ETV Bharat / city

ಜಲಮಂಡಳಿ ಸದಸ್ಯ ಸ್ಥಾನಕ್ಕೆ ಡಿವಿಎಸ್ ಶಿಫಾರಸ್ಸು ಮೇರೆಗೆ ನೇಮಕ : ಹೈಕೋರ್ಟ್ ಅಸಮಾಧಾನ - ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ

ಜಲಮಂಡಳಿ ಸದಸ್ಯ ಸ್ಥಾನಕ್ಕೆ ನಿಗದಿಪಡಿಸಿರುವ ಅರ್ಹತೆ ಇಲ್ಲದಿದ್ದರೂ ರುದ್ರೇಗೌಡ ಅವರನ್ನು ಮಂಡಳಿಗೆ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಕೇವಲ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡರ ಶಿಫಾರಸ್ಸಿನಂತೆ ಮುಖ್ಯಮಂತ್ರಿಗಳು ರುದ್ರೇಗೌಡ ಅವರನ್ನು ನೇಮಕ ಮಾಡಿ ಆದೇಶಿಸಿದ್ದು, ಅದನ್ನು ರದ್ದುಪಡಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು.

dv sadananda gowda Recommendation for water board member position
ಹೈಕೋರ್ಟ್
author img

By

Published : Feb 12, 2021, 8:28 PM IST

ಬೆಂಗಳೂರು : ನಿಗದಿತ ಅರ್ಹತೆ ಹೊಂದಿರದಿದ್ದರೂ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡರ ಶಿಫಾರಸ್ಸು ಮೇರೆಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಜಲ ಮಂಡಳಿ) ಸದಸ್ಯ ಸ್ಥಾನಕ್ಕೆ ರುದ್ರೇಗೌಡ ಅವರನ್ನು ನೇಮಿಸಿದ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆ ರಾಜ್ಯ ಸರ್ಕಾರ, ಮೂರು ವಾರಗಳಲ್ಲಿ ಜಲಮಂಡಳಿಯ ಆಡಳಿತ ಮಂಡಳಿಯನ್ನು ಪುನರ್ ರಚಿಸುವುದಾಗಿ ಹೈಕೋರ್ಟ್​ಗೆ ಮಾಹಿತಿ ನೀಡಿದೆ. ಬಿಡಬ್ಲ್ಯೂಎಸ್ಎಸ್​ಬಿ ಗೆ ರುದ್ರೇಗೌಡ ಅವರ ನೇಮಕಾತಿ ಪ್ರಶ್ನಿಸಿ ಜಲಮಂಡಳಿಯ ಎಸ್ಸಿ-ಎಸ್ಟಿ ನೌಕರರ ಕಲ್ಯಾಣ ಸಂಘ ಸಲ್ಲಿಸಿದ್ದ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ರುದ್ರೇಗೌಡ ಅವರ ನೇಮಕಾತಿಯ ದಾಖಲೆಗಳನ್ನು ಪರಿಶೀಲಿಸಿದ ಪೀಠ, ಕೇಂದ್ರ ಸಚಿವ ಡಿ.ವಿ. ಸದಾದನಂದಗೌಡ ಅವರ ಶಿಫಾರಸ್ಸಿನಂತೆ ಜಲಮಂಡಳಿ ಸದಸ್ಯರ ಹುದ್ದೆಗೆ ರುದ್ರೇಗೌಡ ಅವರನ್ನು ನೇಮಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಸೂಚಿಸಿದ್ದಾರೆ. ಆದರೆ, ರುದ್ರೇಗೌಡ ಅವರಿಗೆ ಜಲಮಂಡಳಿಯ ಸದಸ್ಯರಾಗುವ ನಿಗದಿತ ಅರ್ಹತೆ ಇಲ್ಲ. ಅವರನ್ನು ನೇಮಕ ಮಾಡುವ ಮುನ್ನ ಅರ್ಹತೆ ಪರಿಶೀಲಿಸಿರುವ ಬಗ್ಗೆ ಸರ್ಕಾರದ ಆದೇಶದಲ್ಲಿ ಯಾವುದೇ ಉಲ್ಲೇಖವಿಲ್ಲ. ಆದ್ದರಿಂದ ಅವರ ನೇಮಕಾತಿ ಬಗ್ಗೆ ಸಂಜೆ 4.45 ರೊಳಗೆ ಸರ್ಕಾರ ವಿವರಣೆ ನೀಡಬೇಕು. ಇಲ್ಲದಿದ್ದರೆ ಕೇಂದ್ರ ಸಚಿವರನ್ನು ಅರ್ಜಿಯಲ್ಲಿ ಪ್ರತಿವಾದಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿ ವಿಚಾರಣೆಯನ್ನು ಮುಂದೂಡಿತು.

ಸಂಜೆ 4.45ಕ್ಕೆ ಅರ್ಜಿ ಮತ್ತೆ ವಿಚಾರಣೆಗೆ ಬಂದಾಗ ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಜಲಮಂಡಳಿಯ ಆಡಳಿತ ಮಂಡಳಿಯನ್ನು ಮೂರು ವಾರದಲ್ಲಿ ಪುನರ್ ರಚಿಸುವುದಾಗಿ ತಿಳಿಸಿದರು. ಹೇಳಿಕೆ ದಾಖಲಿಸಿಕೊಂಡ ಪೀಠ, ವಿಚಾರಣೆಯನ್ನು ಮಾರ್ಚ್ 5ಕ್ಕೆ ಮುಂದೂಡಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.