ಬೆಂಗಳೂರು: ನ್ಯುಮೋಕೊಕಲ್ ಕಾಂಜುಗೇಟ್ ಲಸಿಕೆ(pneumococcal conjugate vaccine) ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನು ನಿನ್ನೆ ಹಮ್ಮಿಕೊಳ್ಳಾಲಾಗಿತ್ತು. ವಿಶ್ವ ನ್ಯುಮೋನಿಯಾ ದಿನದ(pneumonia day) ಪ್ರಯುಕ್ತ ವಿಶೇಷ ಆರೋಗ್ಯ ಆಯುಕ್ತ ತ್ರಿಲೋಕ್ ಚಂದ್ರ ಪಿಸಿವಿ ಲಸಿಕೆಯನ್ನು ಟೌನ್ಹಾಲ್ ಬಳಿಯ ದಾಸಪ್ಪ ಆಸ್ಪತ್ರೆಯಲ್ಲಿ(Bangalore Dasappa hospital) “ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ” ಅಡಿ ಪರಿಚಯಿಸಿದರು.
ಈ ನ್ಯುಮೋಕೊಕಲ್ ಕಾಯಿಲೆಯು (Pneumococcal disease) ಸ್ಟ್ರೆಪ್ಟೋಕೊಕಸ್ ನ್ಯುಮೋನಿಯಾನಿಂದ (Streptococcus pneumoniae) ಉಂಟಾಗುವ ರೋಗಗಳ ಗುಂಪಿನ ಒಂದು ಹೆಸರು. ಸ್ಟ್ರೆಪ್ಟೋಕೊಕಸ್ ನ್ಯುಮೋನಿಯಾ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ(disease for children) ಹೆಚ್ಚಾಗಿ ಕಂಡು ಬರುತ್ತವೆ. ಚಿಕ್ಕ ಮಕ್ಕಳು, ವಿಶೇಷವಾಗಿ 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, ವಯಸ್ಸಾದವರು, ರೋಗ ನಿರೋಧಕ ಶಕ್ತಿ ಕಡಿಮೆಯಾದವರು, ಅಪೌಷ್ಟಿಕತೆ ಹೊಂದಿರುವವರು ನ್ಯುಮೋಕೊಕಲ್ ಕಾಯಿಲೆಗೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ.
ನ್ಯುಮೋಕೊಕಲ್ ಕಾಯಿಲೆ:
ಭಾರತದಲ್ಲಿ 1.2 ದಶಲಕ್ಷಕ್ಕೂ ಹೆಚ್ಚು ಮಕ್ಕಳು ತಮ್ಮ 5ನೇ ಹುಟ್ಟುಹಬ್ಬಕ್ಕೂ ಮೊದಲೇ(child death) ಸಾಯುತ್ತಾರೆ. ಸುಮಾರು ಶೇ.15.9ರಷ್ಟು ಸಾವು ನ್ಯುಮೋನಿಯಾ(pneumoniae)ದಿಂದ ಸಂಭವಿಸುತ್ತವೆ. 2015ರಲ್ಲಿ ಸ್ಟ್ರೆಪ್ಟೋಕೊಕಸ್ ನ್ಯುಮೋನಿಯಾ ಸುಮಾರು 1.6 ಮಿಲಿಯನ್ ತೀವ್ರವಾದ ನ್ಯುಮೋಕೊಕಲ್ ಕಾಯಿಲೆ ಪ್ರಕರಣಗಳು ಮತ್ತು 1-59 ತಿಂಗಳ ವಯಸ್ಸಿನ ಮಕ್ಕಳ ಪೈಕಿ ಸುಮಾರು 68,700 ಸಾವುಗಳಿಗೆ ಕಾರಣವಾಗಿದೆ ಎಂದು ಅಂದಾಜಿಸಲಾಗಿದೆ.
