ETV Bharat / city

ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ತುರ್ತು ಸಭೆ - Bangalore news

ಬೆಂಗಳೂರು ನಗರದ ನೂತನ ಪೊಲೀಸ್ ಆಯುಕ್ತರಾಗಿ ನೇಮಕಗೊಂಡಿರುವ ಭಾಸ್ಕರ್ ರಾವ್​ ತುರ್ತು ಸಭೆ ಕರೆದಿದ್ದು, ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರು, ಡಿಸಿಪಿಗಳು, ಎಸಿಪಿಗಳು, ಇನ್ಸ್​ಪೆಕ್ಟರ್​ಗಳು ಭಾಗಿಯಾಗಿದ್ದರು.

ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ತುರ್ತು ಸಭೆ
author img

By

Published : Aug 6, 2019, 4:42 PM IST

ಬೆಂಗಳೂರು: ನಗರದ ಇನ್ಫೆಂಟ್ರೆ ರಸ್ತೆಯಲ್ಲಿರುವ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ತುರ್ತು ಸಭೆ ನಡೆಸಿದರು. ಸಭೆಯಲ್ಲಿ ನಗರದ ಎಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು.

370, 35ಎ ರದ್ದು ವಿಚಾರ, ಸ್ವಾತಂತ್ರ್ಯ ದಿನಾಚರಣೆ, ಬಕ್ರೀದ್ ಹಾಗೂ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ಮತ್ತು ವಿಧ್ವಂಸಕ ಕೃತ್ಯಗಳು ನಡೆಯದಂತೆ ಪೂರ್ವಭಾವಿಯಾಗಿ ಸಭೆ ಕರೆಯಲಾಗಿದೆ. ಅಲ್ಲದೆ ನಗರದ ಪುಡಿರೌಡಿಗಳು, ಡ್ರಗ್ಸ್ ಮಾಫಿಯಾ‌ ಸೇರಿ ಇತರೆ ಅಪರಾಧ ಕೃತ್ಯಗಳಿಗೆ ಬ್ರೇಕ್ ಹಾಕುವ ಬಗ್ಗೆ ಆಯಾ ವಿಭಾಗದ ಅಧಿಕಾರಿಗಳು ಅಲರ್ಟ್ ಇರುವಂತೆ ಅಧಿಕಾರಿಗಳಿಗೆ ‌ಕಮಿಷನರ್ ಸೂಚಿಸಿದ್ದಾರೆ. ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರು, ಡಿಸಿಪಿಗಳು, ಎಸಿಪಿಗಳು, ಇನ್ಸ್​ಪೆಕ್ಟರ್​ಗಳು ಭಾಗಿಯಾಗಿದ್ದರು.

ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ತುರ್ತು ಸಭೆ

ಪೊಲೀಸ್ ಅಧಿಕಾರಿಗಳ ಸಭೆ ಬಳಿಕ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾತನಾಡಿ, ಇಂದು ಇನ್ಸ್‌ಪೆಕ್ಟರ್, ಎಸಿಪಿ, ಡಿಸಿಪಿಗಳ ಜೊತೆ ಸಭೆ ಮಾಡಲಾಗಿದೆ. ಸಭೆಯಲ್ಲಿ ಎಲ್ಲಾ ವಿಚಾರಗಳ ಬಗ್ಗೆ ಚರ್ಚೆ ಮಾಡಿ ಸೂಚಿಸಲಾಗಿದೆ. ಮುಖ್ಯವಾಗಿ ಡ್ರಗ್ಸ್ ಸರಬರಾಜಿಗೆ ಕಡಿವಾಣ ಹಾಕಬೇಕು. ಅಲ್ಲದೇ ಶಾಲಾ-ಕಾಲೇಜುಗಳ ಬಳಿ ಡ್ರಗ್ಸ್ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

ಜಮ್ಮು-ಕಾಶ್ಮೀರದಲ್ಲಿ 370 , 35ಎ ರದ್ದು ಸಂಬಂಧ, ಕೇಂದ್ರ ಸಚಿವಾಲಯದಿಂದ ರಾಜ್ಯಕ್ಕೆ ಹಾಗೂ ನಗರಕ್ಕೆ ಸೂಕ್ತ ಭದ್ರತೆ ನೀಡುವಂತೆ ಸೂಚನೆ ಬಂದಿದೆ. ನಗರದಲ್ಲಿ ಯಾವ ಸ್ಥಳಗಳಲ್ಲಿ ಜಮ್ಮು-ಕಾಶ್ಮೀರ ನಿವಾಸಿಗಳು ಇದ್ದಾರೋ, ಅಂತಹ ಏರಿಯಾಗಳಲ್ಲಿ ಬಿಗಿ ಭದ್ರತೆ ನೀಡಬೇಕಿದೆ. ಎಷ್ಟು ಜನ ನಗರದಲ್ಲಿ ಜಮ್ಮು ನಿವಾಸಿಗಳು ಇದ್ದಾರೆ ಎಂಬುದರ ಬಗ್ಗೆ ಮಾಹಿತಿ ನೀಡಿ ಎಂದು ಅಧಿಕಾರಿಗಳಿಗೆ ಸೂಚನ ನೀಡಲಾಗಿದೆ ಎಂದು ಪೊಲೀಸ್​ ಆಯುಕ್ತರು ಮಾಹಿತಿ ನೀಡಿದರು.

