ETV Bharat / city

ಸೆಪ್ಟೆಂಬರ್ ಅಂತ್ಯದಲ್ಲಿ COVID 3ನೇ ಅಲೆ.. ಸರ್ಕಾರಕ್ಕೆ ತಜ್ಞರ ಸಮಿತಿಯ ಶಿಫಾರಸುಗಳೇನು? - ಡಾ ದೇವಿ ಶೆಟ್ಟಿ ಕೊರೊನಾ ಮೂರನೇ ಅಲೆ ವರದಿ

ಡಾ.ದೇವಿ ಶೆಟ್ಟಿ ನೇತೃತ್ವದಲ್ಲಿ ಕೋವಿಡ್ ಮೂರನೇ ಅಲೆ ತಡೆಗಟ್ಟುವಿಕೆ ಮತ್ತು ನಿರ್ವಹಣೆಗಾಗಿ 16 ಸದಸ್ಯರ ಉನ್ನತ ಮಟ್ಟದ ತಜ್ಞರ ಸಮಿತಿ ಮಕ್ಕಳ ಮೇಲೆ ಸಂಭವನೀಯ ಪರಿಣಾಮವನ್ನು ಎದುರಿಸಲು ವಿವರವಾದ ಕ್ರಮಗಳನ್ನು ಒಳಗೊಂಡ ಮಧ್ಯಂತರ ವರದಿಯನ್ನು ಇಂದು ಸಲ್ಲಿಸಿದೆ. 91 ಪುಟಗಳ ವರದಿಯಲ್ಲಿ ಮಕ್ಕಳಲ್ಲಿ ಕೋವಿಡ್ ಅನ್ನು ನಿರ್ವಹಿಸುವಲ್ಲಿನ ಸವಾಲುಗಳನ್ನು ವಿವರಿಸಿದ್ದು, ಸೋಂಕಿನ ಪರಿಣಾಮವನ್ನು ನಿಗ್ರಹಿಸಲು ರಾಜ್ಯ ಸರ್ಕಾರವು ಕೈಗೊಳ್ಳಬೇಕಾದ ಕ್ರಮಗಳನ್ನು ಸೂಚಿಸಿ ಅಗತ್ಯ ಶಿಫಾರಸ್ಸು ಮಾಡಿದೆ.

corona-third-wave-in-late-september-get-ready-for-kids-treatment
ಕರ್ನಾಟಕ ಸರ್ಕಾರ
author img

By

Published : Jun 22, 2021, 7:23 PM IST

Updated : Jun 22, 2021, 7:36 PM IST

ಬೆಂಗಳೂರು: ಸೆಪ್ಟೆಂಬರ್ ಅಂತ್ಯಕ್ಕೆ ಅಥವಾ ಅಕ್ಟೋಬರ್ ಆರಂಭದಲ್ಲಿ ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಎದುರಾಗಲಿದೆ ಎಂದು ಅಂದಾಜಿಸಿ ತಜ್ಞರ ಸಮಿತಿ ಮಧ್ಯಂತರ ವರದಿ ನೀಡಿದ್ದು, ಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ಅಗತ್ಯ ತಯಾರಿ ಮಾಡಿಕೊಳ್ಳುವಂತೆ ಶಿಫಾರಸ್ಸು ಮಾಡಿದೆ. ವಿದ್ಯಾರ್ಥಿಗಳಿಗೆ 2 ಲಕ್ಷ ರೂ.ಗಳ ಆರೋಗ್ಯ ವಿಮೆ ಮಾಡಿಸಲು ಸಹ ಸಲಹೆ ನೀಡಿದೆ.

ಹೃದ್ರೋಗ ತಜ್ಞ ಡಾ.ದೇವಿ ಶೆಟ್ಟಿ ನೇತೃತ್ವದಲ್ಲಿ ಕೋವಿಡ್ ಮೂರನೇ ಅಲೆ ತಡೆಗಟ್ಟುವಿಕೆ ಮತ್ತು ನಿರ್ವಹಣೆಗಾಗಿ 16 ಸದಸ್ಯರ ಉನ್ನತ ಮಟ್ಟದ ತಜ್ಞರ ಸಮಿತಿ ಮಕ್ಕಳ ಮೇಲೆ ಸಂಭವನೀಯ ಪರಿಣಾಮವನ್ನು ಎದುರಿಸಲು ವಿವರವಾದ ಕ್ರಮಗಳನ್ನು ಒಳಗೊಂಡ ಮಧ್ಯಂತರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. 91 ಪುಟಗಳ ವರದಿಯಲ್ಲಿ ಮಕ್ಕಳಲ್ಲಿ ಕೋವಿಡ್ ಅನ್ನು ನಿರ್ವಹಿಸುವಲ್ಲಿನ ಸವಾಲುಗಳನ್ನು ವಿವರಿಸಿದ್ದು, ಸೋಂಕಿನ ಪರಿಣಾಮವನ್ನು ನಿಗ್ರಹಿಸಲು ರಾಜ್ಯ ಸರ್ಕಾರವು ಕೈಗೊಳ್ಳಬೇಕಾದ ಕ್ರಮಗಳನ್ನು ಸೂಚಿಸಿ ಅಗತ್ಯ ಶಿಫಾರಸ್ಸು ಮಾಡಿದೆ.

