ETV Bharat / city

ರಾಜ್ಯದಲ್ಲಿರುವ ಜಲಾಶಯಗಳ ಸಂರಕ್ಷಣೆ, ಭದ್ರತಾ ವ್ಯವಸ್ಥೆ ಬಗ್ಗೆ ತಜ್ಞರ ಸಲಹೆ ಏನು?

ವಿಧ್ವಂಸಕಾರಿ ಶಕ್ತಿಗಳ ಜೊತೆಗೆ ಹವಾಮಾನ ವೈಪರೀತ್ಯದಿಂದ ಹಲವು ಭಾರಿ ಪ್ರವಾಹ ಅಪ್ಪಳಿಸಿದ ಹಿನ್ನೆಲೆಯಲ್ಲಿ ಜಲಾಶಯಗಳ ಸುರಕ್ಷತೆ ಬಗ್ಗೆ ಕೇಂದ್ರಕ್ಕೆ ಅತ್ಯಂತ ಆತಂಕ ಉಂಟಾಗಿತ್ತು. ಈ ನೆಲೆಯಲ್ಲಿ ವಸ್ತುಸ್ಥಿತಿ ಅಧ್ಯಯನ ನಡೆಸಿ ಸಂರಕ್ಷಣಾ ಸಂಸ್ಥೆ ಸ್ಥಾಪನೆ ಕಡ್ಡಾಯಗೊಳಿಸಿ ಸೂಚನೆ ನೀಡಿದೆ.

Expert advice on the protection and security of reservoirs in the state
ಜಲಾಶಯಗಳ ಸಂರಕ್ಷಣೆ ಭದ್ರತಾ ವ್ಯವಸ್ಥೆ
author img

By

Published : Apr 2, 2021, 9:29 PM IST

ಬೆಂಗಳೂರು: ರಾಜ್ಯದಲ್ಲಿರುವ ಜಲಾಶಯಗಳ ಭದ್ರತೆ ವಿಚಾರದಲ್ಲಿ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಪ್ರವಾಹ ಅಲ್ಲದೆ ಆಂತರಿಕ ಹಾಗೂ ಬಾಹ್ಯ ಬೆದರಿಕೆ ಮುನ್ಸೂಚನೆಗೆ ತಕ್ಕಂತೆ ಸಂರಕ್ಷಣೆ ಮತ್ತು ಬಿಗಿ ಭದ್ರತಾ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ. ಆದರೂ ಮತ್ತೊಮ್ಮೆ ಈ ವ್ಯವಸ್ಥೆಯನ್ನು ಪರಾಮರ್ಶೆ ಮಾಡುವುದು ಸೂಕ್ತವೆಂದು ನೀರಾವರಿ ತಜ್ಞರು ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಜಲಾಶಯಗಳೆಷ್ಟು? :

ಜಲ ಸಂಪನ್ಮೂಲ ಇಲಾಖೆಯಡಿ 75, ಸಣ್ಣ ನೀರಾವರಿ ಇಲಾಖೆಯಡಿ 135, ಕೆಪಿಸಿಎಲ್ ಅಧೀನದಲ್ಲಿ 15, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ 3 ಸೇರಿದಂತೆ ರಾಜ್ಯದಲ್ಲಿ ಒಟ್ಟು 231 ಜಲಾಶಯಗಳಿವೆ. 231 ಜಲಾಶಯಗಳ ಪೈಕಿ 44 ಜಲಾಶಯಗಳು 100 ವರ್ಷ ಪೂರ್ಣಗೊಳಿಸಿವೆ. ಸುರಕ್ಷತೆ ಜವಾಬ್ದಾರಿಯನ್ನು ಈ ಮೊದಲು ಜಲ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯೇ ನಿರ್ವಹಿಸುತ್ತಿತ್ತು. ಆದರೆ, ಡ್ಯಾಂ ಸಂರಕ್ಷಣೆ ಸಂಸ್ಥೆ ರಚನೆ ಕಡ್ಡಾಯವೆಂದು ಕೇಂದ್ರ ಸರ್ಕಾರ ಸೂಚನೆ ನೀಡಿದ ನಂತರ ಅನುಷ್ಠಾನಕ್ಕೆ ತರಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ವಿಶ್ವಬ್ಯಾಂಕ್ ನೆರವಿನ ಅಣೆಕಟ್ಟೆಗಳ ಪುನಶ್ಚೇತನ ಯೋಜನೆ (ಡಿಆರ್ ಐಪಿ) ಯಡಿ ಮೊದಲ ಹಂತದಲ್ಲಿ 750 ಕೋಟಿ ರೂ. ಗಳನ್ನು ಕೇಂದ್ರ ಸರ್ಕಾರ ನೀಡಿತ್ತು. ಎರಡನೇ ಹಂತದಲ್ಲಿ ಇಷ್ಟೇ ಪ್ರಮಾಣದ ನೆರವು ಪಡೆಯಲು ಡಿಎಸ್​ಒ ರಚಿಸುವುದು ಸರ್ಕಾರಕ್ಕೆ ಅನಿವಾರ್ಯವಾಗಿತ್ತು. ರಾಜ್ಯ ಯೋಜನಾ ಮೇಲ್ವಿಚಾರಣಾ ಘಟಕದ ಜೊತೆಗೆ ಸೂಚನೆಯಂತೆ ಡಿಎಸ್​ಒ ಸ್ಥಾಪಿಸಿದ್ದು, ನಿವೃತ್ತ ಮುಖ್ಯ ಇಂಜಿನಿಯರ್ ನೇತೃತ್ವದ ಪರಿಣತರ ಸಮಿತಿಯು ಕೇಂದ್ರ ಜಲ ಆಯೋಗದ ಮಾರ್ಗದರ್ಶನದಂತೆ ಕಾರ್ಯ ನಿರ್ವಹಿಸುತ್ತದೆ ಎಂದು ಮೂಲಗಳು ಹೇಳಿವೆ.

