ETV Bharat / city

ಬೆಂಗಳೂರಿನಲ್ಲಿ ತಂದೆ-ಮಗನ ಗಾಂಜಾ ದಂಧೆ.. ಪೊಲೀಸ್​ ದಾಳಿಯಲ್ಲಿ ಸಿಕ್ಕಿಬಿದ್ದ ಪುತ್ರ - drug pedler from tamilnadu who arrested in banglore

ಮಾದಕ ವಸ್ತು ಮಾರಾಟ ದಂಧೆಯಲ್ಲಿ ಸಕ್ರಿಯನಾಗಿದ್ದ ತಮಿಳುನಾಡು ಮೂಲದ ಆರೋಪಿಯನ್ನು ಎಚ್.ಎಸ್.ಆರ್ ಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಸಾಧಿಕ್ ಎಂದು ಗುರುತಿಸಲಾಗಿದೆ. ಆರೋಪಿಯ ತಂದೆಯೂ ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದು, ಮಗನ ಬಂಧನದ ನಂತರ ಆತ ನಾಪತ್ತೆಯಾಗಿರುವದಾಗಿ ತಿಳಿದುಬಂದಿದೆ.

drug-pedler-from-tamilnadu-who-arrested-in-banglore
ಬೆಂಗಳೂರಿನಲ್ಲೊಂದು ತಂದೆ ಮಗನ ಗಾಂಜಾ ಮಾರಾಟ ದಂಧೆ
author img

By

Published : Apr 16, 2022, 12:13 PM IST

ಬೆಂಗಳೂರು : ಮಾದಕ ವಸ್ತು ಮಾರಾಟ ದಂಧೆಯಲ್ಲಿ ಸಕ್ರಿಯನಾಗಿದ್ದ ತಮಿಳುನಾಡು ಮೂಲದ ಆರೋಪಿಯನ್ನು ಎಚ್.ಎಸ್.ಆರ್ ಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಸಾಧಿಕ್ ಎಂದು ಗುರುತಿಸಲಾಗಿದೆ. ಏಪ್ರಿಲ್ 12ರಂದು‌ ಎಚ್.ಎಸ್.ಆರ್ ಲೇಔಟ್ ವ್ಯಾಪ್ತಿಯಲ್ಲಿ ಅನುಮಾನಾಸ್ಪದವಾಗಿ ಟಿವಿಎಸ್ ಎಕ್ಸೆಲ್ ನಲ್ಲಿ ತಿರುಗುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಬಂಧಿತ ಆರೋಪಿಯಿಂದ 5 ಕೆ.ಜಿ 300 ಗ್ರಾಂ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಬೆಂಗಳೂರಿನಲ್ಲಿ ತಂದೆ ಮಗನ ಗಾಂಜಾ ಮಾರಾಟ ದಂಧೆ, ಮಗನ ಬಂಧನ

ಬಳಿಕ ಹೆಚ್ಚಿನ ವಿಚಾರಣೆ ವೇಳೆ ಆರೋಪಿಯು ತನ್ನ ತಂದೆ ಅಮೀರ್ ಜೊತೆಗೂಡಿ, ಒಡಿಶಾದಿಂದ ತಮಿಳುನಾಡಿಗೆ ಗಾಂಜಾ ತರಿಸಿಕೊಂಡು ಬಳಿಕ ಬೆಂಗಳೂರಿಗೆ ತಂದು ಮಾರಾಟ ಮಾಡುತ್ತಿದ್ದುದಾಗಿ ಹೇಳಿದ್ದಾರೆ. ಆರೋಪಿಯ ಮಾಹಿತಿ ಮೇರೆಗೆ ಒಟ್ಟು 52.50 ಲಕ್ಷ ಮೌಲ್ಯದ 105 ಕೆ.ಜಿ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸದ್ಯ ಮಗ ಸಾಧಿಕ್ ಬಂಧನದ ನಂತರ ತಂದೆ ಅಮೀರ್ ನಾಪತ್ತೆಯಾಗಿದ್ದು ಹೆಚ್.ಎಸ್.ಆರ್ ಲೇಔಟ್ ಪೊಲೀಸರಿಂದ ಶೋಧ ಕಾರ್ಯ ಮುಂದುವರೆದಿದೆ.

ಓದಿ : ವಿಜಯಪುರದಲ್ಲಿ ಕಾರಿನ ಗಾಜು ಒಡೆದು 3 ಲಕ್ಷ ರೂ. ದೋಚಿದ್ದ ಪ್ರಕರಣ: ಸಿಸಿಟಿವಿಯಲ್ಲಿ ಕೃತ್ಯ ಸೆರೆ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.