ಪಿಸಿವಿ ಲಸಿಕೆ:
ಈ ಪಿಸಿವಿ ಲಸಿಕೆ(PCV Vaccine) ಸುರಕ್ಷಿತವಾಗಿದೆ ಮತ್ತು ನ್ಯುಮೋಕೊಕಲ್ ರೋಗವನ್ನು ತಡೆಗಟ್ಟಲು ಪರಿಣಾಮಕಾರಿ ಲಸಿಕೆಗಳು ಲಭ್ಯವಿದೆ. ಪಿಸಿವಿ ನ್ಯುಮೋನಿಯಾ, ಮೆನಿಂಜೈಟಿಸ್ ಮತ್ತು ನ್ಯುಮೋಕೊಕಸ್‌ನಿಂದ ಉಂಟಾಗುವ ಇತರ ಗಂಭೀರ ಬ್ಯಾಕ್ಟೀರಿಯಾದ ಸೋಂಕುಗಳ ಸಂಭವವನ್ನು ಕಡಿಮೆ ಮಾಡುತ್ತದೆ.
''ಪಿಸಿವಿ''ಯು ಪ್ರತಿರೋಧಕ ಶಕ್ತಿ ಕಡಿಮೆ ಇರುವ ಚಿಕ್ಕ ಮಕ್ಕಳಿಗೆ, ನ್ಯುಮೋಕೊಕಲ್ ಕಾಯಿಲೆಯ ಗಣನೀಯ ಅಪಾಯವನ್ನು ಹೊಂದಿರುವ ವಯಸ್ಕರಿಗೆ ಉದಾಹರಣೆಗೆ ಹೆಚ್‌ಐವಿ ಸೋಂಕಿತ ಮತ್ತು ವಯಸ್ಕರಿಗೆ ರಕ್ಷಣೆ ನೀಡುತ್ತದೆ. ನ್ಯುಮೋನಿಯಾ ಮತ್ತು ಮೆನಿಂಜೈಟಿಸ್ ನಂತಹ ಇತರ ರೋಗಗಳನ್ನು ಹಿಬ್, ಪರ‍್ಟುಸಿಸ್, ದಡಾರ, ಇನ್ಪ್ಲುಯೆನ್ಜ ಮತ್ತು ರೋಗನಿರೋಧಕಗಳ ಮೂಲಕ ತಡೆಗಟ್ಟಬಹುದಾಗಿದೆ.
ಮೊದಲು USA ನಲ್ಲಿ ಪ್ರಾರಂಭ:
ಇನ್ನು ಪಿಸಿವಿ ಅನ್ನು ಈ ಮೊದಲು USAನಲ್ಲಿ 2000ರಲ್ಲಿ ಪ್ರಾರಂಭಿಸಲಾಯಿತು. 2020 ಜೂನ್ ವರೆಗೆ, 146 ದೇಶಗಳು ಪಿಸಿವಿ ಅನ್ನು ಈಗಾಗಲೇ ಪರಿಚಯಿಸಿವೆ. 2011 ರಲ್ಲಿ ಪಿಸಿವಿ ಪರಿಚಯಿಸಿದ ಮೊದಲ ದೇಶ ಏಷ್ಯಾ ಖಂಡದ ಕಜಕಿಸ್ತಾನ್ ದೇಶವಾಗಿದೆ. ಭಾರತದಲ್ಲಿ ಪಿಸಿವಿ ಲಸಿಕೆಯನ್ನು 2017 ರಲ್ಲಿ ಪರಿಚಯಿಸಲಾಯಿತು.
ಬಿಹಾರ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿ ಪರಿಚಯಿಸಲಾಗಿತ್ತು. ಈಗ ಪಿಸಿವಿ ಲಸಿಕೆ ನೀಡುವ ಕಾರ್ಯಕ್ರಮವನ್ನು ಎಲ್ಲಾ ರಾಜ್ಯಗಳಲ್ಲಿ ಆಯೋಜಿಸಲಾಗಿದೆ.
