ETV Bharat / city

ಬಿಪಿನ್​ ರಾವತ್​ ನಿಧನ ಇಡೀ ದೇಶಕ್ಕೆ ನಷ್ಟ: ಸಚಿವ ಕೆ.ಎಸ್.ಈಶ್ವರಪ್ಪ - Eshwarappa reaction on bipin rawat death

ಜನರಲ್​ ಬಿಪಿನ್​ ರಾವತ್​ ನಿಧನ ದೇಶಕ್ಕೆ ತುಂಬಲಾರದ ನಷ್ಟ. ಶ್ರೇಷ್ಠ ದೇಶ ಭಕ್ತರಾಗಿದ್ದ ಅವರು ಶತ್ರು ದೇಶಗಳಿಗೆ ಸಿಂಹಸ್ವಪ್ನವಾಗಿದ್ದರು ಎಂದು ಸಚಿವ ಕೆ.ಎಸ್​.ಈಶ್ವರಪ್ಪ ಹೇಳಿದರು.

bipin-rawat-death
ಈಶ್ವರಪ್ಪ
author img

By

Published : Dec 9, 2021, 2:23 PM IST

ಬೆಂಗಳೂರು: ಹೆಲಿಕಾಪ್ಟರ್ ಪತನದಲ್ಲಿ ಸೇನಾಪಡೆ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಅಕಾಲಿಕ‌ ದುರ್ಮರಣ ಇಡೀ ದೇಶಕ್ಕೆ ನಷ್ಟ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.

ವಿಧಾನಸೌಧದಲ್ಲಿ ಇಂದು ಮಾತನಾಡಿದ ಅವರು, ರಾವತ್ ಅವರೊಬ್ಬ ರಾಷ್ಟ್ರ ಭಕ್ತರಾಗಿದ್ದರು. ಶತ್ರು ದೇಶಗಳಿಗೆ ಸಿಂಹಸ್ವಪ್ನದಂತಿದ್ದರು. ಅವರ‌ ಸಾವನ್ನು ನಂಬಲು ಸಾಧ್ಯವಿಲ್ಲ. ಹೆಲಿಕಾಪ್ಟರ್ ಪತನದಲ್ಲಿ 13 ಮಂದಿ ಸಾವು ಆಗಿದೆ. ರಾವತ್ ಇನ್ನೂ ಜೀವಂತ ಇದ್ದಾರೆಂಬ ಸುದ್ದಿ ಬಂತು. ಆಗ ನಮಗೂ ಉಳಿಯುತ್ತಾರೆಂಬ ಸಂತೋಷವಿತ್ತು. ಆದರೆ ಅವರ ಸಾವಿನ ಸುದ್ದಿ ಅರಗಿಸಿಕೊಳ್ಳೋಕೆ ಆಗ್ತಿಲ್ಲ. ಅವರ ಕನಸು‌ ನನಸಾಗಲಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು.

ಸಂಪುಟ ಸಭೆಯಲ್ಲಿ ರಾವತ್​​ಗೆ ಸಂತಾಪ: ವಿಧಾನಸೌಧದಲ್ಲಿ ನಡೆಯುತ್ತಿರುವ ಸಂಪುಟ ಸಭೆ ಆರಂಭಕ್ಕೂ ಮೊದಲು ಬಿಪಿನ್ ರಾವತ್ ಅವರಿಗೆ ಸಂತಾಪ ಸಲ್ಲಿಸಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.