ETV Bharat / city

ರಾಜ್ಯದ ಆಡಳಿತ ಯಂತ್ರಕ್ಕೆ ಇ-ಕಚೇರಿ ಸ್ಪರ್ಶ: ಈ ಯೋಜನೆಯ ಅನುಷ್ಠಾನ ಹೇಗಿದೆ? - ಡಿಜಿಟಲೀಕರಣ

ಇ-ಆಡಳಿತದಲ್ಲಿ ಕರ್ನಾಟಕ ‌ಮುಂಚೂಣಿಯಲ್ಲಿರುವ ರಾಜ್ಯ. ತಂತ್ರಜ್ಞಾನ ಅಳವಡಿಕೆಯಲ್ಲಿ ಮೊದಲ ಸ್ಥಾನದಲ್ಲಿರುವ ಕರ್ನಾಟಕ ತನ್ನ ಆಡಳಿತದಲ್ಲಿ ಪರಿಣಾಮಕಾರಿಯಾಗಿ ಇ-ಆಡಳಿತವನ್ನು ಜಾರಿಗೊಳಿಸುತ್ತಿದೆ. ಇದರ ಜೊತೆಗೆ ಇ-ಕಚೇರಿ ಜಾರಿಗೆ ಬಂದಿದ್ದು, ಈ ಯೋಜನೆಯ ಸ್ಥಿತಿಗತಿ ಹೇಗಿದೆ ಎಂಬುದರ ವರದಿ ಇಲ್ಲಿದೆ.

e office
ಇ ಕಚೇರಿ
author img

By

Published : Aug 16, 2020, 4:48 PM IST

ಬೆಂಗಳೂರು: ಇದು ಡಿಜಿಟಲ್ ಯುಗ. ಈ ಕಾಲಕ್ಕೆ ತಕ್ಕಂತೆ ತಮ್ಮ ಕಾರ್ಯವೈಖರಿಯನ್ನು ಬದಲಾಯಿಸಿಕೊಳ್ಳುವುದು ಸಮಯದ ಆದ್ಯತೆಯಾಗಿದೆ. ಅದರಂತೆ ಸರ್ಕಾರಿ ಆಡಳಿತ ಯಂತ್ರವೂ ಡಿಜಿಟಲೀಕರಣಗೊಳ್ಳುವುದು ಅನಿವಾರ್ಯವಾಗಿದೆ. ಅದರ ಫಲಸ್ವರೂಪವೇ ಇ-ಆಡಳಿತ.‌

ಇ-ಆಡಳಿತ ಅಳವಡಿಸುವಲ್ಲಿ ನಮ್ಮ ರಾಜ್ಯ ಅಗ್ರಗಣ್ಯವಾಗಿದೆ. ತನ್ನ ಎಲ್ಲಾ ಆಡಳಿತದ ಹಂತಗಳನ್ನು ತ್ವರಿತವಾಗಿ ಇ-ಆಡಳಿತದ ವ್ಯಾಪ್ತಿಗೆ ತರುತ್ತಿದ್ದು, ಡಿಜಿಟಲೀಕರಣದ ಸಾಧ್ಯವಾಗುವ ಎಲ್ಲಾ ಹೆಜ್ಜೆಗಳನ್ನು ಆಡಳಿತ ಯಂತ್ರದಲ್ಲಿ ಗಟ್ಟಿಯಾಗಿ ಊರುತ್ತಿದೆ. ಜೊತೆಗೆ ಇನ್ನೂ ಒಂದು ಹೆಜ್ಜೆ ಮುಂದೆ‌ ಹೋಗಿ ರಾಜ್ಯ ಸರ್ಕಾರ ತನ್ನ ಆಡಳಿತ ಯಂತ್ರವನ್ನು ಇ-ಕಚೇರಿಯಾಗಿ ಬದಲಾಯಿಸುತ್ತಿದೆ.

2018ರಿಂದ ಇ-ಕಚೇರಿ ವ್ಯವಸ್ಥೆಯನ್ನು ರಾಜ್ಯಾದ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲಾಗುತ್ತಿದೆ. ಕಡತಗಳ ತ್ವರಿತ ವಿಲೇವಾರಿ, ಸಮಯ ಉಳಿತಾಯ, ದಕ್ಷತೆ, ಪಾರದರ್ಶಕತೆ, ಹೊಣೆಗಾರಿಕೆ ಹೆಚ್ಚಳ ಜತೆಗೆ ಸಾರ್ವಜನಿಕರಿಗೆ ಸೇವೆಯನ್ನು ಬೇಗನೆ ನೀಡುವ ಉದ್ದೇಶದಿಂದ ಇ-ಕಚೇರಿಯನ್ನು ಜಾರಿಗೆ ತರಲಾಗುತ್ತಿದೆ.

