ETV Bharat / city

ಫಾರ್ಮ್ ಹೌಸ್​ಗಳತ್ತ ಮುಖ ಮಾಡ್ತಿರುವ ಸಿಲಿಕಾನ್​ ಸಿಟಿ ಮಂದಿ - ಫಾರ್ಮ್ ಹೌಸ್​ಗಳತ್ತ ಬೆಂಗಳೂರು ಜನತೆ

ವಿಶಾಲವಾದ ರಸ್ತೆ ಸಂಪರ್ಕ, ವಾಹನ ನಿಲುಗಡೆ, ನೀರು, ವಿದ್ಯುತ್, ಕ್ರೀಡೆ ಹಾಗೂ ಫಿಟ್ನೆಸ್, ಹೊರಾಂಗಣ ಜಿಮ್, ಕ್ಲಬ್‌ಹೌಸ್, ಈಜುಕೊಳ, ಕಾಟೇಜ್‌ಗಳು, ಸೆಕ್ಯೂರಿಟಿ ಸೇರಿ ಇನ್ನೂ ಹಲವಾರು ಸೌಲಭ್ಯಗಳತ್ತ ಒತ್ತು ನೀಡುತ್ತಿರುವ ಬಿಲ್ಡರ್‌ಗಳು ಹೆಚ್ಚು ಗ್ರಾಹಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ..

farm houses attracts Bangalore people
ಫಾರ್ಮ್ ಹೌಸ್​ಗಳತ್ತ ಸಿಲಿಕಾನ್​ ಸಿಟಿ ಮಂದಿ
author img

By

Published : Jan 8, 2022, 7:32 PM IST

ಬೆಂಗಳೂರು : ಹೆಚ್ಚುತ್ತಿರುವ ಜನಸಂಖ್ಯೆ, ವಾಹನ ದಟ್ಟಣೆಯ ಕಿರಿಕಿರಿ, ಕಲುಷಿತಗೊಳ್ಳುತ್ತಿರುವ ಪರಿಸರ ಮಾಲಿನ್ಯದಿಂದಾಗಿ ಹೆಚ್ಚಿನವರು ನಗರದಿಂದ ದೂರ ನೆಲೆಸಲು ಬಯಸುತ್ತಿದ್ದಾರೆ. ಹಾಗಾಗಿ, ಬೆಂಗಳೂರಿನ ಸುತ್ತಮುತ್ತಲಿನ ಫಾರ್ಮ್ ಹೌಸ್​ಗಳಿಗೆ ಬೇಡಿಕೆ ಹೆಚ್ಚಿದೆ.

ಬೆಂಗಳೂರಿನಲ್ಲಿ ನೆಲೆಸಿರುವ ಒಂದಿಷ್ಟು ಮಂದಿ ಮೈಸೂರು, ಕೊಡಗು, ದಾಂಡೇಲಿ ಮತ್ತಿತರೆ ಪ್ರದೇಶಗಳಲ್ಲಿ ಜಮೀನು ಖರೀದಿಸಿ ಫಾರ್ಮ್ ಹೌಸ್‌ಗಳನ್ನು ಮಾಡಿಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸಿಲಿಕಾನ್ ಸಿಟಿಯ ಬಹುತೇಕ ಜನರು ನಗರದಿಂದ ಹೊರಗೆ ವಾಸಿಸಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಹಾಗಾಗಿ, ಬೆಂಗಳೂರಿನಿಂದ 30-50 ಕಿ.ಮೀ ದೂರದಲ್ಲಿ ಜಮೀನು ಖರೀದಿಸಲು ಮುಂದಾಗಿದ್ದಾರೆ.

ಬೆಂಗಳೂರು ಜನತೆ ಫಾರ್ಮ್‌ಹೌಸ್‌ಗಳತ್ತ ಆಕರ್ಷಿತರಾಗಿರುವುದನ್ನು ಅರಿತ ಹಲವು ಬಿಲ್ಡರ್‌ಗಳು ಬೆಂಗಳೂರು ಹೊರ ವಲಯಗಳಲ್ಲಿ ವಿಭಿನ್ನ ಶೈಲಿಯ ಫಾರ್ಮ್‌ಹೌಸ್ ನಿರ್ಮಾಣ ಮಾಡಲು ಮುಂದಾಗಿದ್ದಾರೆ.

ಸ್ವಚ್ಛಂದ ಗಾಳಿ, ಹಚ್ಚ ಹಸಿರಿನಿಂದ ಕೂಡಿರುವ ಪರಿಸರ, ಮನೆಯ ಸುತ್ತಲೂ ವಿಸ್ತಾರವಾದ ಜಾಗ ಹೊಂದಿರುವ ಫಾರ್ಮ್‌ ಹೌಸ್, ವಿಲ್ಲಾ ಹಾಗೂ ಮನೆಗಳು ತಲೆ ಎತ್ತುತ್ತಿವೆ. ಬೆಂಗಳೂರಿನ ಹೊರವಲಯಗಳಲ್ಲಿ ಫಾರ್ಮ್​​ ಹೌಸ್‌ಗಳ ಮೇಲೆ ಹೂಡಿಕೆ ಮಾಡಲು ಹಲವು ಉದ್ಯಮಿಗಳು ಉತ್ಸಾಹ ತೋರಿದ್ದಾರೆ. ಕೋಟ್ಯಂತರ ರೂ. ಹೂಡಿಕೆ ಮಾಡುತ್ತಿದ್ದಾರೆ.

