ಬೆಂಗಳೂರು : ಐಎಂಎ ಬಹುಕೋಟಿ ವಂಚನೆ ಹಗರಣದಲ್ಲಿ ಸಿಬಿಐ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ರೋಷನ್ ಬೇಗ್ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕೋರ್ಟ್ ನವೆಂಬರ್ 30ಕ್ಕೆ ಮುಂದೂಡಿದೆ.
ಜಾಮೀನು ನೀಡುವಂತೆ ಕೋರಿ ಪ್ರಕರಣದ 36ನೇ ಆರೋಪಿ ರೋಷನ್ ಬೇಗ್ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಇಂದು ಸಿಬಿಐ ವಿಶೇಷ ನ್ಯಾಯಾಲಯ ವಿಚಾರಣೆ ನಡೆಸಿತು.
ಈ ವೇಳೆ ಸಿಬಿಐ ಪರ ವಕೀಲರು ಮಾಹಿತಿ ನೀಡಿ, ಪ್ರಕರಣದಲ್ಲಿ ರೋಷನ್ ಬೇಗ್ ಅವರನ್ನು ಹೆಚ್ಚಿನ ವಿಚಾರಣೆಗೊಳಪಡಿಸುವ ಅಗತ್ಯವಿದೆ. ಆದರೆ, ರೋಷನ್ ಬೇಗ್ ಆಸ್ಪತ್ರೆ ಸೇರಿದ್ದಾರೆ.
ಹೀಗಾಗಿ ಆರೋಪಿಯನ್ನು ಸಿಬಿಐ ವಶಕ್ಕೆ ಪಡೆದು ಮಾಹಿತಿ ಕಲೆ ಹಾಕಲು ಸಾಧ್ಯವಾಗಿಲ್ಲ. ಆದ್ದರಿಂದ ಆಕ್ಷೇಪಣೆ ಸಲ್ಲಿಸಲು ಮತ್ತಷ್ಟು ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು.
(ಐಎಂಎ ಬಹುಕೋಟಿ ವಂಚನೆ ಪ್ರಕರಣ: ಜೈಲಲ್ಲೇ ರಾತ್ರಿ ಕಳೆದ ರೋಷನ್ ಬೇಗ್)
ಮನವಿ ಪುರಸ್ಕರಿಸಿದ ಸಿಬಿಐ ವಿಶೇಷ ನ್ಯಾಯಾಲಯ, ವಿಚಾರಣೆಯನ್ನು ನ. 30ಕ್ಕೆ ಮುಂದೂಡಿತು.
(ಐಎಂಎ ವಂಚನೆ ಪ್ರಕರಣ : ಮಾಜಿ ಸಚಿವ ರೋಷನ್ ಬೇಗ್ ಮತ್ತೆ ಸಿಬಿಐ ವಶಕ್ಕೆ..)