ಇ-ಕಚೇರಿ ಅನುಷ್ಠಾನ ಕ್ರಮಗಳೇನು?

ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್ಐಸಿ) ಅಭಿವೃದ್ಧಿಪಡಿಸಿರುವ ಇ-ಕಚೇರಿ ಜಾರಿಗೆ ರಾಜ್ಯ ಹೆಚ್ಚಿನ ಒತ್ತು ನೀಡುತ್ತಿದೆ. ಈಗಾಗಲೇ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆ ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರಿ ಕಚೇರಿಗಳ ಆವರಣದಲ್ಲಿ ಇ-ಕಚೇರಿಗಳನ್ನು ಆರಂಭಿಸುವಂತೆ ಸುತ್ತೋಲೆ ಹೊರಡಿಸಿದೆ.

ಅದರಂತೆ ತಮ್ಮ ಅಧೀನದಲ್ಲಿ ಬರುವ ಎಲ್ಲಾ ಸರ್ಕಾರಿ ಕಚೇರಿಗಳ ಆವರಣದಲ್ಲಿ ಇ-ಕಚೇರಿ ಸ್ಥಾಪಿಸುವಂತೆ ಸ್ಥಳೀಯ ಆಯುಕ್ತರು, ಜಿಲ್ಲಾಧಿಕಾರಿಗಳು ಮತ್ತು ಇತರ ಸಂಬಂಧಪಟ್ಟ ಅಧಿಕಾರಿಗಳಿಗೆ ಸುತ್ತೋಲೆಯಲ್ಲಿ ಆದೇಶ ನೀಡಲಾಗಿದೆ. ಪೊಲೀಸ್ ಆಯುಕ್ತರ ಕಚೇರಿ, ಪಂಚಾಯತ್​ಗಳು ಮತ್ತು ಇತರ ಕಚೇರಿಗಳು ಇದನ್ನು ತಕ್ಷಣದಿಂದಲೇ ಜಾರಿಗೆ ತರುವಂತೆ ಸೂಚಿಸಿದೆ.

ಈ ಸಂಬಂಧ ಸ್ಥಳೀಯ ಆಯುಕ್ತರ ಕಚೇರಿಯಲ್ಲಿ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ. ಅಲ್ಲದೇ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿಗಳನ್ನು ಸ್ಥಾಪಿಸಲಾಗುತ್ತಿದ್ದು ಇ-ಕಚೇರಿ ಜಾರಿಗೆ ತರಲು ಆಧಾರ್ ಮತ್ತು ಸಕಾಲ ಅಧಿಕಾರಿಗಳು ಸಹಾಯ ಮಾಡುತ್ತಿದ್ದಾರೆ.

ಜೊತೆಗೆ ಸಚಿವಾಲಯದ ಎಲ್ಲಾ ಸಚಿವರ ಕಚೇರಿಗಳಲ್ಲಿ ಇ-ಕಚೇರಿ ಕಡ್ಡಾಯವಾಗಿ ಜಾರಿಗೊಳಿಸಲು ಮುಖ್ಯ ಕಾರ್ಯದರ್ಶಿ ನಿರ್ದೇಶನ ನೀಡಿದ್ದಾರೆ. ಎಲ್ಲಾ ಪತ್ರ ವ್ಯವಹಾರ, ಅರ್ಜಿ ಸ್ವೀಕಾರ, ಅವುಗಳ ವಿಲೇವಾರಿಯನ್ನು ಇ-ಕಚೇರಿಯಡಿ ಕಡ್ಡಾಯವಾಗಿ ಮಾಡುವಂತೆ ಸೂಚನೆ ನೀಡಲಾಗಿದೆ.

ಸದ್ಯದ ಇ-ಕಚೇರಿ ಸ್ಥಿತಿಗತಿ ಹೇಗಿದೆ?

