ETV Bharat / city

ದ್ವಿತೀಯ ಪಿಯು ರಿಸಲ್ಟ್​: ಪ್ರತಿಭೆಗೆ ಅನುಗುಣವಾಗಿ ಪ್ರಾಮಾಣಿಕ ಫಲಿತಾಂಶ ಎಂದ ಸಚಿವರು - latest news from bengaluru

ರಾಜ್ಯದಲ್ಲಿ ಈ ಬಾರಿ ಪರೀಕ್ಷೆ ಇಲ್ಲದೆಯೇ ನಿರೀಕ್ಷೆಯಂತೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ.

education-minister-suresh-kumar-on-puc-result
ಪ್ರತಿಭೆಗೆ ಅನುಗುಣವಾಗಿ ಪ್ರಾಮಾಣಿಕವಾಗಿದೆ ದ್ವಿತೀಯ ಪಿಯು ಫಲಿತಾಂಶ : ಶಿಕ್ಷಣ ಸಚಿವ ಸುರೇಶ್ ಕುಮಾರ್
author img

By

Published : Jul 20, 2021, 6:55 PM IST

ಬೆಂಗಳೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ರದ್ದಾದ ಹಿನ್ನೆಲೆಯಲ್ಲಿ ಫಲಿತಾಂಶವನ್ನು ನೀಡುವ ಸಂಬಂಧ ಪರಿಗಣಿಸಬಹುದಾದ ಮಾನದಂಡಗಳು ಹಾಗೂ ಅನುಸರಿಸಬಹುದಾದ ವಿಧಾನಗಳ ಬಗ್ಗೆ ವರದಿ ನೀಡಲು ಇಲಾಖೆಯ 12 ತಜ್ಞರ ಸಮಿತಿಯನ್ನು ರಚಿಸಿ, ನಂತರ ಸಮಿತಿ ಶಿಫಾರಸಿನ ಮೇರೆಗೆ ಫಲಿತಾಂಶ ಪ್ರಕಟಿಸಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.

ಇಂದು ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದ ಸುರೇಶ್​ಕುಮಾರ್​, ಪರೀಕ್ಷೆಗಾಗಿ ರಾಜ್ಯಾದ್ಯಂತ 6,66,497 ವಿದ್ಯಾರ್ಥಿಗಳು ನೋಂದಣಿಯಾಗಿದ್ದು ಇದರಲ್ಲಿ 5,90,153 ಹೊಸ ವಿದ್ಯಾರ್ಥಿಗಳು ಹಾಗೂ 76,344 ಪುನರಾವರ್ತಿತ ವಿದ್ಯಾರ್ಥಿಗಳಿದ್ದರು ಎಂದು ಸಚಿವರು ಮಾಹಿತಿ ನೀಡಿದರು.

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ ಹೊಸ ವಿದ್ಯಾರ್ಥಿಗಳ ಫಲಿತಾಂಶವನ್ನು, ಪ್ರಥಮ ಪಿಯುಸಿಯಲ್ಲಿ ಮತ್ತು ಎಸ್ಎಸ್ಎಲ್​ಸಿಯಲ್ಲಿ ಪಡೆದ ಅಂಕಗಳು ಸೇರಿಸಿದಂತೆ ದ್ವಿತೀಯ ಪಿಯುಸಿಯ ಶೈಕ್ಷಣಿಕ ಚಟುವಟಿಕೆಗಳಿಗೆ ನಿಗದಿಪಡಿಸಿದ ಅಂಕಗಳು ಮತ್ತು ಕೃಪಾಂಕಗಳ ಆಧಾರದ ಮೇಲೆ ಅಂಕಗಳನ್ನು ನಿಗದಿಪಡಿಸಿ ಫಲಿತಾಂಶವನ್ನು ಸಿದ್ಧಪಡಿಸಲಾಗಿದೆ. ಯಾವುದೇ ಮಗುವಿಗೆ ಅನ್ಯಾಯವಾಗದ ರೀತಿಯಲ್ಲಿ, ಪ್ರತಿಭೆಗೆ ಅನುಗುಣವಾಗಿ ಪ್ರಾಮಾಣಿಕ ಫಲಿತಾಂಶ ನೀಡಲು ಮುಂದಾಗಿದ್ದೇವೆ ಅಂತ ಸಚಿವರು ತಿಳಿಸಿದರು.

