಾದರೆ ಪೋಷಕರು 100% ಶುಲ್ಕ ಪಾವತಿಸಲೇಬೇಕು ಎಂದು ರುಪ್ಸಾ ರಾಜ್ಯಾಧ್ಯಕ್ಷ ಲೋಕೇಶ್​ ತಾಳಿಕಟ್ಟೆ ಹೇಳಿದರು.

ಖಾಸಗಿ ಶಾಲೆಗಳ ಶುಲ್ಕ ಗೊಂದಲ ಹಾಗೂ ಖಾಸಗಿ ಶಾಲೆಗಳು ಮತ್ತು ಪೋಷಕರ ನಡುವೆ ಫೀಸ್ ಫೈಟ್ ಮುಂದುವರೆದಿದೆ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಖಾಸಗಿ ಶಾಲಾ-ಕಾಲೇಜು ಆಡಳಿತ ಮಂಡಳಿಗಳ ಒಕ್ಕೂಟದಿಂದ ಇಂದು ಮಹತ್ವದ ಸಭೆ ನೆಡೆಸಿ 2021-22ನೇ ಸಾಲಿನ ಶುಲ್ಕ ವಿಚಾರವಾಗಿ ಪ್ರಮುಖ ನಿರ್ಣಯಗಳನ್ನ ಕೈಗೊಂಡರು.

ಆನ್​ಲೈನ್​ ಕ್ಲಾಸ್​​ ಮುಂದುವರೆದರೆ ಮಾತ್ರ ಶುಲ್ಕ ಕಡಿತ

ರುಪ್ಸಾ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ಮಾತನಾಡಿ, ಸರ್ಕಾರದ ನಿರ್ಧಾರಕ್ಕೆ ನಾವು ಬದ್ದ ಹಾಗೂ ನಿಗದಿತ ಶುಲ್ಕ ಸ್ವೀಕರಿಸಲು ನಾವು ಸಿದ್ದ. ಕೋವಿಡ್ನಿಂದ ಮರಣ ಹೊಂದಿದ ಪೋಷಕರ ಮಕ್ಕಳಿಗೆ ನಮ್ಮ ಸಂಘಟನೆಗಳ ಅಡಿಯಲ್ಲಿ ಬರುವ ಶಾಲೆಗಳಲ್ಲಿ ಉಚಿತ ಶಿಕ್ಷಣ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಆನ್​ಲೈನ್​ ಕ್ಲಾಸ್​​ ಮುಂದುವರೆದರೆ ಮಾತ್ರ ಶುಲ್ಕ ಕಡಿತ : ಸರ್ಕಾರ ಶುಲ್ಕ ಕಡಿತದ ಆದೇಶ ಪ್ರಕಟಿಸಲಿ, ನಾವು ಸರ್ಕಾರದ ನಿರ್ಧಾರಕ್ಕೆ ಬದ್ದವಾಗಿರುತ್ತೇವೆ. 12 ಖಾಸಗಿ ಸಂಘಟನೆಗಳ ಒಕ್ಕೂಟದಿಂದ ನಿರ್ಧಾರಕ್ಕೆ ಬಂದಿದ್ದೇವೆ. ಆನ್ಲೈನ್ ಕ್ಲಾಸ್ ಮುಂದುವರದರೆ ಮಾತ್ರ ಶುಲ್ಕ ಕಡಿತ ಮಾಡುತ್ತೇವೆ. ಭೌತಿಕ ತರಗತಿ ಶುರುವಾದರೆ ಪೋಷಕರು 100% ಶುಲ್ಕ ಪಾವತಿಸಲೇಬೇಕು ಎಂದು ಲೋಕೇಶ್ ತಾಳಿಕಟ್ಟೆ ಹೇಳಿಕೆ ನೀಡಿದರು.

ರುಪ್ಸಾ ಸಂಘಟನೆ ಹೆಸರು ದುರ್ಬಳಕೆ : ಕಳೆದ 3 ತಿಂಗಳ ಹಿಂದೆಯೇ ಈ ಬಗ್ಗೆ ದೂರು ನೀಡಲಾಗಿತ್ತು. ಸದ್ಯ ಸಂಘಟನೆ ಹೆಸರು ಬದಲಾವಣೆ ವಿಚಾರ ಕೋರ್ಟ್​ನಲ್ಲಿದೆ. ಹಾಗಾಗಿ, ನಾನು ಹೆಚ್ಚಿಗೆ ಏನೂ ಮಾತಾಡೋದಿಲ್ಲ. ಇನ್ನು, 15 ರಿಂದ 20 ದಿನಗಳಲ್ಲಿ ಈ ಸಂಘಟನೆಯನ್ನ ಯಾರು ಬಳಸಬೇಕು ಎಂಬ ತೀರ್ಮಾನವಾಗಲಿದೆ. ಕೋರ್ಟ್ ನಿರ್ದೇಶನ ಬರುವತನಕ ರುಪ್ಸಾ ಹೆಸರು ಬಳಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಸಭೆಯಲ್ಲಿ ಪಾಲ್ಗೊಂಡ ರಾಜ್ಯದ ಪ್ರಮುಖ ಸಂಘಟನೆಗಳು

  • ರುಪ್ಸಾ ಕರ್ನಾಟಕ ಖಾಸಗಿ ಶಾಲೆಗಳ ಒಕ್ಕೂಟ.
  • ಬೆಂಗಳೂರು ಖಾಸಗಿ ಶಾಲಾ ಆಡಳಿತ ಮಂಡಳಿ.
  • ಕರ್ನಾಟಕ ಖಾಸಗಿ ಪಿಯುಸಿ ಮ್ಯಾನೇಜ್ಮೆಂಟ್ ಅಸೋಸಿಯೇಷನ್.
  • ಕರ್ನಾಟಕ ಸಿಬಿಎಸ್‌ಇ ಸ್ಕೂಲ್ ಮ್ಯಾನೇಜ್ಮೆಂಟ್ ಅಸೋಸಿಯೇಷನ್.
  • ಕರ್ನಾಟಕ ಐಸಿಎಸ್‌ಸಿ ಮ್ಯಾನೇಜ್ಮೆಂಟ್ ಅಸೋಸಿಯೇಷನ್.
  • ಕಲ್ಯಾಣ ಕರ್ನಾಟಕ ಖಾಸಗಿ ಶಾಲಾ ಒಕ್ಕೂಟ.
  • ಉತ್ತರ ಕರ್ನಾಟಕ ಖಾಸಗಿ ಶಾಲಾ ಆಡಳಿತ ಮಂಡಳಿ.
  • ಅಲ್ಪ ಸಂಖ್ಯಾತ ಖಾಸಗಿ ಶಾಲಾ ಆಡಳಿತ ಮಂಡಳಿ ಒಕ್ಕೂಟ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.