ETV Bharat / city

ಎತ್ತಣ ರಾಮ ಮಂದಿರ ಎತ್ತಣ ಕಾಂಗ್ರೆಸ್​​ ಎತ್ತಣಿಂದೆತ್ತ ಸಂಬಂಧವಯ್ಯಾ?: ಡಿ.ವಿ.ಸದಾನಂದ ಗೌಡ - ಅಯೋಧ್ಯ ಭೂಮಿ ಪೂಜೆ ಕಾರ್ಯಕ್ರಮ ಆಮಂತ್ರಣ

ರಾಮನಿದ್ದನೇ ಎನ್ನುವ ದಾಖಲೆ ಕೇಳಿ, ರಾಮ ಮಂದಿರ ಸ್ಥಾಪನೆ ಹತ್ತಿಕ್ಕಲು ಶತ ಪ್ರಯತ್ನ ಪಟ್ಟಿದ್ದ ಕೈ ನಾಯಕರು ಇಂದು ಅಯೋಧ್ಯ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಆಮಂತ್ರಿಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಕಾಂಗ್ರೆಸ್ಸಿಗೆ ಶ್ರೀರಾಮ ಮಂದಿರ ನಿರ್ಮಾಣಕ್ಕೂ ಎತ್ತಣಿಂದೆತ್ತ ಸಂಬಂಧ? ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಸದಾನಂದ ಗೌಡ ಟೀಕಿಸಿದ್ದಾರೆ.

dv-sadanandagouda-statement-on-ayodhya-land-worship
ಡಿವಿ ಸದಾನಂದಗೌಡ
author img

By

Published : Aug 4, 2020, 6:53 PM IST

ಬೆಂಗಳೂರು: ಶ್ರೀರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ತಮಗೂ ಆಮಂತ್ರಣ ನೀಡಬೇಕು ಎಂದು ಬೇಡಿಕೆ ಇಟ್ಟಿರುವ ಕಾಂಗ್ರೆಸ್ಸಿಗರು ಮತ್ತವರ ಸಾಥಿಗಳನ್ನು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸದಾನಂದ ಗೌಡ ತೀವ್ರ ತರಾಟೆಗೆ ತೆಗೆದುಕೊಂಡರು.

ವಿಡಿಯೊ ಸಂದೇಶದ ಮೂಲಕ ಹೇಳಿಕೆ ನೀಡಿದ ಸಚಿವರು, ಅವರ ಬೇಡಿಕೆ ಹಾಸ್ಯಾಸ್ಪದವಾಗಿದೆ. ಮೊದಲನೆಯದಾಗಿ ಇದು ಸರ್ಕಾರಿ ಕಾರ್ಯಕ್ರಮವಲ್ಲ. ಶ್ರೀರಾಮ ಮಂದಿರ ನಿರ್ಮಾಣಕ್ಕೆ ರಚಿಸಲಾಗಿರುವ ಟ್ರಸ್ಟ್ ಸಂಘಟಿಸುತ್ತಿರುವ ಕಾರ್ಯಕ್ರಮ. ಈ ಕಾರ್ಯಕ್ರಮಕ್ಕೆ ಯಾರನ್ನು ಆಮಂತ್ರಿಸಬೇಕು? ಯಾರನ್ನು ಬಿಡಬೇಕು? ಎಂಬುದು ಸಂಘಟಕರಿಗೆ ಬಿಟ್ಟ ವಿಚಾರ. ಅಷ್ಟಕ್ಕೂ ಕಾಂಗ್ರೆಸ್ಸಿಗೂ, ಶ್ರೀರಾಮ ಮಂದಿರ ನಿರ್ಮಾಣಕ್ಕೂ ಎತ್ತಣಿಂದೆತ್ತ ಸಂಬಂಧ ಎಂದು ಪ್ರಶ್ನಿಸಿದರು.