ಜನರ ಅಭಿರುಚಿಯನ್ನು ಗಮನದಲ್ಲಿಟ್ಟುಕೊಂಡು ಫಾರ್ಮ್‌ ಹೌಸ್‌ನಲ್ಲಿ ಹಲವಾರು ಆಧುನಿಕ ಸವಲತ್ತುಗಳನ್ನು ಒದಗಿಸಲಾಗುತ್ತಿದೆ. ಪ್ರಶಸ್ತ ಸ್ಥಳ ಗುರುತಿಸಿ, ತಾಂತ್ರಿಕ ನೈಪುಣ್ಯತೆಯನ್ನು ಬಳಸಿಕೊಂಡು ಅತ್ಯುತ್ತಮ ಗುಣಮಟ್ಟದ ಯೋಜನೆ ರೂಪಿಸಿ ಗ್ರಾಹಕರ ಕನಸಿನ ಮನೆ ನನಸು ಮಾಡಲು ಬಿಲ್ಡರ್‌ಗಳು ಮುಂದಾಗಿದ್ದಾರೆ.

ವಿಶಾಲವಾದ ರಸ್ತೆ ಸಂಪರ್ಕ, ವಾಹನ ನಿಲುಗಡೆ, ನೀರು, ವಿದ್ಯುತ್, ಕ್ರೀಡೆ ಹಾಗೂ ಫಿಟ್ನೆಸ್, ಹೊರಾಂಗಣ ಜಿಮ್, ಕ್ಲಬ್‌ಹೌಸ್, ಈಜುಕೊಳ, ಕಾಟೇಜ್‌ಗಳು, ಸೆಕ್ಯೂರಿಟಿ ಸೇರಿ ಇನ್ನೂ ಹಲವಾರು ಸೌಲಭ್ಯಗಳತ್ತ ಒತ್ತು ನೀಡುತ್ತಿರುವ ಬಿಲ್ಡರ್‌ಗಳು ಹೆಚ್ಚು ಗ್ರಾಹಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

ಇದನ್ನೂ ಓದಿ: ವೀಕೆಂಡ್ ಕರ್ಫ್ಯೂಗೆ ಬೆಂಗಳೂರು ಜನರಿಂದ ಬಂತು ಒಳ್ಳೆ ರೆಸ್ಪಾನ್ಸ್ : ಕಟ್ಟುನಿಟ್ಟಿನ ಕ್ರಮಕ್ಕೆ ಮನೆಯಲ್ಲೇ ಜನರು ಸೆಟ್ಲ್

ಕೆಲ ಪ್ರದೇಶಗಳಲ್ಲಿ ಈಗಲೇ ಫಾರ್ಮ್‌ ಹೌಸ್ ಖರೀದಿಸಿದರೆ ಮುಂದಿನ 5 ವರ್ಷಗಳಲ್ಲಿ ಇದರ ಬೆಲೆ ದುಪ್ಪಟ್ಟಾಗಲಿದೆ. ಈ ಜಾಗದ ಸುತ್ತಮುತ್ತ ಹೊಸ ವಸತಿ ಯೋಜನೆಗಳ ಕಾಮಗಾರಿಯೂ ನಡೆಯುತ್ತಿದೆ. ಇದರಿಂದಾಗಿ ಸಿಲಿಕಾನ್ ಸಿಟಿಯ ಹೊರವಲಯದಲ್ಲಿರುವ ಜಾಗಕ್ಕೆ ಹೆಚ್ಚಿನ ಬೇಡಿಕೆ ಬರುತ್ತಿದೆ.

ಫಾರ್ಮ್‌ ಹೌಸ್ ನಿರ್ಮಾಣಕ್ಕೆ ಮುಂದಾಗುತ್ತಿರುವುದರಿಂದ ಹೊರವಲಯಗಳ ಜಾಗಕ್ಕೆ ಬೆಲೆ ಏರಿಕೆಯಾಗುವ ಸಾಧ್ಯತೆಗಳಿವೆ. ಡೆವಲಪರ್​ಗಳು ಕೈಗೆಟುಕುವ ದರದಲ್ಲಿ ವಿವಿಧ ವಸತಿ ಯೋಜನೆ ನಿರ್ಮಿಸುತ್ತಿದ್ದಾರೆ.

ರಾಜಕಾರಣಿಗಳು, ಸಿನಿಮಾ ನಟರಿಗೂ ಫಾರ್ಮ್ ಹೌಸ್ ಆಕರ್ಷಣೆ : ಬಹುತೇಕ ರಾಜಕಾರಣಿಗಳು ಹಾಗೂ ಸಿನಿಮಾ ನಟರನ್ನು ಫಾರ್ಮ್ ಹೌಸ್‌ಗಳು ಆಕರ್ಷಿಸಿವೆ. ಬಹುತೇಕರು ತೋಟ, ಫಾರ್ಮ್ ಹೌಸ್‌ಗಳನ್ನು ಖರೀದಿಸಿದ್ದಾರೆ. ನಗರದಲ್ಲಿ ಅಪಾರ್ಟ್‌ಮೆಂಟ್, ಮನೆ ಖರೀದಿಸುವುದಕ್ಕಿಂತಲೂ ಫಾರ್ಮ್ ಹೌಸ್ ಕಡೆ ಸಿರಿವಂತರು ಆಕರ್ಷಿತರಾಗುತ್ತಿರುವುದು ಬದಲಾವಣೆಯ ವಿಚಾರ ಎಂತಲೇ ಹೇಳಬಹುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.