ದೊಡ್ಡಬಳ್ಳಾಪುರ: ಕುಡಿದ ಮತ್ತಿನಲ್ಲಿ ಟ್ರಕ್ ಚಾಲಕನೋರ್ವ ಹೆದ್ದಾರಿಯಲ್ಲಿ ಮನಬಂದಂತೆ ವಾಹನ ಚಾಲನೆ ಮಾಡಿದ್ದು, ಆಕ್ರೋಶಗೊಂಡ ಜನರು ಧರ್ಮದೇಟು ನೀಡಿದ್ದಾರೆ.
ಗೌರಿಬಿದನೂರಿನಿಂದ ಬೆಂಗಳೂರು ಕಡೆ ಹೊರಟ್ಟಿದ್ದ ಟ್ರಕ್ ಅನ್ನು ಚಾಲಕ ದೊಡ್ಡಬಳ್ಳಾಪುರ ನಗರ ಪ್ರವಾಸಿ ಮಂದಿರದ ಅಂಬೇಡ್ಕರ್ ವೃತ್ತದಲ್ಲಿ ಅಡ್ಡಾದಿಡ್ಡಿ ಚಾಲನೆ ಮಾಡಿದ್ದಾನೆ. ವಾಹನ ಸವಾರರು ಟ್ರಕ್ಗೆ ದಾರಿ ಬಿಟ್ಟು ಕೊಟ್ಟರೂ ಬೇಜವಾಬ್ದಾರಿಯುತವಾಗಿ ಚಾಲನೆ ಮಾಡಿದ್ದಾನೆ. ಟ್ರಕ್ ಚಾಲಕನ ವರ್ತನೆಗೆ ಬೇಸತ್ತ ವಾಹನ ಸವಾರರು ಆತನನ್ನು ಹಿಡಿದು ವಾಹನದಿಂದ ಕೆಳಗಿಳಿಸಿ ಥಳಿಸಿದ್ದಾರೆ.
ಇದನ್ನೂ ಓದಿ: ಸ್ವಾತಂತ್ರ್ಯದ ಅಮೃತ ಮಹೋತ್ಸವ: ಕದಂಬ ನೌಕಾನೆಲೆಯಿಂದ ವಿಭಿನ್ನ ಕಾರ್ಯಕ್ರಮ
ಸ್ಥಳಕ್ಕೆ ಆಗಮಿಸಿದ ದೊಡ್ಡಬಳ್ಳಾಪುರ ನಗರ ಪೊಲೀಸರು ಟ್ರಕ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.