ಪಿಸಿವಿ ಹಲವಾರು ವರ್ಷಗಳಿಂದ ಖಾಸಗಿ ವಲಯದಲ್ಲಿ ಬಳಕೆಯಲ್ಲಿದೆ. ಆದಾಗ್ಯೂ ಲಸಿಕೆ ಸಣ್ಣ ಜನಸಂಖ್ಯೆಗೆ ಸೀಮಿತಗೊಂಡಿದೆ. ರೋಗದ ಹೊರೆ, ಸುರಕ್ಷತೆ ಮತ್ತು ಪರಿಣಾಮಕಾರಿತ್ವ, ವೆಚ್ಚ - ಪರಿಣಾಮಕಾರಿತ್ವ ಮತ್ತು ಜಾಗತಿಕ ಪುರಾವೆಗಳ ಆಧಾರದ ಮೇಲೆ ಲಸಿಕೆಯನ್ನು ಯುಐಪಿಯಲ್ಲಿ ಸೇರಿಸಬೇಕೆಂದು NTAGI ಶಿಫಾರಸು ಮಾಡಿದೆ.
ಪಿಸಿವಿ ವೇಳಾಪಟ್ಟಿ:
ಒಂದೂವರೆ ತಿಂಗಳು ಮತ್ತು ಮೂರುವರೆ ತಿಂಗಳುಗಳಲ್ಲಿ 2 ಪ್ರಾಥಮಿಕ ಡೋಸ್‌ಗಳು (6 ವಾರಗಳು ಮತ್ತು 14 ವಾರಗಳು) ಮತ್ತು 9 ತಿಂಗಳ ವಯಸ್ಸಿನಲ್ಲಿ 1 ಬೂಸ್ಟರ್ ಡೋಸ್ ಪಡೆಯಬೇಕು.
ನಮ್ಮ ರಾಜ್ಯದಲ್ಲಿ, ಪಿಸಿವಿ 22 ಅಕ್ಟೋಬರ್ 2021 ರಂದು ಹುಬ್ಬಳ್ಳಿಯ KIMS ನಲ್ಲಿ ಮುಖ್ಯಮಂತ್ರಿಗಳಿಂದ ಪ್ರಾರಂಭಿಸಲಾಯಿತು. ನಿನ್ನೆ ವಿಶ್ವ ನ್ಯುಮೋನಿಯಾ ದಿನದ ಪ್ರಯುಕ್ತ ವಿಶೇಷ ಆರೋಗ್ಯ ಆಯುಕ್ತ ತ್ರಿಲೋಕ್ ಚಂದ್ರ ಪಿಸಿವಿ ಲಸಿಕೆಯನ್ನು ಟೌನ್ ಹಾಲ್ ಬಳಿಯ ದಾಸಪ್ಪ ಆಸ್ಪತ್ರೆಯಲ್ಲಿ “ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ” ಅಡಿ ಪರಿಚಯಿಸುವುದರ ಜೊತೆಗೆ ಉದ್ಘಾಟಿಸಿದರು. ನ್ಯುಮೋನಿಯಾದಿಂದ ಉಂಟಾಗುವ ಸಾವು ಹಾಗೂ ಗಂಭೀರತೆಯನ್ನು ಕಡಿಮೆ ಮಾಡುವ ಬಗ್ಗೆ ಜನ ಜಾಗೃತಿ ಮೂಡಿಸಿದರು.
ಇದನ್ನೂ ಓದಿ: Mysore.. ಚಾಮುಂಡಿ ಬೆಟ್ಟದ ರಸ್ತೆಯಲ್ಲಿ ಮೂರು ಚಿರತೆಗಳು ಪ್ರತ್ಯಕ್ಷ - ಬೆಚ್ಚಿ ಬಿದ್ದ ಕಾರು ಚಾಲಕ! VIDEO
ಈ ವೇಳೆ ಮುಖ್ಯಾರೋಗ್ಯಾಧಿಕಾರಿಗಳಾದ ಡಾ. ವಿಜೇಂದ್ರ, ನಿರ್ಮಲಾ ಬುಗ್ಗಿ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳು ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಇದ್ದರು