ETV Bharat / city

ಸಿಎಂಗೆ ಸ್ವಾಭಿಮಾನ ಇದ್ದಿದ್ರೆ ಹರಕಲು ಬಾಯಿಯ ಈಶ್ವರಪ್ಪರನ್ನು ವಜಾ ಮಾಡಬೇಕಿತ್ತು: ಡಿಕೆಶಿ

author img

By

Published : Feb 20, 2022, 12:08 PM IST

ಈಶ್ವರಪ್ಪ ವಿರುದ್ಧದ ನಮ್ಮ ಹೋರಾಟ ಮುಂದುವರಿಯಲಿದೆ. ಸಿಎಂಗೆ ಸ್ವಾಭಿಮಾನ ಇದ್ದಿದ್ರೆ ಈ ಹರಕಲು ಬಾಯಿಯ ಈಶ್ವರಪ್ಪರನ್ನು ವಜಾ ಮಾಡಬೇಕಿತ್ತು. ನಿರಾಣಿ ಸಿಎಂ‌ ಆಗ್ತಾರೆ ಅಂತ ಅವರು ಹೇಳಿದಾಗಲೇ ವಜಾ ಮಾಡಬೇಕಿತ್ತು ಎಂದು ಡಿಕೆಶಿ ಹೇಳಿದರು.

ವಿಧಾನಸೌಧ ಆವರಣದಲ್ಲಿ ಕೈ ನಾಯಕರು ವಾಯುವಿಹಾರ ನಡೆಸಿದರು

ಬೆಂಗಳೂರು: ಕಾಂಗ್ರೆಸ್ ಸದಸ್ಯರ ಅಹೋರಾತ್ರಿ ಧರಣಿ ನಾಲ್ಕನೇ ದಿನಕ್ಕೆ ಕಾಲಿರಿಸಿದೆ. ಇಂದು‌ ಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಶಾಸಕ ಡಾ.ರಂಗನಾಥ್ ಅವರು ವಿಧಾನಸಭೆ ಮೊಗಸಾಲೆಯಲ್ಲಿ ಭಾನುವಾರ ಬೆಳಗ್ಗೆ ದಿನಪತ್ರಿಕೆ ಓದುವ ಮೂಲಕ ದಿನ ಆರಂಭಿಸಿದರು.

ಬಳಿಕ ವಿಧಾನಸೌಧ ಆವರಣದಲ್ಲಿ ನಾಯಕರು ವಾಯುವಿಹಾರ ನಡೆಸಿದರು. ಶಾಸಕರ ಜೊತೆ ಲಘು ವ್ಯಾಯಾಮ ಮಾಡಿದ ಡಿಕೆಶಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಸಿಂಗಾಪುರ ಪಿಎಂ ಕೇಂದ್ರ ಸರ್ಕಾರದ ಬಗ್ಗೆ ಮಾತಾಡಿದ್ದಾರೆ. ಬೇರೆ ಬೇರೆ ದೇಶಗಳಿಂದ ಕೇಂದ್ರದ ನಡೆ ಬಗ್ಗೆ ಟೀಕೆ ಬರ್ತಿದೆ. ಈಶ್ವರಪ್ಪ ಹೇಳಿಕೆ ವೈಯಕ್ತಿಕ ಅಲ್ಲ. ಯಾರ್ಯಾರು ಏನೇನ್ ಮಾತಾಡ್ತಿದಾರೋ ಮಾತಾಡ್ಲಿ. ನಿನ್ನೆ ಖರ್ಗೆಯವರು ಬಂದು ಬೆಂಬಲ ಕೊಟ್ಟರು. ಬೇರೆ ರಾಜ್ಯಗಳಿಂದಲೂ ಕರೆಗಳು ಬರ್ತಿವೆ. ಕರ್ನಾಟಕದ ಕಾಂಗ್ರೆಸ್ ಶಾಸಕರು ಒಳ್ಳೇ ಕೆಲಸ ಮಾಡ್ತಿದಾರೆ. ಧರಣಿ ಮಾಡ್ತಿರೋದು ಒಳ್ಳೆಯದು ಅಂತ ಬೇರೆ ರಾಜ್ಯಗಳ ರಾಜಕಾರಣಿಗಳು ಹೇಳ್ತಿದಾರೆ ಅಂತ ಖರ್ಗೆ ಹೇಳಿದರು. ಈಶ್ವರಪ್ಪ ಹೇಳಿಕೆಗೆ ಎಲ್ಲೆಡೆ ವಿರೋಧ ಬರ್ತಿದೆ ಎಂದರು.