ಮೊದಲಿನಿಂದಲೂ ಅಯೋಧ್ಯೆ ಚಳುವಳಿಯನ್ನು ಹತ್ತಿಕ್ಕಲು ಪ್ರಯತ್ನಿಸಿದವರು ಕಾಂಗ್ರೆಸ್ಸಿಗರು. ಕರ ಸೇವಕರ ಮೇಲೆ ಗುಂಡು ಹಾರಿಸಿದರು. ಅಕ್ರಮ ಬಾಬರಿ ಕಟ್ಟಡ ನೆಲಸಮವಾದಾಗ ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರವನ್ನು ವಜಾ ಮಾಡಿದವರು ಕಾಂಗ್ರೆಸ್ಸಿಗರು. ಮತ್ತೆ ವಿವಾದಾತ್ಮಕ ಬಾಬರಿ ಕಟ್ಟಡವನ್ನು ಪುನರ್ ನಿರ್ಮಾಣ ಮಾಡಲು ಯೋಚಿಸಿದವರು ಕಾಂಗ್ರೆಸ್ಸಿಗರು.

ಕಾಂಗ್ರೆಸ್​ ಆಮಂತ್ರಣ ಕುರಿತು ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ಸದಾನಂದ ಗೌಡ

ರಾಮ ಜನ್ಮಭೂಮಿ ವಿವಾದವನ್ನು ಶೀಘ್ರ ಇತ್ಯರ್ಥ ಗೊಳಿಸಲು ಕೋಟ್ಯಂತರ ಹಿಂದೂ ಶ್ರದ್ಧಾಳುಗಳು ಹಂಬಲಿಸುತ್ತಿದ್ದಾರೆ. ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಪರವಾಗಿ ಹಾಜರಾಗುವ ಇದೇ ಕಾಂಗ್ರೆಸ್ ಘಟಾನುಘಟಿ ವಕೀಲರು ಚುನಾವಣೆ ನಂತರ ಪ್ರಕರಣದ ವಿಚಾರಣೆ ಮಾಡುವಂತೆ ಕೋರ್ಟಿನಲ್ಲಿ ವಾದಿಸುತ್ತಾರೆ. ಭಾರತ-ಶ್ರೀಲಂಕಾ ನಡುವೆ ಇರುವ ಪಾರಂಪರಿಕ ರಾಮಸೇತು ಅವಶೇಷಗಳನ್ನು 'ಸೇತುಸಮುದ್ರಂ' ಯೋಜನೆ ಹೆಸರಲ್ಲಿ ನಾಶ ಮಾಡಲು ಮುಂದಾದವರು ಕಾಂಗ್ರೆಸ್ಸಿಗರು.

ಹಾಗೆಯೇ ಶ್ರೀರಾಮನಿದ್ದ ಎನ್ನುವುದಕ್ಕೆ ಯಾವುದೇ ಐತಿಹಾಸಿಕ ದಾಖಲೆ ಇಲ್ಲ ಎಂದು ಸರ್ವೋಚ್ಚ ನ್ಯಾಯಾಲಯದಲ್ಲಿ 2007ರಲ್ಲಿ ಅಫಿಡವಿಟ್ ಸಲ್ಲಿಸಿದವರು ಕಾಂಗ್ರೆಸ್ಸಿಗರು. ಮೊನ್ನೆ ಕೂಡ ಅಷ್ಟೇ, ಶಿಲಾನ್ಯಾಸವನ್ನು ಮುಂದೂಡುವಂತೆ ತಮ್ಮ ಚೇಲಾಗಳ ಮೂಲಕ ಪಿಐಎಲ್ ದಾಖಲಿಸಲು ಹೋಗಿ ಕೋರ್ಟಿನಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ.

