ETV Bharat / city

'ಕೊಲೆ ಮಾಡಿದ್ದು ಮುಸ್ಲಿಂ ಗೂಂಡಾಗಳೆಂದು ಹೇಳಿದ್ದೆ, ಈಗಲಾದ್ರೂ ಹರಿಪ್ರಸಾದ್ ಒಪ್ಕೋತಾರಾ?'

ಭಜರಂಗದಳ ಕಾರ್ಯಕರ್ತ ಹರ್ಷನನ್ನು ಹತ್ಯೆ ಮಾಡಿದವರು ಮುಸ್ಲಿಂ ಗೂಂಡಾಗಳು ಎಂದು ಮತ್ತೆ ತಮ್ಮ ಹೇಳಿಕೆಯನ್ನು ಸಚಿವ ಕೆ.ಎಸ್‌.ಈಶ್ವರಪ್ಪ ಸಮರ್ಥನೆ ಮಾಡಿಕೊಂಡರು.

Eshwarapp
ಈಶ್ವರಪ್ಪ
author img

By

Published : Feb 22, 2022, 10:50 AM IST

ಬೆಂಗಳೂರು: ಶಿವಮೊಗ್ಗದಲ್ಲಿ ಭಜರಂಗದಳದ ಕಾರ್ಯಕರ್ತ ಹರ್ಷ ಎಂಬ ಯುವಕನ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಶಂಕಿತ ಆರೋಪಿಗಳು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದು, ಈಗಲಾದರೂ ನನ್ನ ಆರೋಪವನ್ನು ಕಾಂಗ್ರೆಸ್​​ನ ಹರಿಪ್ರಸಾದ್ ಒಪ್ಪುತ್ತಾರಾ ಎಂದು ಸಚಿವ ಕೆ‌ಎಸ್‌ ಈಶ್ವರಪ್ಪ ಪ್ರಶ್ನಿಸಿದ್ದಾರೆ.

ಚಕ್ರವರ್ತಿ ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೊಲೆ ಆದ ಸಮಯದಲ್ಲಿ ಎಸ್​​ಪಿಗೆ ಕಾಲ್ ಮಾಡಿ ಕೇಳಿದೆ. ಮುಸ್ಲಿಮರೇ ಕೊಲೆ ಮಾಡಿದ್ದಾರೆ ಅಂತ ಅವರು ಮಾಹಿತಿ ನೀಡಿದ್ದರು. ಸುತ್ತಮುತ್ತಲಿನ ಜನ ಕೂಡ ಅದೇ ಮಾತನ್ನು ಹೇಳಿದ್ದರು. ಹೀಗಾಗಿ ಕೊಲೆ ಮಾಡಿದ್ದು ಮುಸ್ಲಿಂ ಗೂಂಡಾಗಳು ಎನ್ನುವ ಮಾತನ್ನು ಹೇಳಿದ್ದೆ. ಈಗ ಅದು ಸತ್ಯ ಆಗಿದೆ‌. ಬಂಧನ ಆದವರೆಲ್ಲಾ ಮುಸ್ಲಿಮರು. ಈಗಲಾದರೂ ಬಿ.ಕೆ ಹರಿಪ್ರಸಾದ್ ನನ್ನ ಆರೋಪವನ್ನು ಒಪ್ಕೊತಾರಾ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: 'ಮುಸಲ್ಮಾನ ಗೂಂಡಾಗಳು ಶಿವಮೊಗ್ಗದ ಯುವಕನ ಕೊಲೆ ಮಾಡಿದ್ದಾರೆ': ಸಚಿವ ಕೆ.ಎಸ್‌.ಈಶ್ವರಪ್ಪ

