ETV Bharat / city

ಸಾರಿಗೆ ಸಿಬ್ಬಂದಿ ನಿಯಂತ್ರಣಕ್ಕೆ ಸರ್ಕಾರದ ಬ್ರಹ್ಮಾಸ್ತ್ರ: ಇಲ್ಲಿದೆ 'ಎಸ್ಮಾ' ಕುರಿತ ಕಂಪ್ಲೀಟ್ ಡಿಟೈಲ್ಸ್​​...! - ಕೆಎಸ್​ಆರ್​ಟಿಸಿ ಸಿಬ್ಬಂದಿ ಪ್ರತಿಭಟನೆ ಮೇಲೆ ಎಸ್ಮಾ ಕಾಯ್ದೆ ಜಾರಿ

ವಿವಿಧ ಬೇಡಿಕೆ ಈಡೇರಿಕೆಗಾಗಿ ಸಾರಿಗೆ ನೌಕರರು ನಡೆಸುತ್ತಿರುವ ಪ್ರತಿಭಟನೆ ನಿಲ್ಲಿಸಲು ಸಡೆಸಿದ್ದ ಸಂಧಾನ ಸಭೆಗಳು ವಿಫಲವಾದ ಕಾರಣ ಸರ್ಕಾರ ನೌಕರರ ಮೇಲೆ 'ಎಸ್ಮಾ' ಜಾರಿಗೆ ಮುಂದಾಗಿದೆ. 'ಎಸ್ಮಾ' ಅಂದ್ರೆ ಒಂದು ರೀತಿಯಲ್ಲಿ ಕಟ್ಟಪ್ಪಣೆ. ಸಾರ್ವಜನಿಕ ವಲಯದಲ್ಲಿ ಮೂಲ ಸೌಕರ್ಯ ಸೇವೆ ಒದಗಿಸುವ ಸಿಬ್ಬಂದಿ ನಿಯಂತ್ರಣದಲ್ಲಿ ಇರಿಸಿಕೊಳ್ಳಲು ಪ್ರಯೋಗಿಸುವ ಅಂತಿಮ ಅಸ್ತ್ರವೇ ಎಸ್ಮಾ.

esma-act-on-ksrct-employees-protest-by-government
ಎಸ್ಮಾ
author img

By

Published : Dec 12, 2020, 6:29 PM IST

ಬೆಂಗಳೂರು: ಸರ್ಕಾರ ಸಾರಿಗೆ ನೌಕರರ ಪ್ರತಿಭಟನೆ ಹತ್ತಿಕ್ಕಲು 'ಎಸ್ಮಾ' ಬ್ರಹ್ಮಾಸ್ತ್ರ ಪ್ರಯೋಗ ಮಾಡಲು ಮುಂದಾಗಿದೆ. ಅಷ್ಟಕ್ಕೂ ಈ ಎಸ್ಮಾ ಅಂದ್ರೆ ಎನೂ..? ಯಾವಾಗ ಇದನ್ನು ಜಾರಿ ಮಾಡಲಾಗಿತ್ತು..? ಇದರ ವಿಶೇಷತೆ ಹೀಗಿದೆ

ಎಸ್ಮಾ ಅಂದ್ರೆ ಒಂದು ರೀತಿಯಲ್ಲಿ ಕಟ್ಟಪ್ಪಣೆ ಎಂದೇ ಅರ್ಥ. ಸಾರ್ವಜನಿಕ ವಲಯದಲ್ಲಿ ಮೂಲಸೌಕರ್ಯ ಸೇವೆ ಒದಗಿಸುವ ಸಿಬ್ಬಂದಿ ನಿಯಂತ್ರಣದಲ್ಲಿ ಇರಿಸಿಕೊಳ್ಳಲು ಪ್ರಯೋಗಿಸುವ ಅಂತಿಮ ಅಸ್ತ್ರವೇ ಎಸ್ಮಾ.

