ETV Bharat / city

ಡ್ರಗ್ಸ್ ಮಾರಾಟ: ದಂಧೆಕೋರರ ವಿನೂತನ ತಂತ್ರ ಬಯಲಿಗೆಳೆದ ಸಿಸಿಬಿ - Drugs worth crore seized in Bangalore

ರಾಜಧಾನಿಯಲ್ಲಿ ಬೇರೂರಿರುವ ಮಾದಕ ವಸ್ತು ಮಾರಾಟ ಜಾಲ ವಿಸ್ತಾರವಾಗುತ್ತಲೇ ಇದೆ. ಡ್ರಗ್ಸ್ ವಿರುದ್ಧ ನಗರ ಪೊಲೀಸರು ಸಮರ ಸಾರಿದ್ದು, ಇದೀಗ ಕೋಟ್ಯಂತರ ರೂ. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.

Drugs
ವಶಕ್ಕೆ ಪಡೆದ ಮಾದಕ ವಸ್ತು
author img

By

Published : Dec 10, 2021, 9:41 AM IST

ಬೆಂಗಳೂರು: ಪೊಲೀಸರು ಚಾಪೆಗೆ ಕೆಳಗೆ ತೂರಿದರೆ ಡ್ರಗ್ ಪೆಡ್ಲರ್​​ಗಳು ರಂಗೋಲಿ ಕೆಳಗೆ ತೂರುವರು ಅನ್ನೋದಕ್ಕೆ ಈ ಪ್ರಕರಣವೇ ಸಾಕ್ಷಿ. ಪೊಲೀಸರಿಗೆ ಸಿಕ್ಕಿಬೀಳದಿರಲು ದಂಧೆಕೋರರು ಹೊಸ ತಂತ್ರ ಅನುಸರಿಸುತ್ತಿದ್ದಾರೆ.

ಇತ್ತೀಚೆಗೆ ಆಹಾರದ ಪ್ಯಾಕೆಟ್​​​ಗಳಲ್ಲಿ ಡ್ರಗ್ಸ್ ಸಾಗಾಟ ಮಾಡುತಿದ್ದ ಐವರು ಆರೋಪಿಗಳಾದ ಕೇರಳ ಮೂಲದ ಮೊಹಮ್ಮದ್ ಸಕಾರಿಯ, ಶಾಮಿಲ್, ಪ್ರಣವ್, ಅನುಭವ್ ರವೀಂದ್ರನ್, ಶ್ಯಾಮ್ ದಾಸ್ ಎಂಬವರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳ ಕೃತ್ಯ ಬೆಳಕಿಗೆ ಬಂದಿದೆ.

ಒಂದೆಡೆ, ಆಹಾರದ ಪ್ಯಾಕೆಟ್​​ಗಳಲ್ಲಿ ಗ್ರಾಹಕರಿಗೆ ಡ್ರಗ್ಸ್ ಸರಬರಾಜು‌ ಮಾಡಿದರೆ, ಮತ್ತೊಂದೆಡೆ ಡ್ರಗ್ ಪೆಡ್ಲರ್​​ಗಳೇ ನಿಗದಿತ ಸ್ಥಳದಲ್ಲಿ ಡ್ರಗ್ಸ್ ಇಟ್ಟು ಗ್ರಾಹಕರಿಗೆ ನೀಡಿ ಪೊಲೀಸರಿಗೆ ಯಾಮಾರಿಸುತ್ತಿರುವ ಸಂಗತಿ ಬೆಳಕಿಗೆ ಬಂದಿದೆ‌.

ಆನ್​​ಲೈನ್ ಮುಖಾಂತರ ಗ್ರಾಹಕರಿಂದ ಡ್ರಗ್ಸ್ ವ್ಯವಹಾರ ಕುದುರಿಸಿಕೊಳ್ಳುತ್ತಿದ್ದ ಡ್ರಗ್ಸ್ ಕಿಂಗ್​​ಪಿನ್‌ಗಳು ಆರ್ಡರ್ ಪಡೆದು ತಾವು ನೇಮಿಸಿಕೊಂಡಿದ್ದ ಸಬ್‌ಡ್ರಗ್ಸ್ ಪೆಡ್ಲರ್​​ಗಳ ಮೂಲಕ ಸರಬರಾಜು ಮಾಡುತ್ತಿದ್ದರು‌. ಪೊಲೀಸರಿಗೆ ಸಿಕ್ಕಿ ಬೀಳದಿರಲು ಚಾಲಕಿ ಗ್ರಾಹಕರನ್ನು ಸಂಪರ್ಕಿಸಿ ತಾನು ಹೇಳಿದ ಕಡೆಯಲ್ಲಿ ಮಾದಕ ವಸ್ತು ಪಡೆಯುವಂತೆ ಸೂಚಿಸುತ್ತಿದ್ದರು.

ಲೊಕೇಷನ್ ಹಾಕಿ ನಿಗದಿತ ಜಾಗದಲ್ಲಿ ಮರದ ಬಳಿ, ಕಂಬಗಳ ಬಳಿ ಹೀಗೆ.. ನಾನಾ ಕಡೆಗಳಲ್ಲಿ ಡ್ರಗ್ಸ್ ಇಟ್ಟು ನಂತರ ಪಡೆಯುವಂತೆ ಹೇಳುತ್ತಿದ್ದರು.‌ ಗ್ರಾಹಕರು ಆರೋಪಿಗಳ ಸೂಚನೆಯಂತೆ ಸ್ಥಳಕ್ಕೆ ಹೋಗಿ ಡ್ರಗ್ಸ್ ಪಡೆದುಕೊಳ್ಳುತ್ತಿದ್ದರು.

ಲೊಕೇಷನ್ ಹಾಕಿ ನಿಗದಿತ ಜಾಗದಲ್ಲಿ  ಡ್ರಗ್ಸ್ ಮಾರಾಟ

ಗ್ರಾಹಕರ ಮೂಲಕ ಆರೋಪಿಗಳನ್ನು ಹಿಡಿಯಲು ಪೊಲೀಸರು ಸ್ಥಳಕ್ಕೆ ಹೋದಾಗ ಅಲ್ಲಿ ಡ್ರಗ್ಸ್ ಪೆಡ್ಲರ್​​ಗಳೇ ಇರುತ್ತಿರಲಿಲ್ಲ‌. ಈ ಮೂಲಕ ಆರೋಪಿಗಳು ಚಾಣಕ್ಯ ತಂತ್ರ ಅನುಸರಿಸುತ್ತಿದ್ದರು ಎಂದು ತಿಳಿದು ಬಂದಿದೆ. ಈ ಜಾಲದಲ್ಲಿ ತೊಡಗಿಸಿಕೊಂಡಿದ್ದ ದಂಧೆಯ ಕಿಂಗ್​​ಪಿನ್​​ಗಳು ನಾಪತ್ತೆಯಾಗಿದ್ದು, ಸಿಸಿಬಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಇದನ್ನೂ ಓದಿ: ಜೀವಂತ ಮೊಸಳೆ ಮರಿ ಮಾರಾಟ ಯತ್ನ: ಬೆಂಗಳೂರಲ್ಲಿ ಇಬ್ಬರ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.