ಮೊಬೈಲ್​​ಗೆ ಬರಲಿದೆ ದ್ವಿತೀಯ ಪಿಯುಸಿ ಫಲಿತಾಂಶ

STA (Student Tracking System)ನಲ್ಲಿ ನೋಂದಾಯಿಸಿಕೊಂಡಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಅವರ ಮೊಬೈಲ್​ಗೆ ಎಸ್​ಎಂಎಸ್ ಮೂಲಕ ಫಲಿತಾಂಶ ಬಂದು ತಲುಪುತ್ತದೆ. ಹೀಗಾಗಿ, ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕಾಲೇಜಿಗೆ ಬರುವ ಅಗತ್ಯವಿಲ್ಲ. ಹಾಗೇ karresults.nic.in ವೆಬ್​ಸೈಟ್​​ ಮೂಲಕವೂ ಫಲಿತಾಂಶ ನೋಡಬಹುದು ಎಂದು ಸಚಿವರು ಮಾಹಿತಿ ನೀಡಿದರು.

ಫಲಿತಾಂಶ ತಿರಸ್ಕರಿಸಿದರೆ ಆಗಸ್ಟ್ 19ರಲ್ಲಿ ಪರೀಕ್ಷೆ

ಈಗ ಹೊರಡಿಸಿರುವ ಫಲಿತಾಂಶದ ಬಗ್ಗೆ ಅಸಮಾಧಾನ ಇದ್ದರೆ, ವಿದ್ಯಾರ್ಥಿಗಳು ಆಗಸ್ಟ್​​ನಲ್ಲಿ ಪರೀಕ್ಷೆಯಲ್ಲಿ ಹಾಜರಾಗಲು ಅವಕಾಶವಿದೆ. ಖಾಸಗಿ ವಿದ್ಯಾರ್ಥಿಗಳಿಗೂ ಕೂಡಾ ಪರೀಕ್ಷೆ ನಡೆಸಿ ಫಲಿತಾಂಶ ಒದಗಿಸಲಾಗುತ್ತದೆ.‌ ಫಲಿತಾಂಶ ತಿರಸ್ಕರಿಸಿದ ವಿದ್ಯಾರ್ಥಿಗಳು ಮಾಹಿತಿಯನ್ನು ಪ್ರಾಂಶುಪಾಲರು SATsನಲ್ಲಿ ಅಪಡೇಟ್ ಮಾಡಲು ಜುಲೈ 30 ಕಡೆಯ ದಿನವಾಗಿದೆ.

ಪ್ರಾಂಶುಪಾಲರು ಪರೀಕ್ಷಾ ಅರ್ಜಿಗಳನ್ನು ಜಿಲ್ಲಾ ಉಪನಿರ್ದೇಶಕರ ಕಚೇರಿಗೆ ಕಡ್ಡಾಯವಾಗಿ ಸಲ್ಲಿಸಲು, ಜುಲೈ 31ರಂದು ಕಡೆಯ ದಿನವಾಗಿದೆ‌. ಕ್ರೋಢಿಕೃತ ಪರೀಕ್ಷಾ ಅರ್ಜಿಗಳನ್ನು ಜಿಲ್ಲಾ ಉಪನಿರ್ದೇಶಕರ ಕಚೇರಿಯಿಂದ ಕೇಂದ್ರ ಕಚೇರಿಗೆ ಕಡ್ಡಾಯವಾಗಿ ಆಗಸ್ಟ್ 2ರೊಳಗೆ ಸಲ್ಲಿಸಬೇಕಿದೆ. ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನೂ ಪ್ರಕಟಿಸಿದ್ದು, ಆಗಸ್ಟ್ 19ರಿಂದ ಸೆಪ್ಟೆಂಬರ್ 3ರ ತನಕ ನಡೆಸಲಾಗುತ್ತದೆ.

ಡಿಸ್ಟಿಂಕ್ಷನ್ ಹಾಗೂ ಫಸ್ಟ್ ಕ್ಲಾಸ್ ವಿದ್ಯಾರ್ಥಿಗಳು

4,50,706 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಮತ್ತು ಫಸ್ಟ್ ಕ್ಲಾಸ್​​ನಲ್ಲಿ ಪಾಸ್ ಆಗಿದ್ದರೆ, ಸೆಕೆಂಡ್ ಕ್ಲಾಸ್​ನಲ್ಲಿ 1,67,055 ಹಾಗೂ 68,729 ವಿದ್ಯಾರ್ಥಿಗಳು ಜಸ್ಟ್ ಪಾಸ್ ಆಗಿದ್ದಾರೆ. 600ಕ್ಕೆ 600 ಅಂಕವನ್ನು ಸುಮಾರು 2,239 ವಿದ್ಯಾರ್ಥಿಗಳು ಪಡೆದಿದ್ದಾರೆ.