ಅಗತ್ಯ ಸೇವೆ ನಿರ್ವಹಣೆ ಕಾಯ್ದೆ ಎನ್ನುವುದು ಕೆಲವು ಸೇವೆಗಳ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಸ್ಥಾಪಿಸಲಾದ ಸಂಸತ್ತಿನ ಒಂದು ಕಾರ್ಯವಾಗಿದೆ. ಸರ್ಕಾರಿ ನೌಕರರ ಮೇಲೆ ಅಂಕುಶ ಹಾಕುವ ಕಾಯ್ದೆ ಇದಾಗಿದ್ದು, 1994ರಲ್ಲಿ ರಾಜ್ಯದಲ್ಲಿ ಎಸ್ಮಾ ಅಸ್ತ್ರದ ಉಲ್ಲೇಖ ಮಾಡಲಾಯಿತು. 2015 ರಲ್ಲಿ ಈ ಕಾಯಿದೆಗೆ ಕೆಲ ತಿದ್ದುಪಡಿ ಮಾಡಲಾಯಿತು.

'ಎಸ್ಮಾ' ಭಾರತ ಸಂಸತ್ತು ರಚಿತ ಕಾನೂನು, ಆದರೆ ಅದನ್ನು ಕಾರ್ಯಗತಗೊಳಿಸುವ ವಿವೇಚನೆಯನ್ನು ಹೆಚ್ಚಾಗಿ ರಾಜ್ಯ ಸರ್ಕಾರಗಳಿಗೆ ಇರುತ್ತದೆ. ಎಸ್ಮಾ ಎಂದರೆ ಕಡ್ಡಾಯ ಕೆಲಸ ಎನ್ನುವ ಅರ್ಥ ಬರುತ್ತದೆ. ಸಂವಿಧಾನ ಅನುಸೂಚಿ 7ರಲ್ಲಿನ 2ನೇ ಪಟ್ಟಿಯಲ್ಲಿರುವ ಸಾರ್ವಜನಿಕ ಸುವ್ಯವಸ್ಥೆ ಮತ್ತು ಪೊಲೀಸ್ ಸಂಬಂಧಿಸಿದ ಎಲ್ಲ ಸೇವೆಗಳ ಕುರಿತು ರಾಜ್ಯ ಶಾಸಕಾಂಗವು ಕಾನೂನು ರೂಪಿಸುವ ಅಧಿಕಾರ ಹೊಂದಿರುತ್ತದೆ.

ಓದಿ-ಸಾರಿಗೆ ನೌಕರರನ್ನು ಮನವೊಲಿಸುವ ಯತ್ನ: ಒಪ್ಪದೆ ಇದ್ದರೆ ಸಿಬ್ಬಂದಿ ವಿರುದ್ಧ ಎಸ್ಮಾ ಅಸ್ತ್ರ?

ಎಸ್ಮಾ ಕಾಯ್ದೆ ಉಲ್ಲಂಘನೆ ಮಾಡಿದರೆ ವಾರಂಟ್ ಇಲ್ಲದೇ ಬಂಧನ ಮಾಡಬಹುದು ಹಾಗೂ ಆರು ತಿಂಗಳ ಜೈಲುವಾಸ ಸಾಧ್ಯತೆ ಇದೆ. ಎಸ್ಮಾ ಜಾರಿ ನಂತರವೂ ಪ್ರತಿಭಟನೆಯಲ್ಲಿ ಪಾಲ್ಗೊಂಡರೆ ಆತನ ವೇತನ, ಭತ್ಯೆ, ಬಡ್ತಿ ಮತ್ತು ಇತರ ಸವಲತ್ತುಗಳ ಮೇಲೆ ಪರಿಣಾಮವುಂಟಾಗುತ್ತದೆ. ಸರ್ಕಾರ ಇದನ್ನು ಜಾರಿ ಮಾಡಿದೆ ಎಂದರೆ ಒಂದು ರೀತಿಯಲ್ಲಿ ಕಟ್ಟಪ್ಪಣೆ ಮಾಡಿದ ಹಾಗೆ.

