ಬೆಂಗಳೂರು: ಕೊರೊನಾ ಮಹಾಮಾರಿಯಿಂದಾಗಿ ಸಂಕಷ್ಟ ಶುರುವಾಗಿದೆ. ಕೊರೊನಾ ಹರಡದಂತೆ ತಡೆಯಲು ಲಾಕ್ಡೌನ್ ಹೇರಲಾಗಿದ್ದು, ಈ ಅವಧಿಯಲ್ಲಿ ಬಹುತೇಕ ಮಂದಿ ಮನೆಯಲ್ಲಿದ್ದು, ಕುಟುಂಬದವರೊಂದಿಗೆ ಬೆರೆಯಲು ಬಳಸಿಕೊಂಡರೆ, ಇನ್ನೂ ಕೆಲವರು ಕೌಟುಂಬಿಕ ಸಮಸ್ಯೆಗಳನ್ನು ಸೃಷ್ಟಿಸಿಕೊಂಡು ನೆಮ್ಮದಿ ಕಳೆದುಕೊಂಡಿದ್ದಾರೆ.
ಇಂತಹ ಕೌಟುಂಬಿಕ ಕಲಹಗಳನ್ನ ತಡೆಗಟ್ಟಲು ಸರ್ಕಾರ ಹಾಗೂ ಪೊಲೀಸ್ ಇಲಾಖೆ ಬಹಳಷ್ಟು ಮುಂಜಾಗ್ರತಾ, ಕ್ರಮಗಳನ್ನು ಕೈಗೊಂಡಿದೆ. ಆದರೂ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ಕೌಟುಂಬಿಕ ಪರಿಹಾರ, ವನಿತಾ ಸಹಾಯವಾಣಿಗೆ ಇಲ್ಲಿಯವರೆಗೆ ಒಟ್ಟು 620 ಕರೆಗಳು ಬಂದಿದ್ದು, ಇದರಲ್ಲಿ ಕೌಟುಂಬಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಸುಮಾರು 193 ಪ್ರಕರಣಗಳು ದಾಖಲಾಗಿವೆ.
2. ಮತ್ತೊಂದೆಡೆ ಲಾಕ್ಡೌನ್ ಸಂದರ್ಭದಲ್ಲಿ ಗಂಡ, ಹೆಂಡತಿ ಮನೆಯಲ್ಲೇ ಇರಬೇಕಾದ ಪರಿಸ್ಥಿತಿ ಎದುರಾದಾಗ, ಪ್ರತಿ ದಿನ ಗಂಡ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗುವಂತೆ ಪತ್ನಿಗೆ ಹಿಂಸೆ ನೀಡುತ್ತಿದ್ದಾನೆ ಎಂದು ಮಹಿಳೆ ಕರೆ ಮಾಡಿದ್ದಳು.
3. ಮತ್ತೊಂದೆಡೆ ಕೊರೊನಾ ಸೋಂಕು ಸಿಲಿಕಾನ್ ಸಿಟಿಗೆ ವಕ್ಕರಿಸುವ ಮೊದಲೇ ಮದುವೆಯಾಗಿ ಗಂಡನ ಮನೆಗೆ ಹೋದಾಗ ಅತ್ತೆ, ಮಾವ, ಗಂಡ ವರದಕ್ಷಿಣೆಗೆ ಪೀಡಿಸಿ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಸದ್ಯ ಇಂತಹ ಸುಮಾರು 193 ಪ್ರಕರಣಗಳು ದಾಖಲಾಗಿದೆ.
ಈ ಕುರಿತು ಮಾತನಾಡಿರುವ ವನಿತಾ ಸಹಾಯವಾಣಿ ಮುಖ್ಯಸ್ಥೆ ರಾಣಿ ಶೆಟ್ಟಿ, ಲಾಕ್ಡೌನ್ ಆದ ನಂತರ ಮಹಿಳೆಯರ ಮೇಲಿನ ದೌರ್ಜನ್ಯ, ಕುಟುಂಬದಲ್ಲಿ ತೊಂದರೆ ಜಾಸ್ತಿಯಾಗಿದ್ದು, ನಗರ ಆಯುಕ್ತರ ಕಚೇರಿಯಲ್ಲಿರುವ ನಮಗೆ ಕರೆಗಳು ಬಹಳಷ್ಟು ಬಂದಿದೆ. ಹೀಗಾಗಿ ಮುಂಜಾನೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಸಮಸ್ಯೆಗಳನ್ನ ನಾವು ಕೇಳ್ತಿವಿ. ಲಾಕ್ಡೌನ್ ಮೊದಲು ಕುಡಿದು ಗಲಾಟೆ ಮಾಡುವ ಪ್ರಕರಣ ಜಾಸ್ತಿ ಬರುತ್ತಿತ್ತು. ಈಗ ಮತ್ತೆ ಮದ್ಯ ಮಾರಾಟ ಪ್ರಾರಂಭವಾಗಿದೆ. ಮತ್ತೆ ಇಂತಹ ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆ ಇದೆ ಎಂದಿದ್ದಾರೆ.