7 ವಿದ್ಯಾರ್ಥಿಗಳ ಫಲಿತಾಂಶಕ್ಕೆ ತಡೆ

ರಾಜ್ಯದಲ್ಲಿ 7 ವಿದ್ಯಾರ್ಥಿಗಳ ಫಲಿತಾಂಶ ತಡೆಹಿಡಿಯಲಾಗಿದೆ. ಕಾಲೇಜಿನ ಪ್ರಾಂಶುಪಾಲರು ಸರಿಯಾದ ರೀತಿಯಲ್ಲಿ ಅಂಕಗಳನ್ನು ಅಪ್ಲೋಡ್ ಮಾಡದ ಕಾರಣ, ಅಂಕಗಳ ಗೊಂದಲ ಇದ್ದ ಹಿನ್ನೆಲೆಯಲ್ಲಿ 7 ವಿದ್ಯಾರ್ಥಿಗಳ ಫಲಿತಾಂಶ ತಡೆಹಿಡಿಲಾಗಿದೆ. ಇವರ ಫಲಿತಾಂಶವನ್ನ ಜುಲೈ 27 ರಂದು ಪ್ರಕಟಿಸಲಾಗುತ್ತದೆ ಎಂದು ವಿವರಿಸಿದರು.

600-600 ಅಂಕ ಪಡೆದ ಟಾಪ್ 5 ಜಿಲ್ಲೆಗಳು

ಜಿಲ್ಲೆಗಳು ವಿದ್ಯಾರ್ಥಿಗಳ ಸಂಖ್ಯೆ
ದಕ್ಷಿಣ ಕನ್ನಡ445
ಬೆಂಗಳೂರು ದಕ್ಷಿಣ302
ಬೆಂಗಳೂರು ಉತ್ತರ261
ಉಡುಪಿ149
ಹಾಸನ104

ಸಂಯೋಜನೆವಾರು ಮಾಹಿತಿ

ಕಲಾ ವಿಭಾಗ18
ವಾಣಿಜ್ಯ ವಿಭಾಗ292
ವಿಜ್ಞಾನ ವಿಭಾಗ1929

ಒಟ್ಟು 2,239 ವಿದ್ಯಾರ್ಥಿಗಳ 600ಕ್ಕೆ 600 ಅಂಕಗಳನ್ನು ಗಳಿಸಿ ಡಿಸ್ಟಿಂಕ್ಷನ್​​ನಲ್ಲಿ ಪಾಸ್ ಆಗಿದ್ದಾರೆ. ವಿಶೇಷಚೇತನ ಮಕ್ಕಳು ಕೂಡಾ ಉತ್ತಮ ರೀತಿಯ ಅಂಕಗಳನ್ನ ಪಡೆದಿದ್ದಾರೆ. ಬಹು ಅಂಗವೈಕಲ್ಯ, ದೃಷ್ಟಿ ದೌರ್ಬಲ್ಯ ಸೇರಿದಂತೆ 9ಕ್ಕೂ ಹೆಚ್ಚು ವಿಕಲಚೇತನ ಮಕ್ಕಳು 242 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ 27 ಜನರು ಉನ್ನತ ಶ್ರೇಣಿ ಪಡೆದಿದ್ದರೆ, 166 ಫಸ್ಟ್ ಕ್ಲಾಸ್, 32 ಸೆಕೆಂಡ್ ಕ್ಲಾಸ್ ಹಾಗೂ 17 ವಿದ್ಯಾರ್ಥಿಗಳು ಜಸ್ಟ್ ಪಾಸ್ ಆಗಿದ್ದಾರೆ.

ಇದನ್ನೂ ಓದಿ: ಸಿಎಂ ವಿದಾಯಕ್ಕೆ ವೇದಿಕೆ ಸಜ್ಜು : ಜು.26 ರಂದು ಬಿಎಸ್​ವೈ ರಾಜೀನಾಮೆ ನಿರ್ಧಾರ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.