ಯಾವಾಗ ಜಾರಿ?

ಅಗತ್ಯ ಸೇವೆ ನಿರ್ವಹಣೆ ಕಾಯ್ದೆಯನ್ನು ಎಸ್ಮಾ ಎಂದು ಕರೆಯಲಾಗುತ್ತದೆ. ಸರ್ಕಾರಿ ನೌಕರರು ಸಾಮೂಹಿಕ ಪ್ರತಿಭಟನೆಗೆ ಮುಂದಾಗಿ, ಪರಿಸ್ಥಿತಿ ಸಂಪೂರ್ಣ ಕೈಮೀರಿ ಹೋದ ಸಂದರ್ಭದಲ್ಲಿ ಅನಿವಾರ್ಯ ಪರಿಸ್ಥಿತಿಯಲ್ಲಿ ಎಸ್ಮಾ ಜಾರಿ ಮಾಡಲಾಗುತ್ತದೆ. ಮೂಲ ಸೌಕರ್ಯಗಳಾದ ಆಹಾರ, ಶಿಕ್ಷಣ, ಭದ್ರತೆ, ಆರೋಗ್ಯ, ಪೊಲೀಸ್ ವ್ಯವಸ್ಥೆಗೆ ಭಂಗ ಬರುವ ಸಂದರ್ಭದಲ್ಲಿ ಎಸ್ಮಾ ಜಾರಿ ಮಾಡಬಹುದಾಗಿದೆ.

1994 ರಲ್ಲಿ ಈ ಕಾಯ್ದೆಯನ್ನು ರಾಜ್ಯದಲ್ಲಿ ಅನುಷ್ಠಾನಕ್ಕೆ ಮಾಡಲಾಯಿತು. ಆದರೂ ಈ ಅಸ್ತ್ರ ಪ್ರಯೋಗ ಮಾತ್ರ ತೀರಾ ವಿರಳ. ಕಾನೂನು ಬಂದು ಕಾಲು ಶತಮಾನ ಕಳೆದರೂ ಬಳಕೆಯಾಗಿದ್ದು ಕೇವಲ ಎರಡು ಬಾರಿ ಮಾತ್ರ. 2000ದಲ್ಲಿ ಮತ್ತು 2013ರಲ್ಲಿ ಈ ಕಾಯ್ದೆಯನ್ನು ಬಳಕೆ ಮಾಡಿದ ಉಲ್ಲೇಖವಿದೆ.

ಹಿಂದಿನ ಹೋರಾಟ

2016ರಲ್ಲಿ ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಬಸ್ ಸೇವೆ ಸ್ಥಗಿತ ಮಾಡಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದ್ದರು. ನಂತರ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ಎಲ್ಲಾ ಸೌಲಭ್ಯಗಳನ್ನು ವಿಸ್ತರಿಸಬೇಕೆಂದು ಆಗ್ರಹಿಸಿ ಸಾರಿಗೆ ನೌಕರರು 2020 ಫೆಬ್ರವರಿ 20 ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದ್ದ ನೌಕರರ ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದರು.

ಅಲ್ಲದೇ ಜನವರಿ 1ರಿಂದಲೇ ಜಾರಿಗೆ ಬರುವಂತೆ ನಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂದು ಒತ್ತಾಯಿಸಿದ್ದರು. ವೇತನ ತಾರತಮ್ಯ ನಿವಾರಿಸಬೇಕು, ಪಿಂಚಣಿ ಸೌಲಭ್ಯ ಒದಗಿಸಬೇಕು, ನಿವೃತ್ತ ಸಿಬ್ಬಂದಿಗೂ ಪಿಂಚಣಿ ಕೊಡಬೇಕು, ಅಂತರ ನಿಗಮ ವರ್ಗಾವಣೆ ಆರಂಭಿಸಬೇಕು ಎನ್ನುವ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಿದ್ದರು.