ಹಲವು ಪ್ರಕರಣಗಳಲ್ಲಿ ಡ್ರೋನ್​​ ಮೂಲಕ ಅಣೆಕಟ್ಟೆಗಳ ಚಿತ್ರೀಕರಣ ವಿಷಯ ಪ್ರಸ್ತಾಪವಾದ ನಂತರ ಸರ್ಕಾರ ಎಚ್ಚೆತ್ತುಕೊಂಡಿದೆ. ತಜ್ಞರು ನೀಡಿದ ಸಲಹೆಯಂತೆ ಸಂರಕ್ಷಣೆ ಮತ್ತು ಕಣ್ಗಾವಲು ವ್ಯವಸ್ಥೆ ಕುರಿತು ಮಾಹಿತಿ ತರಿಸಿಕೊಂಡು, ಅಗತ್ಯ ಸೂಚನೆ ನೀಡಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ವಿಧ್ವಂಸಕಾರಿ ಶಕ್ತಿಗಳ ಜೊತೆಗೆ ಹವಾಮಾನ ವೈಪರೀತ್ಯದಿಂದ ಹಲವು ಭಾರಿ ಪ್ರವಾಹ ಅಪ್ಪಳಿಸಿದ ಹಿನ್ನೆಲೆಯಲ್ಲಿ ಜಲಾಶಯಗಳ ಸುರಕ್ಷತೆ ಬಗ್ಗೆ ಕೇಂದ್ರಕ್ಕೆ ಅತ್ಯಂತ ಆತಂಕ ಉಂಟಾಗಿತ್ತು. ಈ ನೆಲೆಯಲ್ಲಿ ವಸ್ತುಸ್ಥಿತಿ ಅಧ್ಯಯನ ನಡೆಸಿ ಸಂರಕ್ಷಣಾ ಸಂಸ್ಥೆ ಸ್ಥಾಪನೆ ಕಡ್ಡಾಯಗೊಳಿಸಿ ಸೂಚನೆ ನೀಡಿದೆ. ರಾಜ್ಯದಲ್ಲಿರುವ ಜಲಾಶಯಗಳ ಸಂರಕ್ಷಣೆಗೆ ಕೇಂದ್ರದಿಂದ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಕೇಂದ್ರ ಸರ್ಕಾರ 19 ರಾಜ್ಯಗಳಲ್ಲಿರುವ 736 ಡ್ಯಾಂಗಳ ನಿರ್ವಹಣೆಗಾಗಿ ಯೋಜನೆಯನ್ನು ರೂಪಿಸಲಾಗಿದೆ. ಮುಂದಿನ 10 ವರ್ಷಗಳ ಕಾಲ ಡ್ಯಾಂಗಳನ್ನು ನಿರ್ವಹಣೆ ಮಾಡಲು ಹೊಸ ಯೋಜನೆ ರೂಪಿಸಲು ಈಗಾಗಲೇ ತೀರ್ಮಾನಿಸಿದೆ.

ಸಿಸ್ಟಮ್ ವೈಡ್ ಮ್ಯಾನೇಜೈಂಟ್ ವಿಧಾನದೊಂದಿಗೆ ದೇಶಾದ್ಯಂತ ಆಯ್ದ ಅಣೆಕಟ್ಟುಗಳ ಸುರಕ್ಷತೆ ಮತ್ತು ಕಾರ್ಯಾಚರಣೆಯ ಕಾರ್ಯಕ್ಷಮತೆಯನ್ನು ಸುಧಾರಿಸುವುದು ಯೋಜನೆಯ ಉದ್ದೇಶವಾಗಿದೆ. ಅಲ್ಲದೇ, ಡ್ಯಾಂಗಳ ಸುರಕ್ಷತೆ ಮತ್ತು ದೇಶದ ಜನರಿಗೆ ನೀರಿನ ಭದ್ರತೆ ಒದಗಿಸುವುದು, ಅಭಿವೃದ್ಧಿ ಕೆಲಸಗಳ ಮೂಲಕ ಉದ್ಯೋಗ ಸೃಷ್ಟಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಎರಡು ಹಂತಗಳಲ್ಲಿ ಯೋಜನೆ ಜಾರಿಗೊಳಿಸಲಾಗುವುದು. ಏಪ್ರಿಲ್ 2021ರಿಂದ ಮಾರ್ಚ್ 2031 ಜಾರಿಯಲ್ಲಿರುತ್ತದೆ.

ಯೋಜನೆಯಲ್ಲಿ ಸೇರಿಸಲಾದ ಅಣೆಕಟ್ಟುಗಳನ್ನು ಕೇಂದ್ರ ಏಜೆನ್ಸಿಗಳು ನಿರ್ವಹಿಸುತ್ತಿವೆ. ಸಂಬಂಧಿಸಿದ ರಾಜ್ಯ ಸರ್ಕಾರಗಳು ಸ್ಥಳೀಯವಾಗಿ ಅಣೆಕಟ್ಟು ನಿರ್ವಹಿಸುತ್ತಿವೆ. ಯೋಜನೆಗಾಗಿ ಅಣೆಕಟ್ಟುಗಳನ್ನು ಆಯಾ ರಾಜ್ಯ ಸರ್ಕಾರಗಳು ಗುರುತಿಸುತ್ತವೆ ಎಂದು ಈ ಹಿಂದೆ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.