Intro:KN_ BNG_01_CP_7204498Body:KN_ BNG_01_CP_7204498Conclusion:ಜಮ್ಮು ಕಾಶ್ಮೀರ ದಲ್ಲಿ 370 ,35 ರದ್ದು ವಿಚಾರ
ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ರಿಂದ ತುರ್ತು ಸಭೆ

ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಇನ್ಫಾಂಟ್ರಿ ರಸ್ತೆಯಲ್ಲಿರುವ ಪೊಲೀಸ್ ಆಯುಕ್ತ ಕಚೇರಿಯ ಲ್ಲಿ ತುರ್ತು ಸಭೆ ಕರೆದಿದ್ದು ನಗರದ ಎಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ.370 ,35a ರದ್ದು ವಿಚಾರ , ಸ್ವಾತಂತ್ರ್ಯ ದಿನಾಚರಣೆ , ಬಕ್ರೀದ್ ಹಾಗೂ ಗಣೇಶ ಹಬ್ಬ ಹಿನ್ನಲೆ ಯಾವುದೇ ಅಹಿತಕರ ಘಟನೆ ಮತ್ತು ವಿದ್ವಂಸಕ ಕೃತ್ಯಗಳು ,ನಗರದ ಪುಡಿರೌಡಿಗಳು,ಡ್ರಗ್ಸ್ ಮಾಫಿಯಾ‌ ಸೇರಿ ಇತರೆ ಅಪರಾಧ ಕೃತ್ಯಗಳಿಗೆ ಬ್ರೇಕ್ ಹಾಕುವ ಬಗ್ಗೆ ಆಯಾ ವಿಭಾಗದ ಅಧಿಕಾರಿಗಳು ಅಲರ್ಟ್ ಇರುವಂತೆ ಅಧಿಕಾರಿಗಳಿಗೆ ‌ಕಮಿಷನರ್ ಸೂಚಿಸಿದ್ದಾರೆ.ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರು,ಡಿಸಿಪಿಗಳು, ಎಸಿಪಿಗಳು, ಇನ್ಸ್ ಪೆಕ್ಟರ್ ಗಳು ಭಾಗಿಯಾಗಿದ್ದಾರೆ

ಪೊಲೀಸ್ ಅಧಿಕಾರಿಗಳ ಸಭೆ ಬಳಿಕ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾತಾಡಿ ಇವತ್ತು ಇನ್ಸ್‌ಪೆಕ್ಟರ್ ,ಎಸಿಪಿ ,ಡಿಸಿಪಿಗಳ ಜೊತೆ ಸಭೆ ಮಾಡಲಾಗಿದೆ.ಸಭೆಯಲ್ಲಿ ಎಲ್ಲಾ ವಿಚಾರಗಳ ಬಗ್ಗೆ ಚರ್ಚೆ ಮಾಡಿ ಸೂಚನೆ ನೀಡಲಾಗಿದೆ. ಮುಖ್ಯವಾಗಿ ಡ್ರಗ್ಸ್ ಸರಬರಾಜು ಬಗ್ಗೆ ಕಡಿವಾಣ ಹಾಕಿವಾಣ ಹಾಕಬೇಕು ಅಂತ.
ಅದಲ್ಲದೇ ಶಾಲಾ ಕಾಲೇಜುಗಳ ಬಳಿ ಡ್ರಗ್ಸ್ ಮಾರಾಟ ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳ ಬೇಕು.
ಹಾಗರ ಜಮ್ಮು ಕಾಶ್ಮೀರ ದಲ್ಲಿ 370 ,35 ರದ್ದು ವಿಚಾರ ಸಂಬಂಧ
ಕೇಂದ್ರ ಸಚಿವಾಲಯದಿಂದ ರಾಜ್ಯಕ್ಕೆ ಹಾಗೂ ನಗರಕ್ಕೆ ಸೂಕ್ತ ಭದ್ರತೆ ನೀಡುವಂತೆ ಸೂಚನೆ ಬಂದಿದ್ದೆ.ನಗರದಲ್ಲಿ ಯಾರು ಜಮ್ಮು ಕಾಶ್ಮಿರ ನಿವಾಸಿಗಳು ಇದ್ದಾರೆ ಅಂತಹ ಏರಿಯಾಗಳಲ್ಲಿ ಬಿಗಿ ಭದ್ರತೆ ನೀಡಿ ಎಷ್ಟು ಜನ ನಗರದಲ್ಲಿ ಜಮ್ಮು ನಿವಾಸಿಗಳು ಇದ್ದಾರೆ ಎಂಬುವುದರ ಬಗ್ಗೆ ಮಾಹಿತಿ ನೀಡಿ ಅಂತ ಅಧಿಕಾರಿಗಳಿಗೆ ಹೇಳಿದ್ದಿನಿ ಎಂದ್ರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.