ಇ-ಕಚೇರಿ ಯೋಜನೆಯನ್ನು ರಾಜ್ಯ ಮಟ್ಟದಿಂದ ತಾಲೂಕು ಮಟ್ಟದವರೆಗೆ ಅಳವಡಿಸಲಾಗುತ್ತಿದೆ. ಅದರಂತೆ ಸಿಎಂ ಕಚೇರಿ ಸೇರಿದಂತೆ 18 ಸಚಿವರ ಕಚೇರಿಗಳಲ್ಲಿ ಇ-ಕಚೇರಿ ತಂತ್ರಾಂಶ ಅಳವಡಿಸಲಾಗಿದೆ. ಈವರೆಗೆ ಒಟ್ಟು 385 ಕಚೇರಿಗಳನ್ನು ಇ-ಕಚೇರಿಗೆ ಒಳಪಡಿಸಲಾಗಿದೆ.

ಆಗಸ್ಟ್ ಮೊದಲ ವಾರದವರೆಗೆ ರಾಜ್ಯ ಸರ್ಕಾರದ 43 ಸಚಿವಾಲಯಗಳು, 2709 ಸಿಬ್ಬಂದಿ ಇ-ಕಚೇರಿ ತಂತ್ರಾಂಶ ಮೂಲಕ 1,24,163 ಕಡತಗಳನ್ನು ಸೃಜಿಸಿ ಕೆಲಸ ನಿರ್ವಹಣೆ ಮಾಡಿರುತ್ತಾರೆ. ಇದರ ಜೊತೆಗೆ ಸಿಬ್ಬಂದಿ ರಜೆ ನಿರ್ವಹಣೆಯನ್ನು ಇ-ಕಚೇರಿ ತಂತ್ರಾಂಶ ಮೂಲಕ ನಿರ್ವಹಿಸುತ್ತಿದ್ದಾರೆ.

ಜಿಲ್ಲಾ ಮಟ್ಟದಲ್ಲಿ ರಾಜ್ಯದ 30 ಜಿಲ್ಲಾಧಿಕಾರಿಗಳ ಕಚೇರಿ, 30 ಜಿಲ್ಲಾ ಪಂಚಾಯತ್​ಗಳು, 30 ಪೊಲೀಸ್​ ವರಿಷ್ಠಾಧಿಕಾರಿಗಳ ಕಚೇರಿ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಗಳಲ್ಲಿ 9,223 ಸಿಬ್ಬಂದಿ ಇ-ಕಚೇರಿ ತಂತ್ರಾಂಶವನ್ನು ಬಳಕೆ ಮಾಡುತ್ತಿದ್ದಾರೆ. ಒಟ್ಟು 3,52,754 ಕಡತಗಳನ್ನು ಸೃಜಿಸಲಾಗಿದೆ ಎಂದು ಇ-ಕಚೇರಿ ಯೋಜನಾ ನಿರ್ದೇಶಕರು ಮಾಹಿತಿ ನೀಡಿದ್ದಾರೆ.

53 ನಿಗಮ ಮಂಡಳಿಗಳಲ್ಲಿ ಇ-ಕಚೇರಿ ಪ್ರಾರಂಭಿಸಲಾಗಿದೆ. ಇಲಾಖೆಗಳ ನಿರ್ದೇಶಕರು/ಆಯುಕ್ತರ ಕಚೇರಿಗಳಲ್ಲಿ ಇ-ಕಚೇರಿ ಪ್ರಾರಂಭಿಸಲಾಗಿದೆ. ಒಟ್ಟಾರೆಯಾಗಿ ರಾಜ್ಯದಲ್ಲಿ 385 ಕಚೇರಿಗಳಲ್ಲಿ ಇ-ಕಚೇರಿ ಪ್ರಾರಂಭಿಸಲಾಗಿದೆ. 19,066 ಸಿಬ್ಬಂದಿ ಇ-ಕಚೇರಿ ತಂತ್ರಾಂಶ ಬಳಕೆದಾರರಾಗಿದ್ದಾರೆ. 5,94,568 ಕಡತಗಳು ಇ-ಕಚೇರಿ ತಂತ್ರಾಂಶದಲ್ಲಿ ಸೃಜನೆಯಾಗಿದ್ದು, 43,48,124 ಪತ್ರಗಳನ್ನು ಇ-ಕಚೇರಿ ತಂತ್ರಾಂಶ ಮೂಲಕ ಸ್ವೀಕರಿಸಲಾಗಿದೆ ಎಂದು ಇ-ಆಡಳಿತ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸದ್ಯದ ಇ-ಕಚೇರಿ ಅನುಷ್ಠಾನ ಪ್ರಗತಿ

ಇ-ಕಚೇರಿ ಅನುಷ್ಠಾನವನ್ನು 4 ಹಂತಗಳಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ ಸರ್ಕಾರ ಸಚಿವಾಲಯವನ್ನು ಸೇರಿಸಲಾಗಿತ್ತು. 2ನೇ ಹಂತದಲ್ಲಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಗುರಿಯಾಗಿಸಿಕೊಂಡು ಮೊದಲನೇ ಮತ್ತು ಎರಡನೇ ಹಂತದಲ್ಲಿ ಅನುಷ್ಠಾ‌ನ ಮುಕ್ತಾಯವಾಗಿದೆ.