ಇಂಥ ಕಾಂಗ್ರೆಸ್ಸಿಗರು ಇಂದು ಶಿಲಾನ್ಯಾಸ ಕಾರ್ಯಕ್ರಮಕ್ಕೆ ಆಹ್ವಾನ ಬಯಸುತ್ತಿದ್ದಾರೆ. ಈ ಐತಿಹಾಸಿಕ ಕ್ಷಣದ ಭಾಗವಾಗಲು ಪ್ರಯತ್ನಿಸುತ್ತಿದ್ದಾರೆ. ಇದು ಅವರ ಹತಾಶ ಭಾವನೆ. ಭಗವಾನ್ ಶ್ರೀ ರಾಮಚಂದ್ರ ಇಂಥವರಿಗೆ ಇನ್ನಾದರೂ ಸದ್ಭುದ್ಧಿ ಕರುಣಿಸಿ ಎಂದಷ್ಟೇ ಈ ಸಂದರ್ಭದಲ್ಲಿ ಪ್ರಾರ್ಥಿಸುತ್ತೇನೆ ಎಂದು ಸದಾನಂದ ಗೌಡ ಹೇಳಿದರು.

'ಯಶಸ್ವಿಯಾಗಿ ಮಂದಿರ ಶಿಲಾನ್ಯಾಸ ನಡೆಯಲಿ'

ಅಯೋಧ್ಯೆಯಲ್ಲಿ ನಾಳೆ ಆಯೋಜಿಸಿರುವ ಶ್ರೀ ರಾಮಮಂದಿರ ನಿರ್ಮಾಣ ಭೂಮಿ ಪೂಜೆ ಮತ್ತು ಶಿಲಾನ್ಯಾಸ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಜರುಗಲಿ ಎಂದು ಸಚಿವ ಡಿ.ವಿ.ಎಸ್ ಶುಭ ಹಾರೈಸಿದ್ದಾರೆ.

ಕೋಟ್ಯಂತರ ಭಾರತೀಯರು ಎದುರು ನೋಡುತ್ತಿದ್ದ ಶುಭಘಳಿಗೆ ಸಮೀಪಿಸಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಯೋಧ್ಯೆ ಆಂದೋಲನದಲ್ಲಿ ಪ್ರಮುಖ ಪಾತ್ರವಹಿಸಿದ್ದ ಪಕ್ಷದ ಹಿರಿಯ ನಾಯಕ ಮಾಜಿ ಉಪ ಪ್ರಧಾನಿ ಲಾಲಕೃಷ್ಣ ಅಡ್ವಾಣಿ, ಬಿಜೆಪಿ ಮಾಜಿ ಅಧ್ಯಕ್ಷ ಡಾ. ಮುರಳಿ ಮನೋಹರ್ ಜೋಶಿ ಮುಂತಾದ ಹಿರಿಯ ನಾಯಕರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ ಎಂದು ಸಚಿವರು ಮಾಧ್ಯಮ ಹೇಳಿಕೆ ಮೂಲಕ ತಿಳಿಸಿದರು.

ಮರ್ಯಾದಾ ಪುರುಷೋತ್ತಮ ರಾಮಚಂದ್ರ ಭಾರತೀಯರ ಆರಾಧ್ಯದೈವ. ನಮ್ಮಂತಹ ಕೋಟ್ಯಂತರ ಶ್ರದ್ಧಾಳುಗಳು ಪ್ರಾರ್ಥನೆ ಫಲಿಸುವ ಕ್ಷಣ ಬಂದೇಬಿಟ್ಟಿದೆ. ಅಯೋಧ್ಯೆ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ, ಶ್ರೀ ರಾಮಮಂದಿರ ಪುನರ್ ನಿರ್ಮಾಣ ಶಿಲಾನ್ಯಾಸ ಕ್ಕೆ ವೇದಿಕೆ ಸಜ್ಜುಗೊಂಡಿದೆ. ಸಾಮಾನ್ಯ ಪರಿಸ್ಥಿತಿಯಲ್ಲಿ ಯಾಗಿದ್ದರೆ ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಅಯೋಧ್ಯೆಯಲ್ಲಿ ಲಕ್ಷ್ಮೀಪತಿ ಲಕ್ಷ ಜನ ಸೇರುತ್ತಿದ್ದರು.