ಆದರೆ ಈವರೆಗೆ ಕರ್ತವ್ಯ ತೊರೆದು ಹೋರಾಟ ಮಾಡಿರಲಿಲ್ಲ, ಬದಲಾಗಿ ಕರ್ತ್ಯವ್ಯ ಮುಗಿಸಿದ್ದವರು, ಪಾಳಿವಾರು ಧರಣಿಯಲ್ಲಿ ಭಾಗಿಯಾಗುತ್ತಿದ್ದರು. ಇದರಿಂದ ಸಾರಿಗೆ ಸೇವೆಗೆ ಯಾವುದೇ ತೊಂದರೆ ಆಗಿರಲಿಲ್ಲ, ಆದರೆ, ಈ ಬಾರಿ ಸೇವೆ ಸ್ಥಗಿತಗೊಳಿಸಿ ಹೋರಾಟ ನಡೆಸಲಾಗುತ್ತಿದೆ.

ಎಸ್ಮಾ ಜಾರಿ ಮಾಡಿದ ಉದಾಹರಣೆ

2017 ರ ಸೆಪ್ಟೆಂಬರ್ ನಲ್ಲಿ ಗುತ್ತಿಗೆ ಪೌರ ಕಾರ್ಮಿಕರಿಗೆ ನೇರ ವೇತನ ಪಾವತಿ ವ್ಯವಸ್ಥೆ ಇರುವುದು ಪಡಿಸಬೇಕು ಎಂದು ಒತ್ತಾಯಿಸಿ ತ್ಯಾಜ್ಯವಿಲೇವಾರಿ ಗುತ್ತಿಗೆದಾರರು ತ್ಯಾಜ್ಯ ವಿಲೇವಾರಿ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಸರ್ಕಾರ ಎಸ್ಮಾ ಜಾರಿಗೆ ತಂದಿತ್ತು. ನಂತರ ಗುತ್ತಿಗೆದಾರರು ನಗರದಲ್ಲಿ ತ್ಯಾಜ್ಯ ವಿಲೇವಾರಿ ಕಾರ್ಯ ಆರಂಭಿಸಿದ್ದರು.

2000ನೇ ಇಸ್ವಿಯಲ್ಲಿ ಒಂದು ತಿಂಗಳ ಕಾಲ ಮೌಲ್ಯಮಾಪನ ಬಹಿಷ್ಕಾರ ಮಾಡಿದಾಗ ಎಸ್ಮಾ ಜಾರಿ ಮಾಡಲಾಗಿತ್ತು. ಎಂಟು ದಿನ ಜೈಲುವಾಸ ಅನುಭವಿಸಿ ಬಂದಿದ್ದೇನೆ ಎಂದು ಪದವಿ ಪೂರ್ವ ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಮಾಹಿತಿ ನೀಡಿದ್ದಾರೆ.

ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿಸಿದ ರಾಜ್ಯಗಳು

ಆಂಧ್ರಪ್ರದೇಶದಲ್ಲಿ ರಾಜ್ಯ ಸಾರಿಗೆ ಸಂಸ್ಥೆ ನಿಗಮವನ್ನು ಸರ್ಕಾರದೊಂದಿಗೆ ವಿಲೀನಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅದನ್ನು ಹೊರತುಪಡಿಸಿ ದಕ್ಷಿಣ ಭಾರತದಲ್ಲಿ ಮತ್ತೆ ಯಾವ ರಾಜ್ಯವು ಸಾರಿಗೆ ಸಂಸ್ಥೆಯನ್ನು ಸರ್ಕಾರದೊಂದಿಗೆ ವಿಲೀನ ಮಾಡುವುದಾಗಲಿ ಸರ್ಕಾರಿ ನೌಕರರ ಸ್ಥಾನಮಾನವನ್ನು ನೀಡುವುದಾಗಲಿ ಮಾಡಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.