ETV Bharat / city

ಬಿಬಿಎಂಪಿ ಸದಸ್ಯರ ಅಧಿಕಾರ ಮುಂದುವರಿಕೆನಾ? ಆಡಳಿತಾಧಿಕಾರಿ ನೇಮಕವಾ? - ಬೆಂಗಳೂರು ನಗರ ಸುದ್ದಿ

ಸೆಪ್ಟೆಂಬರ್​​ 10ಕ್ಕೆ ಬಿಬಿಎಂಪಿ ಸದಸ್ಯರ ಐದು ವರ್ಷದ ಅಧಿಕಾರ ಅವಧಿ ಮುಗಿಯಲಿದ್ದು, ಈಗಿರುವ ಪಾಲಿಕೆ ಸದಸ್ಯರ ಅಧಿಕಾರ ವಿಸ್ತರಣೆ ಅಥವಾ ಆಡಳಿತಾಧಿಕಾರಿ ನೇಮಕ ಮಾಡುವುದರ ಕುರಿತು ಚರ್ಚೆಗಳು ನಡೆಯುತ್ತಿವೆ.

bbmp
ಬಿಬಿಎಂಪಿ
author img

By

Published : Jul 28, 2020, 2:13 PM IST

ಬೆಂಗಳೂರು: ಸೆಪ್ಟೆಂಬರ್​​ 10ಕ್ಕೆ ಬಿಬಿಎಂಪಿ ಸದಸ್ಯರ ಐದು ವರ್ಷದ ಅಧಿಕಾರ ಅವಧಿ ಮುಗಿಯಲಿದ್ದು, ಅವರ ಅಧಿಕಾರದ ಅವಧಿಯನ್ನು ಮುಂದುವರಿಸಬೇಕೇ ಅಥವಾ ಆಡಳಿತಾಧಿಕಾರಿಗಳನ್ನು ನೇಮಿಸಬೇಕೇ ಎಂಬುದರ ಕುರಿತು ಬಿಸಿಬಿಸಿ ಚರ್ಚೆ ನಡೆಯುತ್ತಿದೆ.

ಕೊರೊನಾ ಹಿನ್ನೆಲೆ ಚುನಾವಣೆ ಅಸಾಧ್ಯವಾಗಿದೆ. ಹೀಗಾಗಿ, ಸರ್ಕಾರದ ಮುಂದೆ ಎರಡು ಯೋಜನೆಗಳಿವೆ. ಈಗಿರುವ ಪಾಲಿಕೆ ಸದಸ್ಯರ ಅಧಿಕಾರ ವಿಸ್ತರಣೆ ಅಥವಾ ಆಡಳಿತಾಧಿಕಾರಿ ನೇಮಕ ಮಾಡುವುದು. ಆಡಳಿತಾಧಿಕಾರಿ ನೇಮಕವಾದರೆ, ಐಎಎಸ್ ಅಧಿಕಾರಿ ನೇತೃತ್ವದಲ್ಲಿ ಬಿಬಿಎಂಪಿ ಮುನ್ನಡೆಯಲಿದೆ. ಹೀಗಾದರೆ 198 ಸದಸ್ಯರು ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ.

ಸರ್ಕಾರದ ಮತ್ತೊಂದು ಯೋಜನೆ: ಪಾಲಿಕೆ ಸದಸ್ಯರ ಅಧಿಕಾರ ಅವಧಿಯನ್ನು ಆರು ತಿಂಗಳ ಕಾಲ ವಿಸ್ತರಿಸಲು ಸರ್ಕಾರಕ್ಕೆ ಅಧಿಕಾರ ಇದೆ. ಚುನಾವಣಾ ಸಿದ್ಧತೆಗಳಿಗಾಗಿ ಒಂದು ಬಾರಿ 1998ರ ಜುಲೈ 31ರಿಂದ ಅದೇ ವರ್ಷ ಡಿಸೆಂಬರ್​ 31ರವರೆಗೂ ವಿಸ್ತರಣೆ ಮಾಡಲಾಗಿತ್ತು.

ಈಗಾಗಲೆ ಪಾಲಿಕೆ ಚುನಾವಣೆ ವಿಚಾರ ಕೋರ್ಟ್ ಮುಂದೆ ಎಲೆಕ್ಷನ್ ಕಮಿಷನ್ ಚುನಾವಣಾ ವಿಚಾರವಾಗಿ ಕೋರ್ಟ್ ಮೆಟ್ಟಿಲೇರಿದೆ. ವೋಟರ್ ಲಿಸ್ಟ್, ಡಿಲಿಮಿಟೇಶನ್, ಮೀಸಲಾತಿ ಸಿದ್ಧತೆ, 2011ರ ಜನಸಂಖ್ಯೆ ಆಧಾರದ ಮೇಲೆ ಚುನಾವಣೆ ಮಾಡಲು ಸಿದ್ಧತೆಗೆ ಕಾಲಾವಕಾಶ ಕೇಳಿದ್ದಾರೆ. ಹೀಗಾಗಿ, ಪಾಲಿಕೆ ಸದಸ್ಯರ ಅಧಿಕಾರದ ಅವಧಿ ಮುಂದುವರಿಯುವ ಸಾಧ್ಯತೆ ಇದೆ. ಆದರೆ, ಶಾಸಕರು ಇದಕ್ಕೆ ಅಡ್ಡಗಾಲಾಗುತ್ತಾರಾ? ಎಂಬ ಮಾತುಗಳು ಕೇಳಿ ಬರುತ್ತಿವೆ.

ಬಿಬಿಎಂಪಿ ಪ್ರತಿಪಕ್ಷ ನಾಯಕ ವಾಜಿದ್

ಈ ಕುರಿತು ಬಿಬಿಎಂಪಿ ಪ್ರತಿಪಕ್ಷ ನಾಯಕ ವಾಜಿದ್ ಮಾತನಾಡಿ, ಸೆಪ್ಟೆಂಬರ್ 10ರ ನಂತರವೂ ಅಧಿಕಾರ ವಿಸ್ತರಿಸಲಿ. ಈಗ ಸರ್ಕಾರ ಚಿಂತನೆ ಮಾಡಬೇಕಿದೆ. ಶಾಸಕರು ಇಡೀ ವಾರ್ಡ್​​ನ ರಸ್ತೆ ರಸ್ತೆಗೂ ಹೋಗಲು ಆಗಲ್ಲ. ರಾಜನಂತೆ ಕುಳಿತುಕೊಂಡು ಶಾಸಕರು ಆದೇಶ ಮಾಡಲಿ. ನಾವು ಕೊರೊನಾಕ್ಕಾಗಿ ದುಡಿಯುತ್ತೇವೆ ಎಂದರು. ಅಧಿಕಾರಕ್ಕಾಗಿ ಕೋರ್ಟ್​​ಗೆ ಹೋಗಲ್ಲ. ಬದಲಾಗಿ ಕೊರೊನಾ ಕೆಲಸ ಮಾಡಿ, ಜನರ ಸಹಾಯಕ್ಕಾಗಿ ಕೆಲಸ ಮಾಡಲು ಅಧಿಕಾರ ಬೇಕಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.