ದೇವನಹಳ್ಳಿ: ಫಾಸ್ಟ್ ಟ್ಯಾಗ್ ಕಟ್ಟುವ ವಿಚಾರಕ್ಕೆ ಟೋಲ್ ಸಿಬ್ಬಂದಿ ಮತ್ತು ಕಾರಿನ ಚಾಲಕನ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಟೋಲ್ ಸಿಬ್ಬಂದಿ ಕಾರಿನ ಗಾಜನ್ನು ಪುಡಿ ಪುಡಿ ಮಾಡಿರುವ ಘಟನೆ ಏರ್ಪೋರ್ಟ್ ರಸ್ತೆಯ ಸಾದಹಳ್ಳಿ ಬಳಿಯ ಟೋಲ್ ಬಳಿ ನಡೆದಿದೆ.
ಚಾಲಕ ಮಹಮ್ಮದ್ ಗೌಸ್ ಟೋಲ್ ಮೂಲಕ ಹಾದು ಹೋಗುವಾಗ ಆತನನ್ನ ತಡೆದ ಟೋಲ್ ಸಿಬ್ಬಂದಿ ನಿನ್ನ ಫಾಸ್ಟ್ ಟ್ಯಾಗ್ ಅಕೌಂಟ್ ಇಲ್ಲದೆ ಈ ಲೈನ್ನಲ್ಲಿ ಬರ್ತೀಯಾ ಎಂದು ಗಲಾಟೆ ಮಾಡಿದ್ದಾರೆ. ಈ ನಡುವೆ ಚಾಲಕ ಮತ್ತು ಟೋಲ್ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದು ಕಾರಿನ ಗಾಜುಗಳನ್ನ ಪುಡಿ ಪುಡಿ ಮಾಡಿದ್ದಾರೆ. ಅಲ್ಲದೇ ಚಾಲಕನ ಮೊಬೈಲ್ ಕಸಿದು, ಜೀವ ಬೆದರಿಕೆ ಸಹ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಟೋಲ್ ಸಿಬ್ಬಂದಿ ವಿರುದ್ಧ ಕ್ಯಾಬ್ ಚಾಲಕ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ.