ETV Bharat / city

ದೇವೇಗೌಡ್ರು ಇರೋವರೆಗೂ ನಾನು ಜೆಡಿಎಸ್​ನಲ್ಲೇ ಇರುತ್ತೇನೆ: ವೈ.ಎಸ್.ವಿ ದತ್ತ - ಜೆಡಿಎಸ್ ಮಾಜಿ ಶಾಸಕ ವೈ.ಎಸ್.ವಿ ದತ್ತ

ವೈ ಎಸ್​ ವಿ ದತ್ತ ಕಾಂಗ್ರೆಸ್​ನತ್ತ ಮುಖ ಮಾಡಿದ್ದಾರೆ ಎನ್ನುವುದು ಸುಳ್ಳು. ದೇವೇಗೌಡ್ರು ಇರುವ ವರೆಗೂ ನಾನು ಜೆಡಿಎಸ್​ನಲ್ಲೇ ಉಳಿಯುತ್ತೇನೆ ಎಂದು ಜೆಡಿಎಸ್ ಮಾಜಿ ಶಾಸಕ ವೈ.ಎಸ್.ವಿ ದತ್ತ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ವೈ.ಎಸ್.ವಿ ದತ್ತ
ವೈ.ಎಸ್.ವಿ ದತ್ತ
author img

By

Published : Dec 2, 2020, 2:34 PM IST

ಬೆಂಗಳೂರು: ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡರು ಇರುವವರೆಗೂ ತಾನು ಜೆಡಿಎಸ್‌ನಲ್ಲಿಯೇ ಇರುತ್ತೇನೆ ಎಂದು ಜೆಡಿಎಸ್ ಮಾಜಿ ಶಾಸಕ ವೈ.ಎಸ್.ವಿ ದತ್ತ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ವೈ.ಎಸ್.ವಿ ದತ್ತ

ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ದತ್ತ ಕಾಂಗ್ರೆಸ್​ನತ್ತ ಮುಖ ಮಾಡಿದ್ದಾರೆ ಎನ್ನುವುದು ಸುಳ್ಳು. ಈ ಬಗ್ಗೆ ನಾನು ಸ್ಪಷ್ಟೀಕರಣ ಕೊಟ್ಟಿದ್ದೇನೆ. ನಾನು 22 ವರ್ಷದ ಹುಡುಗನಾಗಿದ್ದಾಗ ರಾಜಕೀಯ ಪ್ರವೇಶ ಮಾಡಿದೆ. 47 ವರ್ಷಗಳಿಂದ ಜನತಾ ಪರಿವಾರದಲ್ಲಿದ್ದೇನೆ. ಇದರ ತತ್ವ ಸಿದ್ಧಾಂತಗಳಿಗೆ ಅನುಗುಣವಾಗಿ ನಡೆದುಕೊಂಡಿದ್ದೇನೆ. ಎಂಎಲ್‌ಎ ಹಾಗೂ ಎಂಎಲ್​ಸಿಯಾಗಿ ಕೆಲಸ ಮಾಡಿದ್ದೇನೆ. ಪಕ್ಷವನ್ನು ಬಿಡುವ ಪ್ರಶ್ನೆ ಈಗ ಉದ್ಭವಿಸುವುದೇ ಇಲ್ಲ. ಜಾತ್ಯತೀತ ತತ್ವ, ಸಾಮಾಜಿಕ ನ್ಯಾಯ ಬಹಳ ಮುಖ್ಯ ಎಂದು ಭಾವಿಸಿದವನು ನಾನು. ಜಾತ್ಯತೀತ ಜನತಾ ದಳ ಅದು ಇಂದಿಗೂ ಜೀವಂತವಾಗಿದೆ ಎಂಬ ಉದ್ದೇಶದಿಂದಲೇ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದರು.

