ETV Bharat / city

8 ತಿಂಗಳಾದರೂ ಮುಗಿಯದ ಫಾಸ್ಟ್ಯಾಗ್​​ ಸಮಸ್ಯೆ: ಜನರಿಗೆ ಸಿಗದ ಪರಿಹಾರ - ವಾಹನ ದಟ್ಟಣೆ

ಟೋಲ್‌ಗೇಟ್‌ಗಳಲ್ಲಿ ಫಾಸ್ಟ್ಯಾಗ್ ಅನ್ನು ಭಾರತೀಯ ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರ ಜ.15ರಿಂದ ಕಡ್ಡಾಯಗೊಳಿಸಿದೆ. ಈ ವ್ಯವಸ್ಥೆ ಕಡ್ಡಾಯಗೊಳಿಸಿ 8 ತಿಂಗಳಾದರೂ ಎಷ್ಟೋ ಮಂದಿಗೆ ಅದರ ಮಾಹಿತಿಯೇ ಗೊತ್ತಿಲ್ಲ. ಹಾಗೆಯೇ ಇನ್ನೂ ಕೆಲವರು ಫಾಸ್ಟ್ಯಾಗ್ ಅನ್ನು ಪಡೆದುಕೊಂಡೇ ಇಲ್ಲ. ಇವುಗಳಿಂದಾಗಿ ಟೋಲ್​ ಕೇಂದ್ರಗಳಲ್ಲಿ ವಿವಿಧ ಸಮಸ್ಯೆಗಳು ಉದ್ಭವವಾಗುತ್ತಿವೆ.

fast tag confusion over unfinished
ಸಂಚಾರ ದಟ್ಟಣೆ
author img

By

Published : Aug 22, 2020, 4:00 PM IST

ಬೆಂಗಳೂರು: ಟೋಲ್​​ಗಳಲ್ಲಿ ವಂಚನೆ, ವಾಹನ ದಟ್ಟಣೆ ನಿಯಂತ್ರಿಸಲು ಮತ್ತು ಡಿಜಿಟಲೀಕರಣಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ಕೇಂದ್ರ ಸರ್ಕಾರವು ಫಾಸ್ಟ್ಯಾಗ್ ವ್ಯವಸ್ಥೆಯನ್ನು​ ಜಾರಿಗೆ ತಂದಿದೆ. ಆದರೆ, ಅಲ್ಲಿ ಕಂಡು ಬರುತ್ತಿರುವ ಸಮಸ್ಯೆಗಳಿಂದ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ಸವಾರರು ಹೈರಾಣಾಗಿದ್ದಾರೆ. ಇದು ತುರ್ತು ಸೇವೆಗಳಿಗೂ ತೀವ್ರ ಅಡ್ಡಿಪಡಿಸುತ್ತಿದೆ. ಅಲ್ಲದೇ ಜಟಾಪಟಿಗೂ ಕಾರಣವಾಗುತ್ತಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್​​ಗಳ ಫಾಸ್ಟ್ಯಾಗ್​​ನಲ್ಲಿ ಆಗಾಗ್ಗೆ ತಾಂತ್ರಿಕ ದೋಷ ಕಾಣಿಸಿಕೊಳ್ಳುತ್ತಿದ್ದು, ವಾಹನ ಸವಾರರು ನಗದು ಶುಲ್ಕ ಪಾವತಿಸಿ ಮುಂದೆ ಸಾಗಬೇಕಿದೆ. ನಗದು ಪಾವತಿಸುವಲ್ಲಿಯೂ ತಾಂತ್ರಿಕ ಸಮಸ್ಯೆ ಎದುರಾಗುತ್ತಿದ್ದು, ಸರಾಗವಾಗಿ ಸಾಗುವ ಸವಾರರಿಗೆ ಇದು ಅಡಚಣೆ ಉಂಟಾಗಿದೆ. ಹೀಗಾಗಿ, ಕಿಲೋ ಮೀಟರ್​ಗಟ್ಟಲೆ ದಟ್ಟಣೆ ಉಂಟಾಗಿರುತ್ತದೆ. ಈ ವೇಳೆ ಇಂಧನ ಮತ್ತು ಚಾಲಕರ ಅಮೂಲ್ಯ ಸಮಯ ವ್ಯರ್ಥವಾಗುತ್ತಿದೆ ಎನ್ನುತ್ತಾರೆ ಸಾರ್ವಜನಿಕರು.

ಅದೇ ರೀತಿ ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಯ ಟೋಲ್‌ಗಳ ಫಾಸ್ಟ್ಯಾಗ್​​​ನಲ್ಲೂ ಸಮಸ್ಯೆ ಕಾಣಿಸಿಕೊಂಡಿದೆ. ಈ ಅವ್ಯವಸ್ಥೆಗೆ ಸವಾರರು ಮತ್ತು ಟೋಲ್​​ ಸಿಬ್ಬಂದಿ ನಡುವೆ ಜಟಾಪಟಿಗೂ ಕಾರಣವಾಗುತ್ತಿದೆ. ಇತ್ತ ತುರ್ತು ಸೇವೆಗಳಿಗೂ ಅಡ್ಡಿಯಾಗುತ್ತಿದೆ. ಅದಲ್ಲದೇ, ಹಳ್ಳಿಗಳಿಂದ ಬರುವ ಎಷ್ಟೋ ಮಂದಿಗೆ ಫಾಸ್ಟ್ಯಾಗ್​​ನ ಅರಿವೇ ಇರುವುದಿಲ್ಲ. ಇದು ಕೂಡ ಸಮಸ್ಯೆಗೆ ಪ್ರಮುಖ ಕಾರಣ ಅಂತಾರೆ ಚಾಲಕರು.

ಫಾಸ್ಟ್ಯಾಗ್​​ ಸಮಸ್ಯೆ

ರಾಷ್ಟ್ರೀಯ ಹೆದ್ದಾರಿ-7 ಸಾದಹಳ್ಳಿ ಬಳಿ ಟೋಲ್ ಇದೆ. ಬೆಂಗಳೂರಿನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಆಂಧ್ರ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಈ ಟೋಲ್​ನಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ಫಾಸ್ಟ್ಯಾಗ್​​ಗೂ ಮುನ್ನ ಬಂದು - ಹೋಗಲು ಒಮ್ಮೆ ಟೋಲ್ ಸುಂಕ ಕಟ್ಟಿದ್ದರೆ ಸಾಕಿತ್ತು. ಆದರೀಗ ಬರುವಾಗ ಮತ್ತು ಹೋಗುವಾಗಲೂ ಹಣ ಕಡಿತವಾಗತ್ತಿದೆ. ಈ ಮೂಲಕ ಜನರಿಂದ ದುಪ್ಪಟ್ಟು ಹಣ ಪೀಕಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಗಮನ ಹರಿಸಿ ಕಡಿವಾಣ ಹಾಕಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.