ETV Bharat / city

ಪಠ್ಯದಲ್ಲಿ ಇತಿಹಾಸ ಸರಿ ಪಡಿಸಿದ್ದೇವೆ, ಟಿಪ್ಪು ಪಾಠ ಕೈಬಿಡುವ ಸುದ್ದಿ ಸತ್ಯಕ್ಕೆ ದೂರ : ಸಚಿವ ನಾಗೇಶ್ - ಟಿಪ್ಪು ವಿಷಯ ಕೈಬಿಡುವ ಸುದ್ದಿ ಸತ್ಯಕ್ಕೆ ದೂರ

ಒಂದಷ್ಟು ಇತಿಹಾಸದಲ್ಲಿನ ವಿಚಾರಗಳು ಪಠ್ಯ ಪುಸ್ತಕದಿಂದ ಕಡಗಣನೆಯಾಗಿದೆ. ಇದನ್ನು ಉದ್ದೇಶಪೂರ್ವಕವಾಗಿ ಮಾಡಿಲ್ಲ. ಅವುಗಳನ್ನು ಪರಿಚರಿಸಲು ಪ್ರಯತ್ನ ಮಾಡಿದ್ದೇವೆ. ಮಕ್ಕಳು ಓದಲೇಬೇಕಾದ ಪಠ್ಯವನ್ನು ಮತ್ತೆ ತರುವ ಪ್ರಯತ್ನ ಮಾಡಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯ ಬೆರೆಸುವ ಕೆಲಸ ಮಾಡಿಲ್ಲ..

ಸಚಿವ ಬಿ.ಸಿ.ನಾಗೇಶ್
bc nagesh
author img

By

Published : Mar 25, 2022, 1:36 PM IST

ಬೆಂಗಳೂರು : ಪಠ್ಯದಲ್ಲಿ ಇತಿಹಾಸವನ್ನು ತಿರುಚುವ ಪ್ರಯತ್ನ ಆಗಿತ್ತು. ಅದನ್ನು ಈಗ ಸರಿಪಡಿಸುವ ಕೆಲಸ ಮಾಡಿದ್ದೇವೆ. ಟಿಪ್ಪು ಸುಲ್ತಾನ್​ ವಿಚಾರವನ್ನು ಪಠ್ಯದಿಂದ ಕೈಬಿಡುವ ಸುದ್ದಿ ಸತ್ಯಕ್ಕೆ ದೂರವಾದದ್ದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಪಠ್ಯಕ್ರಮದಲ್ಲಿ ಈ ಹಿಂದೆ ಏನೇನು ದೋಷಗಳು ಆಗಿದ್ದವು, ತಾಂತ್ರಿಕ ತಪ್ಪುಗಳು ಆಗಿದ್ದವೋ ಅದನ್ನು ಸರಿಪಡಿಸುವ ಕೆಲಸ ಮಾಡಿದ್ದೇವೆ.

ಸದ್ಯದಲ್ಲೇ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ವಿವರವಾಗಿ ಮಾಹಿತಿ ಕೊಡುತ್ತೇನೆ. ಟಿಪ್ಪು ವಿಚಾರವನ್ನು ಪಠ್ಯದಿಂದ ಕೈಬಿಡುವ ಸುದ್ದಿ ಸತ್ಯಕ್ಕೆ ದೂರವಾದದ್ದು ಎಂದು ಸ್ಪಷ್ಟಪಡಿಸಿದರು. ಒಂದಷ್ಟು ಇತಿಹಾಸದಲ್ಲಿನ ವಿಚಾರಗಳು ಪಠ್ಯ ಪುಸ್ತಕದಿಂದ ಕಡಗಣನೆಯಾಗಿದೆ. ಇದನ್ನು ಉದ್ದೇಶಪೂರ್ವಕವಾಗಿ ಮಾಡಿಲ್ಲ. ಅವುಗಳನ್ನು ಪರಿಚರಿಸಲು ಪ್ರಯತ್ನ ಮಾಡಿದ್ದೇವೆ. ಮಕ್ಕಳು ಓದಲೇಬೇಕಾದ ಪಠ್ಯವನ್ನು ಮತ್ತೆ ತರುವ ಪ್ರಯತ್ನ ಮಾಡಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯ ಬೆರೆಸುವ ಕೆಲಸ ಮಾಡಿಲ್ಲ ಎಂದರು.

ಪಠ್ಯದಲ್ಲಿ ಇತಿಹಾಸ ಸರಿಪಡಿಸಿದ್ದೇವೆ, ಟಿಪ್ಪು ವಿಷಯ ಕೈಬಿಡುವ ಸುದ್ದಿ ಸತ್ಯಕ್ಕೆ ದೂರ ಎಂದಿರುವ ಸಚಿವ ನಾಗೇಶ್..

ಒತ್ತಡಕ್ಕೆ ಮಣಿದ ಸಿದ್ದರಾಮಯ್ಯ : ದುಪ್ಪಟ್ಟಾಗೆ ಅವಕಾಶ ನೀಡುವ ಸಿದ್ದರಾಮಯ್ಯ ಆಗ್ರಹ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ನಾಗೇಶ್, ಸಿದ್ದರಾಮಯ್ಯ ಒಬ್ಬ ಸಿಎಂ ಆಗಿ, ಲಾಯರ್ ಆಗಿ ಬೆಳೆದಂತವರು. ಅವರು ಯಾವುದೋ ಒತ್ತಡಕ್ಕೆ ಮಣಿದು ಆ ಆಗ್ರಹ ಮಾಡಿದ್ದಾರೆ ಎಂದು ಟೀಕಿಸಿದರು. ಸದನದಲ್ಲಿ ಭಾಷಣ ಮುಗಿಸಿದ ಬಳಿಕ ಸಿದ್ದರಾಮಯ್ಯ ಯಾರದೋ ಒತ್ತಡಕ್ಕೆ ಮತ್ತೆ ಎದ್ದು ನಿಂತು ದುಪ್ಪಟ್ಟಾ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.

ಅವರು ತಮ್ಮ ಒಟ್ಟು ಭಾಷಣದಲ್ಲಿ ಹಿಜಾಬ್ ಬಗ್ಗೆ ಏನೂ ಮಾತನಾಡಿರಲಿಲ್ಲ. ಅನುಭವಿ ರಾಜಕಾರಣಿಯಾಗಿ, ಪ್ರತಿಪಕ್ಷ ನಾಯಕನಾಗಿ ಅವರಿಗೆ ಸಂವಿಧಾನದಲ್ಲಿ ನ್ಯಾಯಾಂಗಕ್ಕೆ ಇರುವ ಪ್ರಾಮುಖ್ಯತೆ ಗೊತ್ತಿದೆ. ಹೈಕೋರ್ಟ್ ತೀರ್ಪು ಏನಿದೆ ಅದನ್ನೇ ಸರ್ಕಾರ ಪಾಲಿಸುತ್ತದೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: SSLC ಪರೀಕ್ಷೆಗೆ ದಿನಗಣನೆ: ಎಕ್ಸಾಂ ಬರೆಯಲಿದ್ದಾರೆ 8,73,846 ವಿದ್ಯಾರ್ಥಿಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.