ಒಂದೊಮ್ಮೆ ನಮ್ಮ ಪಕ್ಷ ಈಗಿರುವ ತತ್ವ ಸಿದ್ಧಾಂತಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ನನಗೆ ಅನ್ನಿಸಿದರೆ, ಪಕ್ಷದ ವೇದಿಕೆಯಲ್ಲೇ ಈ ಬಗ್ಗೆ ಮಾತನಾಡುತ್ತೇನೆ. ಪಕ್ಷದಲ್ಲಿ ಉತ್ತಮವಾದ ಪ್ರಜಾಪ್ರಭುತ್ವ ಇದೆ. ದೇವೇಗೌಡ್ರು ಇರುವವರೆಗೂ ನಾನು ಇದೇ ಪಕ್ಷದಲ್ಲಿ ಉಳಿಯುತ್ತೇನೆ ಎಂದು ಸಾಕಷ್ಟು ಬಾರಿ ಹೇಳಿದ್ದೇನೆ. ಹೀಗಾಗಿ ನನ್ನ ಮಾತು ಹಾಗೂ ವಾಕ್ಯ ಸ್ಪಷ್ಟವಾಗಿದೆ ಎಂದು ಇನ್ನೊಮ್ಮೆ ಎಂದು ಊಹಾಪೋಹಕ್ಕೆ ತೆರೆ ಎಳೆದರು.

ನಾವು ಜಾತ್ಯತೀತವಾಗಿ ಇದ್ದೇವೆ ಮತ್ತು ಪ್ರಾದೇಶಿಕ ಪಕ್ಷಕ್ಕೆ ಒತ್ತು ಕೊಡಬೇಕು ಎಂದು ನಾನು ಹೇಳಿದ್ದೇನೆ. ಮೊನ್ನೆ ನಡೆದ ನಮ್ಮ ಪಕ್ಷದ ಸಭೆಯಲ್ಲಿ ಕೂಡ ಇದೇ ವಿಚಾರವನ್ನು ಸ್ಪಷ್ಟವಾಗಿ ತಿಳಿಸಿದ್ದೇನೆ. ನಾವು ಎರಡು ರಾಷ್ಟ್ರೀಯ ಪಕ್ಷಗಳಿಂದ ಸಮಾನವಾಗಿ ದೂರ ಉಳಿಯಬೇಕು. ಯಾರಿಗೂ ಹತ್ತಿರ ಹಾಗು ದೂರವಾಗುವ ಪ್ರಶ್ನೆ ಬೇಡ ಎಂದು ಹೇಳಿದ್ದೇನೆ. ಸ್ಥಳೀಯ ಸಂಸ್ಥೆ ಚುನಾವಣೆ ಸಂದರ್ಭದಲ್ಲಿ ತತ್ವ ಸಿದ್ಧಾಂತಗಳನ್ನು ಪಾಲಿಸಲು ಸಾಧ್ಯವಿಲ್ಲ. ಆಯಾ ಪ್ರದೇಶಕ್ಕೆ ಸೀಮಿತವಾಗಿ ಬದಲಾವಣೆ ಆಗುತ್ತದೆ. ಅಂತಹ ಸಂದರ್ಭ ನಡೆಯುವ ಮೈತ್ರಿಯನ್ನು ನಾವು ದೊಡ್ಡಮಟ್ಟದಲ್ಲಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಜೆಡಿಎಸ್ ಜೊತೆ ಮೈತ್ರಿಯಿಂದ ಕಾಂಗ್ರೆಸ್​ಗೆ ನಷ್ಟ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ಕುರಿತು ಮಾತನಾಡಿದ ಅವರು, ಸಿದ್ದರಾಮಯ್ಯನವರಿಗೆ ಈಗ ನಷ್ಟ, ಲಾಭ ಅಂತಾ ಗೊತ್ತಾಯ್ತಾ?, ನಮ್ಮ ಜೊತೆ ಇದ್ದಾಗಿನಿಂದಲೂ ಇದೇ ಪರಿಸ್ಥಿತಿ ಇದೆ. ಕರ್ನಾಟಕದಲ್ಲಿ ಯಾವತ್ತು ತ್ರಿಕೋನ ಸ್ಪರ್ಧೆ ಇದೆ. ನಾವು ನಮ್ಮ ಕಾಲಿನ ಮೇಲೆ ನಿಂತುಕೊಳ್ಳಬೇಕು ಎಂಬ ಆಸೆ ನಮ್ಮದು ಎಂದು ದತ್ತ ಟಾಂಗ್​ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.