ಪ್ರಮುಖ ಶಿಫಾರಸುಗಳು

  • ಮೂರನೇ ಅಲೆಯಿಂದ ರಾಜ್ಯದಲ್ಲಿ 3.4 ಲಕ್ಷ ಮಕ್ಕಳು ಬಾಧಿತರಾಗುವ ಸಾಧ್ಯತೆ ಇದೆ.
  • ವೈದ್ಯಕೀಯ ಕಾಲೇಜುಗಳು, ತಾಲೂಕು ಮತ್ತು ಜಿಲ್ಲಾ ಮಟ್ಟದ ಆಸ್ಪತ್ರೆಗಳಲ್ಲಿ ನವಜಾತ ಶಿಶುಗಳಿಗೆ ಐಸಿಯು, ಪೀಡಿಯಾಟ್ರಿಕ್ ವಾರ್ಡ್ ಹಾಸಿಗೆ, ಪಿಐಸಿಯು ಹಾಸಿಗೆ ಹೆಚ್ಚಿಸಬೇಕು.
  • ಮಕ್ಕಳಿಗೆ ಸೀಮಿತವಾಗಿ ರಾಜ್ಯಾದ್ಯಂತ 27,000 ಹಾಸಿಗೆಗಳ ಅಗತ್ಯವಿದ್ದು, ವ್ಯವಸ್ಥೆ ಮಾಡಿಕೊಳ್ಳಬೇಕು.
  • ವೈದ್ಯಕೀಯ ಕ್ಷೇತ್ರದಲ್ಲಿ ಮಾನವಶಕ್ತಿಯ ತೀವ್ರ ಕೊರತೆಯಿದ್ದು, ವೈದ್ಯರು, ದಾದಿಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಯನ್ನು ಶೀಘ್ರದಲ್ಲಿಯೇ ನೇಮಿಸಿಕೊಳ್ಳಬೇಕು.
  • ಅಸ್ತಿತ್ವದಲ್ಲಿರುವ ಎಚ್‌ಡಿಯು ಅನ್ನು ಪೀಡಿಯಾಟ್ರಿಕ್ ಐಸಿಯುಗೆ ಅಪ್‌ಗ್ರೇಡ್ ಮಾಡಬೇಕು.
  • ಹಿಂದುಳಿದ ಜಿಲ್ಲೆಗಳಾದ ಕೊಪ್ಪಳ, ಕೋಲಾರ, ಚಿತ್ರದುರ್ಗ, ಯಾದಗಿರಿ, ಚಾಮರಾಜನಗರ ಮತ್ತು ಹಾವೇರಿಯಲ್ಲಿ 250 ಹಾಸಿಗೆಗಳು ಮತ್ತು ಕನಿಷ್ಠ 20 ಪಿಐಸಿಯು / ಎನ್‌ಐಸಿಯು ಹೊಂದಿರುವ ವಿಶೇಷ ಮಕ್ಕಳ ಆಸ್ಪತ್ರೆಗಳ ಅವಶ್ಯಕತೆ ಇದೆ.
  • ಆಸ್ಪತ್ರೆ ಆವರಣದಲ್ಲಿ ಆಮ್ಲಜನಕ ಸಾಂದ್ರಕಗಳು ಮತ್ತು ಅಗತ್ಯ ಸಿಬ್ಬಂದಿಯೊಂದಿಗೆ ತಾತ್ಕಾಲಿಕ ಸ್ಥಿರೀಕರಣ ಘಟಕಗಳನ್ನು ರಚಿಸಬೇಕು.
  • ಮೂರನೇ ಅಲೆ ನಿರ್ವಹಿಸಲು ಕನಿಷ್ಠ 3000 ಶಿಶುವೈದ್ಯರು ಈಗ ಅಸ್ತಿತ್ವದಲ್ಲಿರುವವರೊಂದಿಗೆ ಅಗತ್ಯವಿದ್ದು, ಕೂಡಲೇ ಅಷ್ಟು ಸಂಖ್ಯೆಯ ಸ್ವತಃ ಸೇವೆಗೆ ಮುಂದಾಗುವ ವೈದ್ಯರ ಬಳಕೆಗೆ ಮುಂದಾಗಬೇಕು.
  • ಮಕ್ಕಳನ್ನು ಅಪೌಷ್ಟಿಕತೆಯಿಂದ ಕಾಪಾಡಲು, ಮಕ್ಕಳ ಕಳ್ಳಸಾಗಣೆ ತಡೆಗೆ ಶಾಲೆಗಳನ್ನು ಪುನಃ ತೆರೆಯಬೇಕು, ದೈಹಿಕವಾಗಿ ಶಾಲೆಗೆ ಹಾಜರಾಗುವ ಎಲ್ಲ ಮಕ್ಕಳಿಗೆ ಕೋವಿಡ್ -19 ಆರೋಗ್ಯ ವಿಮೆಯನ್ನು 2 ಲಕ್ಷ ರೂ.ವರೆಗೆ ನೀಡಬೇಕು.