ಆದರೆ ಕೊರೊನಾ ಸಾಂಕ್ರಾಮಿಕ ರೋಗದ ಪರಿಣಾಮವಾಗಿ ಸರಳವಾಗಿ ಕೆಲವೇ ಕೆಲವು ಆಯ್ದ ಜನರ ಸಮ್ಮುಖದಲ್ಲಿ ಶಿಲಾನ್ಯಾಸ ನಡೆಯಲಿದೆ. ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸುತ್ತೇನೆ ಎಂದು ಸಚಿವರು ಹೇಳಿದರು.

ಇತಿಹಾಸ ನೆನಪಿಸಿದ ಡಿವಿಎಸ್:​​

ಹದಿನಾರನೇ ಶತಮಾನದ ಆದಿಯಲ್ಲಿ (1628-29) ಮೊಘಲ್ ದೊರೆ ಬಾಬರನ ಜಿಹಾದಿ ಪಡೆ ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರವನ್ನು ಧ್ವಂಸ ಮಾಡಿ ಅದರ ಮೇಲೆ ಅಕ್ರಮ ಬಾಬರಿ ಕಟ್ಟಡ ನಿರ್ಮಾಣ ಮಾಡಿದಾಗಿನಿಂದ ಇಲ್ಲಿಯವರೆಗೆ ಹಿಂದೂಗಳು ತಮ್ಮ ಶ್ರದ್ಧಾಕೇಂದ್ರದ ಪುನರ್‌ನಿರ್ಮಾಣಕ್ಕಾಗಿ ನಡೆಸಿದ ಹೋರಾಟ ಮಾಡಿದ ಬಲಿದಾನವನ್ನು ಅವರು ನೆನಪಿಸಿಕೊಂಡರು.

2003ರಲ್ಲಿ ಅಲಹಾಬಾದ್ ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ವಿವಾದಕ್ಕೆ ಸಂಬಂಧಿಸಿದ ಎಲ್ಲ ಕಕ್ಷಿದಾರರು ಉಪಸ್ಥಿತಿಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ವಿವಾದಿತ ಜಾಗದಲ್ಲೇ ನಡೆಸಿದ ಉತ್ಖನನದಲ್ಲಿ ಪುರಾತನ ಮಂದಿರ ಇರುವ ಬಗ್ಗೆ ಅನೇಕ ಕುರುಹುಗಳು ದೊರೆತಿದ್ದವು. ಉತ್ಖನನದ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಚಿತ್ರೀಕರಿಸಲಾಗಿತ್ತು.

ಉತ್ಖನನ ವರದಿ ಹಾಗೂ ಐತಿಹಾಸಿಕ ದಾಖಲೆಗಳ ಆಧಾರದ ಮೇಲೆ ದೇಶದ ಸರ್ವೋಚ್ಚ ನ್ಯಾಯಾಲಯ ಹಲವು ಶತಮಾನಗಳ ಹಳೆಯದಾದ ಈ ವಿವಾದವನ್ನು ಅಂತಿಮವಾಗಿ 2019ರ ನವೆಂಬರ್ 9ರಂದು ಬಗೆಹರಿಸಿತು. ಐತಿಹಾಸಿಕ ತೀರ್ಪು ಪ್ರಕಟಿಸಿದ ಸರ್ವೋಚ್ಛ ನ್ಯಾಯಾಲಯದ ರಾಮಜನ್ಮ ಭೂಮಿಯನ್ನು ಹಿಂದೂಗಳಿಗೆ ಒಪ್ಪಿಸಿತು ಎಂದು ಅವರು ಹಿಂದಿನ ಘಟನಾವಳಿಗಳನ್ನು ವಿಸ್ತೃತವಾಗಿ ವಿವರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.