ನಮ್ಮ ಹೋರಾಟ ಮುಂದುವರೆಯಲಿದೆ. ಸಿಎಂಗೆ ಸ್ವಾಭಿಮಾನ ಇದ್ದಿದ್ರೆ ಈ ಹರಕಲು ಬಾಯಿಯ ಈಶ್ವರಪ್ಪರನ್ನು ವಜಾ ಮಾಡಬೇಕಿತ್ತು. ನಿರಾಣಿ ಸಿಎಂ‌ ಆಗ್ತಾರೆ ಅಂತ ಈಶ್ವರಪ್ಪ ಹೇಳಿದಾಗಲೇ ಅವರನ್ನು ಸಿಎಂ ವಜಾ ಮಾಡಬೇಕಿತ್ತು. ಯಡಿಯೂರಪ್ಪ ವಿರುದ್ಧವೇ ಈಶ್ವರಪ್ಪ ರಾಜ್ಯಪಾಲರಿಗೆ ದೂರು ಕೊಟ್ರು. ಈಶ್ವರಪ್ಪ ಯಾರಿಗೂ ನಿಷ್ಠರಾಗಿಲ್ಲ. ನಾಳೆ ನಮ್ಮ ಎಲ್ಲ ಕಾರ್ಯಕರ್ತರೂ ತಹಸೀಲ್ದಾರ್​​ರಿಗೆ ಮನವಿ ಕೊಡ್ತಾರೆ ಎಂದು ತಿಳಿಸಿದರು.

ವಿಧಾನಸೌಧ ಆವರಣದಲ್ಲಿ ಕೈ ನಾಯಕರು ವಾಯುವಿಹಾರ

ಕಾಂಗ್ರೆಸ್ ನಾಯಕರಿಂದ ಅಹೋರಾತ್ರಿ ಧರಣಿ ವಿಚಾರದ ಬಗ್ಗೆ ಮಾತನಾಡಿದ ಮಾಜಿ ಸಚಿವ ಯು.ಟಿ.ಖಾದರ್, ಭಾರತ ದೇಶದ ಧ್ವಜಕ್ಕೆ ಮಾಡಿದ ಅವಮಾನ, ದೇಶಕ್ಕೆ ಮಾಡಿದ ಅವಮಾನ. ರಾಜೀನಾಮೆ ಬಗ್ಗೆ ಬಿಜೆಪಿ ನಾಯಕರು ಕ್ರಮ ಕೈಗೊಳ್ಳದೇ ಇದ್ದರೆ, ಅದು ಇಡೀ ದೇಶಕ್ಕೆ ಗೊತ್ತಾಗುತ್ತೆ. ಆಗ ಈಶ್ವರಪ್ಪ ಹೇಳಿಕೆ, ಇಡೀ ಪಕ್ಷದ ಹೇಳಿಕೆ ಆಗುತ್ತೆ. ನಾವು ಇದರ ಬಗ್ಗೆ ಇನ್ನೂ ಹೋರಾಟ ಮುಂದುವರೆಸುತ್ತೇವೆ. ಸ್ಪೀಕರ್ ಅಧಿವೇಶನ ಮುಂದಕ್ಕೆ ಹಾಕಿದರೆ, ಜನರ ಮುಂದೆ ಹೋಗುತ್ತೇವೆ. ದೇಶದ ಸಂವಿಧಾನ, ಸಾರ್ವಭೌಮತೆ ಬಗ್ಗೆ ಮಾತನಾಡುವಾಗ ಎಚ್ಚರಿಕೆ ವಹಿಸಬೇಕು. ರಾಷ್ಟ್ರ ಧ್ವಜಕ್ಕಾದ ಅವಮಾನದ ಬಗ್ಗೆ ಬಿಜೆಪಿ ನಾಯಕರು ಚರ್ಚೆ ಮಾಡಲಿ. ಬೇರೆ, ಸಣ್ಣ ವಿಚಾರಗಳ ಬಗ್ಗೆಯೂ ಕಾಂಗ್ರೆಸ್ ಹೋರಾಟ ಮಾಡಿದೆ ಎಂದರು.

ಇದನ್ನೂ ಓದಿ: ಪಂಜಾಬ್‌ ಚುನಾವಣೆ: ಗಮನ ಸೆಳೆದ ಸಯಾಮಿ ಅವಳಿಗಳ ಮತದಾನ- ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.