ETV Bharat / city

ಪರಿಷ್ಕೃತ ಪಠ್ಯ ರದ್ದುಗೊಳಿಸುವಂತೆ ಶಿಕ್ಷಣ ಸಚಿವರಿಗೆ ಪತ್ರ ಬರೆದ ಈಶ್ವರಾನಂದಪುರಿ ಸ್ವಾಮೀಜಿ - ಬರಗೂರು ರಾಮಚಂದ್ರಪ್ಪ

ರೋಹಿತ್ ಚಕ್ರತೀರ್ಥರ ಅಧ್ಯಕ್ಷತೆಯ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ರದ್ದುಗೊಳಿಸಿ, ಈ ಹಿಂದೆ ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ಇರುವ ಪಠ್ಯವನ್ನೇ ಮುಂದುವರಿಸುವಂತೆ ಕೋರಿ ಈಶ್ವರಾನಂದಪುರಿ ಸ್ವಾಮೀಜಿಯವರು ಶಿಕ್ಷಣ ಸಚಿವ ಬಿ.ಸಿ.ನಾಗೇಶ್​ಗೆ ಪತ್ರ ಬರೆದಿದ್ದಾರೆ.

ಈಶ್ವರಾನಂದಪುರಿ ಸ್ವಾಮೀಜಿ
ಈಶ್ವರಾನಂದಪುರಿ ಸ್ವಾಮೀಜಿ
author img

By

Published : Jun 24, 2022, 2:10 PM IST

ಬೆಂಗಳೂರು: ಕುರುಬ ಸಮುದಾಯದ ಪ್ರಭಾವಿ ಸ್ವಾಮೀಜಿಯೊಬ್ಬರು ಪರಿಷ್ಕೃತ ಪಠ್ಯ ಪುಸ್ತಕಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪರಿಷ್ಕೃತ ಪಠ್ಯ ವಿರೋಧಿಸಿ ಕನಕ ಗುರುಪೀಠ ಬೆಂಗಳೂರು ವಿಭಾಗದ ಶಾಖಾಮಠದ ಈಶ್ವರಾನಂದಪುರಿಯವರು ಶಿಕ್ಷಣ ಸಚಿವ ಬಿ.ಸಿ.ನಾಗೇಶ್​ಗೆ ಪತ್ರ ಬರೆದಿದ್ದಾರೆ.

ತಜ್ಞರಲ್ಲದ ರೋಹಿತ್ ಚಕ್ರತೀರ್ಥರ ಅಧ್ಯಕ್ಷತೆಯ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯನ್ನು ರದ್ದುಗೊಳಿಸಿ, ಈಗಾಗಲೇ ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ಇರುವ ಪಠ್ಯವನ್ನೇ ಮುಂದುವರಿಸುವಂತೆ ಪತ್ರದಲ್ಲಿ ಕೋರಿದ್ದಾರೆ.

2021-22ರ 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಭಕ್ತಿ ಪಂಥದ ಕುರಿತು ದಾಸ ಶ್ರೇಷ್ಠ ಕನಕದಾಸರ ಬಗ್ಗೆ ಒಂದು ಪುಟಕ್ಕೂ ಹೆಚ್ಚಿನ ಮಾಹಿತಿ ಇತ್ತು. ಈಗಿನ ಪರಿಷ್ಕರಣೆಯಲ್ಲಿ 2022-23ರ 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದ ಭಕ್ತಿ ಪಂಥದಲ್ಲಿ ಕೇವಲ ಒಂದೇ ಒಂದು ಸಾಲಿನಲ್ಲಿ ಪರಿಚಯಿಸಲಾಗಿದೆ ಎಂದು ಆಕ್ಷೇಪಿಸಿದ್ದಾರೆ.

ಕನಕದಾಸರು 16ನೇ ಶತಮಾನದಲ್ಲಿ ಸಾಮಾಜಿಕ ವೈರುಧ್ಯಗಳ ವಿರುದ್ಧ, ಕಂದಾಚಾರಗಳ ವಿರುದ್ಧ, ಜಾತೀಯತೆಯನ್ನ ಹೋಗಲಾಡಿಸಲು ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಕೀರ್ತನೆಗಳ ಮೂಲಕ ದಾಸ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಕನಕದಾಸರ ಕುರಿತು ಮಾಹಿತಿಯಿಲ್ಲದಿರುವುದು ಎಷ್ಟು ಸರಿ?. ಈ ಎಲ್ಲ ವಿಚಾರಗಳನ್ನು ತಾವು ಮನಗಂಡು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯವರಿಗೆ ಸೂಚನೆ ನೀಡಿ, ಆಗಿರುವ ತಪ್ಪುಗಳನ್ನು ತಿದ್ದಿ ಕನಕದಾಸರ ಕುರಿತು ಸರಿಯಾದ ಮಾಹಿತಿಯನ್ನು ಪಠ್ಯಪುಸ್ತಕದಲ್ಲಿ ನೀಡಬೇಕೆಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಪಠ್ಯ ಪುಸ್ತಕ ವಿವಾದ.. ಸಮಿತಿ ತೆಗೆದಿದ್ದೇನು, ಮರುಸೇರ್ಪಡೆ ಆಗಿದ್ದೇನು? ಸರ್ಕಾರದ ಸ್ಪಷ್ಟನೆ ಹೀಗಿದೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.