ETV Bharat / city

ಬಿಎಂಟಿಸಿಯ 2 ಸಾವಿರ ಸಿಬ್ಬಂದಿ ನಾಪತ್ತೆ: ಇದು ವದಂತಿ ಅಷ್ಟೇ ಎಂದ ಅಧಿಕಾರಿಗಳು! - ಬಿಎಂಟಿಸಿ ಎರಡು ಸಾವಿರ ಸಿಬ್ಬಂದಿ ನಾಪತ್ತೆ

ಸಾರಿಗೆ ಸಿಬ್ಬಂದಿ ಕರ್ತವ್ಯದಿಂದ ನಾಪತ್ತೆಯಾಗಿದ್ದಾರೆ ಎಂಬ ಸುದ್ದಿ ಸತ್ಯಕ್ಕೆ ದೂರವಾದ ಮಾತು. ಚಾಲಕರು, ನಿರ್ವಾಹಕರು, ಮೆಕ್ಯಾನಿಕಲ್ ಸಿಬ್ಬಂದಿ ಸೇರಿದಂತೆ ಒಟ್ಟಾರೆಯಾಗಿ 802 ಜನರು ದೀರ್ಘಾವಧಿ ಗೈರಾಗಿದ್ದಾರೆ ಎಂದು ಬಿಎಂಟಿಸಿಯ ಸಂಪರ್ಕಾಧಿಕಾರಿ ಅಜಿತ್ ಸ್ಪಷ್ಟಪಡಿಸಿದರು.

elopement-of-bmtc-employees
ಬಿಎಂಟಿಸಿ
author img

By

Published : Feb 5, 2021, 4:03 PM IST

ಬೆಂಗಳೂರು: ಬಿಎಂಟಿಸಿಯಲ್ಲಿ ಎರಡು ಸಾವಿರ ಸಿಬ್ಬಂದಿ ಕರ್ತವ್ಯದಿಂದ ನಾಪತ್ತೆಯಾಗಿದ್ದಾರೆ ಎಂಬ ಸುದ್ದಿ ಸತ್ಯಕ್ಕೆ ದೂರವಾದ ಮಾತು ಹಾಗೂ ಕೆಲವರು ಮಾಡಿರುವ ವದಂತಿ ಅಷ್ಟೇ. ಚಾಲಕರು, ನಿರ್ವಾಹಕರು, ಮೆಕ್ಯಾನಿಕಲ್ ಸಿಬ್ಬಂದಿ ಸೇರಿದಂತೆ ಒಟ್ಟಾರೆಯಾಗಿ 802 ಜನರು ದೀರ್ಘಾವಧಿ ಗೈರಾಗಿದ್ದಾರೆ ಎಂದು ಬಿಎಂಟಿಸಿಯ ಸಂಪರ್ಕಧಿಕಾರಿ ಅಜಿತ್ ತಿಳಿಸಿದರು.

ನಿಗಮವು ಲಾಕ್​​ಡೌನ್ ಅವಧಿಯ ಸಿಬ್ಬಂದಿ ಗೈರು ಹಾಜರಿ ಪ್ರಕರಣಗಳನ್ನು ಇತ್ಯರ್ಥಪಡಿಸಲು ಸೂಚಿಸಿದೆ. ಸಿಬ್ಬಂದಿಯ ವಿರುದ್ಧ ದಾಖಲಾಗಿರುವ ಗೈರು ಹಾಜರಿ ಪ್ರಕರಣಗಳನ್ನು ವಿಶೇಷ ಪ್ರಕರಣಗಳೆಂದು ಪರಿಗಣಿಸಿ ಅವುಗಳನ್ನು ಮಾನವೀಯತೆ ದೃಷ್ಟಿಯಿಂದ ಲಘುವಾಗಿ ಪರಿಗಣಿಸಿ ಇತ್ಯರ್ಥಪಡಿಸುವುದು ಸೂಕ್ತವೆಂದು ತಿಳಿಸಿದೆ.

ಬಿಎಂಟಿಸಿ ಅಧಿಕಾರಿ

ಅದರಂತೆ ಮಾರ್ಚ್ 23ರಿಂದ ಅಕ್ಟೋಬರ್ 1ರ ಅವಧಿಯಲ್ಲಿ ದಾಖಲಾಗಿರುವ ಗೈರು ಹಾಜರಿ ಪ್ರಕರಣಗಳನ್ನು ಸಂಸ್ಥೆಯ ನೌಕರರ (ನಡತೆ ಮತ್ತು ಶಿಸ್ತು) ನಿಯಮಾವಳಿ 1971ರ ನಿಯಮ-22 ರಡಿಯಲ್ಲಿ ಆರೋಪಣಾ ಪತ್ರ ಜಾರಿಗೊಳಿಸಿ, 1971ರ ಭಾಗ- 3 ರ 18(ಎ&ಬಿ) ರಲ್ಲಿ ಸ್ಪಷ್ಟಪಡಿಸಿರುವ ಯಾವುದೇ ಶಿಕ್ಷೆಗಳನ್ನು ವಿಧಿಸದೆ ಇತ್ಯರ್ಥಪಡಿಸುವಂತೆ ನಿರ್ದೇಶಿಸಲಾಗಿದೆ.

90 ದಿನಗಳಿಗಿಂತ ಹೆಚ್ಚು ಅವಧಿಯ ಗೈರು ಹಾಜರಿ ಪ್ರಕರಣಗಳನ್ನು ಒಂದು ವೇಳೆ ಇಲಾಖಾ ವಿಚಾರಣೆಗೆ ಒಳಪಡಿಸಿದ್ದಲ್ಲಿ ಅಂತಹ ಪ್ರಕರಣಗಳನ್ನು ವಿಚಾರಣೆಯಿಂದ ಹಿಂಪಡೆಯುವಂತೆ ಸೂಚಿಸಿದೆ. ಮುಂದುವರೆದು ಮೇಲ್ಕಂಡ ಅವಧಿಯಲ್ಲಿ ತರಬೇತಿ ಸಿಬ್ಬಂದಿ ವಿರುದ್ಧ ದಾಖಲಾಗಿರುವ ಗೈರು ಹಾಜರಿ ಪ್ರಕರಣಗಳನ್ನು ಸಹ ಇಲಾಖಾ ವಿಚಾರಣೆಗೆ ಒಳಪಡಿಸದೆ, ಕಾರಣ ಕೇಳುವ ಸೂಚನಾ ಪತ್ರವನ್ನು ಜಾರಿಗೊಳಿಸಿ, ಶಿಕ್ಷೆ ನೀಡದೆ 30 ದಿನಗಳ ಅವಧಿಯೊಳಗಾಗಿ ಇತ್ಯರ್ಥಪಡಿಸುವಂತೆ ಆದೇಶಿಸಿದೆ.‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.