  • ಸಂಪೂರ್ಣ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಲಸಿಕೆ ಹಾಕಿದ ನಂತರ ಕಾಲೇಜುಗಳನ್ನು ಪ್ರಾರಂಭಿಸಬೇಕು.
  • ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಮಕ್ಕಳ ಮನೋಸ್ಥೈರ್ಯ ತುಂಬಲು ಮನೋವೈದ್ಯರ ನಿಯೋಜನೆ ಮಾಡಬೇಕು.
  • ಮಕ್ಕಳಿಗೆ ಕೋವಿಡ್ ಪರೀಕ್ಷಾ ವಿಧಾನಗಳಲ್ಲಿ ಬದಲಾವಣೆ ಅಗತ್ಯ.ವಯಸ್ಕರಲ್ಲಿ ಬಳಸುವ ಮೂಗಿನ ಮತ್ತು ಗಂಟಲು ಸ್ವ್ಯಾಬ್ ಸಂಗ್ರಹ ವಿಧಾನಗಳು ಮಕ್ಕಳಿಗೆ ಕಷ್ಟಕರ. ಮಕ್ಕಳು ಸಹಕರಿಸದಿರಬಹುದು. ಆದ್ದರಿಂದ, ಕ್ಷಿಪ್ರ ಆ್ಯಂಟಿಜೆನ್ ಪರೀಕ್ಷೆಯೊಂದಿಗೆ ಗಾರ್ಗ್ಲ್ ಆರ್ಟಿ-ಪಿಸಿಆರ್ (ಐಸಿಎಂಆರ್ ಅನುಮೋದಿಸಿದೆ) ಮತ್ತು ಲಾಲಾರಸ ಆರ್ಟಿ-ಪಿಸಿಆರ್ ಅನ್ನು ಸಮಿತಿ ಶಿಫಾರಸು ಮಾಡಿದೆ.
  • ವೈದ್ಯಕೀಯ ವ್ಯವಸ್ಥೆಯನ್ನು ನಿರ್ವಹಿಸಲು ಆಶಾ ಕಾರ್ಯಕರ್ತರು, ಎನ್‌ಜಿಒಗಳು, ಕಾರ್ಪೊರೇಟ್ ಕ್ಷೇತ್ರಗಳನ್ನು ತೊಡಗಿಸಿಕೊಂಡು ಸರ್ಕಾರದ ಮೇಲಿನ ಹೊರೆ ಕಡಿಮೆಯಾಗಿಸಿಕೊಳ್ಳಬಹುದು.
  • ಮಕ್ಕಳು ರಾಜ್ಯದ ಜನಸಂಖ್ಯೆಯ ಶೇ.34% ರಷ್ಟಿದ್ದಾರೆ. ಆದ್ದರಿಂದ ಸರ್ಕಾರವು ಖರೀದಿಸಬೇಕಾದ ಔಷಧಿಗಳು ಮತ್ತು ವೈದ್ಯಕೀಯ ಉಪಕರಣಗಳನ್ನು ವಿವರವಾದ ವರದಿಯಲ್ಲಿ ಉಲ್ಲೇಖಿಸಿದೆ.
  • ಮೊದಲನೇ ಅಲೆ ಮತ್ತು ಎರಡನೇ ಅಲೆಯ ಪ್ರಕರಣಗಳ ಸಂಖ್ಯೆ ನೋಡಿ ಬೆಡ್ ವ್ಯವಸ್ಥೆ ಮಾಡಿಕೊಳ್ಳಬೇಕು.
  • ಮುಂದಿನ 45 ದಿನಗಳಲ್ಲಿ ಸಮಿತಿಯ ಶಿಫಾರಸುಗಳ ಪ್ರಕಾರ ಮೂಲಸೌಕರ್ಯಗಳನ್ನು ಹೆಚ್ಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

Last Updated : Jun 22, 2021, 7:36 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.