ಕಾಂಗ್ರೆಸ್ ಸರ್ಕಾರ ಇದ್ದಾಗ ಗೋ ರಕ್ಷಣೆ ಮಾಡುವ ಹಿಂದೂ ಹುಡುಗರನ್ನು ಕೊಲೆ ಮಾಡ್ತಾ ಇದ್ದರು. ಈಗ ನಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕು ಅಂತ ಹಿಂದೂ ಯುವಕರ ಕೊಲೆ ಮಾಡುತ್ತಿದ್ದಾರೆ. ಈ ಕೊಲೆ ಕೇಸ್ ತನಿಖೆಯನ್ನು ಎನ್ಐಎ ಮೂಲಕ ಮಾಡಿಸಬೇಕು, ಮುಖ್ಯಮಂತ್ರಿಗಳ ಜೊತೆ ಈ ಬಗ್ಗೆ ಮಾತಾಡುತ್ತೇನೆ ಎಂದು ಈಶ್ವರಪ್ಪ ತಿಳಿಸಿದರು.

ರಾಜ್ಯಾಧ್ಯಕ್ಷರ ಜೊತೆ ಈಶ್ವರಪ್ಪ ಮಾತುಕತೆ: ಹರ್ಷ ಕೊಲೆ ಪ್ರಕರಣ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಜೊತೆ ಸಚಿವ ಕೆ.ಎಸ್‌.ಈಶ್ವರಪ್ಪ ಇಂದು ಮಾತುಕತೆ ನಡೆಸಿದರು. ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ಜೊತೆ ಮಾತುಕತೆ ನಡೆಸಿದ್ದ ಈಶ್ವರಪ್ಪ ಇಂದು ಪಕ್ಷದ ರಾಜ್ಯಾಧ್ಯಕ್ಷರ ಜೊತೆ ಚರ್ಚಿಸಿದರು‌.

ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನಕ್ಕೆ ಭೇಟಿ ನೀಡಿದ ಸಚಿವ ಈಶ್ವರಪ್ಪ, ರಾಜ್ಯಾಧ್ಯಕ್ಷ ಕಟೀಲ್ ಜೊತೆ ಸಮಾಲೋಚನೆ ನಡೆಸಿದರು. ಘಟನೆ ಹಿನ್ನೆಲೆ, ಯಾರೆಲ್ಲಾ ಇದರ ಹಿಂದೆ ಇರಬಹುದು ಎನ್ನುವ ಕುರಿತು ಲಭ್ಯ ಮಾಹಿತಿಗಳನ್ನು ರಾಜ್ಯಾಧ್ಯಕ್ಷರ ಜೊತೆ ಹಂಚಿಕೊಂಡಿದ್ದಾರೆ.

ಸದ್ಯ ಶಿವಮೊಗ್ಗದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಸ್ಥಳಕ್ಕೆ ಆಗಮಿಸಿ ಮೃತ ಯುವಕನ ಕುಟುಂಬಕ್ಕೆ ಸಾಂತ್ವನ ಹೇಳಬೇಕು. ಕಾರ್ಯಕರ್ತರಿಗೆ ಧೈರ್ಯ ತುಂಬಬೇಕು ಎಂದು ರಾಜ್ಯಾಧ್ಯಕ್ಷರಿಗೆ ಸಚಿವ ಈಶ್ವರಪ್ಪ ಮನವಿ ಮಾಡಿದರು. ಇದಕ್ಕೆ ಸಮ್ಮತಿಸಿದ ಕಟೀಲ್, ನಾಳೆ ಶಿವಮೊಗ್ಗಕ್ಕೆ ಭೇಟಿ ನೀಡುತ್ತಿದ್ದು, ಹರ್ಷ ಕುಟುಂಬಕ್ಕೆ ಸಾಂತ್ವಾನ ಹೇಳಲಿದ್ದಾರೆ.

ಇದನ್ನೂ ಓದಿ: ಮದುವೆ ಮುಗಿಸಿ ಬರುತ್ತಿದ್ದ ವಾಹನ ಕಮರಿಗೆ ಬಿದ್ದು 10 ಜನರ ದುರ್ಮರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.