ಮೂರನೇ ಹಂತದಲ್ಲಿ ತಾಲೂಕು ಮಟ್ಟದ ಕಚೇರಿಗಳು, ತಹಶೀಲ್ದಾರ್ ಕಚೇರಿ, ತಾಲೂಕು ಪಂಚಾಯತ್ ಕಚೇರಿಗಳನ್ನು ಗುರಿಯಾಗಿ ಇಟ್ಟುಕೊಳ್ಳಲಾಗಿದೆ. ಹಾಗೂ ಮೂರನೇ ಹಂತದ ಕೆಲಸ ಪ್ರಾರಂಭವಾಗಿದ್ದು, ಸದ್ಯ 33 ಕಚೇರಿಗಳ 594 ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಇ- ಕಚೇರಿ ತಂತ್ರಾಂಶದ ವ್ಯಾಪ್ತಿಗೆ ತರಲಾಗಿದೆ. ಡಿಸೆಂಬರ್ 2020ರ ಅಂತ್ಯಕ್ಕೆ ಮೂರನೇ ಹಂತವನ್ನು ಮುಕ್ತಾಯ ಮಾಡಲು ಉದ್ದೇಶಿಸಲಾಗಿದೆ.

ಕೋವಿಡ್ 19 ಸಂದರ್ಭದಲ್ಲಿ ಇ-ಕಚೇರಿ ಪಾತ್ರ

ಕೋವಿಡ್ 19 ಸಂಕ್ರಾಮಿಕ ರೋಗದ ವಿರುದ್ಧದ ಹೋರಾಟದ ಈ ಸಂದರ್ಭದಲ್ಲಿ ಇ-ಕಚೇರಿ ತಂತ್ರಾಂಶ ಬಹಳ ಮುಖ್ಯ ಪಾತ್ರವಹಿಸಿದೆ. ಸರ್ಕಾರದ ಶಕ್ತಿ ಕೇಂದ್ರವಾದ ಸಚಿವಾಲಯದ ಅಧಿಕಾರಿಗಳು ಸರಾಗವಾಗಿ ಕೆಲಸ ನಿರ್ವಹಿಸಲು, ಇಲಾಖೆ ಮುಖ್ಯಸ್ಥರು ತ್ವರಿತವಾದ ನಿರ್ಧಾರಗಳನ್ನು ಕೈಗೊಳ್ಳಲು ಇ-ಕಚೇರಿ ತಂತ್ರಾಂಶ ಸಹಕಾರಿಯಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇ-ಕಚೇರಿ ಮೂಲಕ ಕಡತ ವಿಲೇವಾರಿ ಪ್ರಕ್ರಿಯೆ ಪಾರದರ್ಶಕವಾಗಿ, ತ್ವರಿತವಾಗಿ ನಡೆಯುತ್ತಿದೆ. ಯಾವ ಕಡತ ಯಾವ ಅಧಿಕಾರಿ ಬಳಿ ಇದೆ?, ಯಾವ ಇಲಾಖೆಯಲ್ಲಿದೆ?, ಎಷ್ಟು ದಿನಗಳಿಂದ ಇದೆ?, ಎಂಬೆಲ್ಲಾ ಮಾಹಿತಿ ಇ-ಕಚೇರಿಯಿಂದ ಗೊತ್ತಾಗುತ್ತದೆ.

ಕೋವಿಡ್ 19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ 573 ಅಧಿಕಾರಿಗಳಿಗೆ ವಿಪಿಎನ್ ತಂತ್ರಜ್ಞಾನ ಬಳಸಿ ಕಚೇರಿಯ ಕಡತ ವ್ಯವಹಾರವನ್ನು ಕಚೇರಿಯ ಹೊರಭಾಗದಿಂದ ನಿರ್ವಹಿಸುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.