ನೆಲಮಂಗಲ(ಬೆಂ.ಗ್ರಾ) : ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರ ಮೊಮ್ಮಗಳು ಸೌಂದರ್ಯ(30) ಅವರ ಅಂತ್ಯಕ್ರಿಯೆಯನ್ನು ಸೊಲದೇವನಹಳ್ಳಿಯಲ್ಲಿರುವ ಪತಿ ಡಾ.ನೀರಜ್ ಅವರ ಫಾರ್ಮ್ ಹೌಸ್‌ನಲ್ಲಿ ಇಂದು ಸಂಜೆಯೊಳಗೆ ನಡೆಸಲು ಕುಟುಂಬದವರು ಸಿದ್ಧತೆ ನಡೆಸಿದ್ದಾರೆ.
ಅಂತ್ಯಕ್ರಿಯೆ ನಡೆಯಲಿರುವ ಕಲ್ಪವೃಕ್ಷ ಫಾರ್ಮ್ ಹೌಸ್‌ಗೆ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಸ್ಥಳೀಯರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಪಾರ್ಥಿವ ಶರೀರ ದರ್ಶನಕ್ಕೆ ಬಂದ ಸೋಲದೇವನಹಳ್ಳಿ ಗ್ರಾಮಸ್ಥರಿಗೆ ಪೊಲೀಸರು ಅವಕಾಶ ನೀಡಲಿಲ್ಲ.