ETV Bharat / city

ವೈದ್ಯಕೀಯ ಶಿಕ್ಷಣ ಸಚಿವರಾದ ಬಳಿಕ ಫುಲ್ ಆ್ಯಕ್ಟಿವ್ ಆದ ಡಾ.ಸುಧಾಕರ್

author img

By

Published : Feb 12, 2020, 11:26 PM IST

ವೈದ್ಯಕೀಯ ಶಿಕ್ಷಣ ಸಚಿವರಾದ ಬಳಿಕ ಡಾ.ಸುಧಾಕರ್ ಫುಲ್ ಆ್ಯಕ್ಟಿವ್ ಆಗಿದ್ದಾರೆ.‌ ಈ ಹಿನ್ನೆಲೆಯಲ್ಲಿ ಇಂದು ನಗರದ ಬೌರಿಂಗ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಜನರಲ್ ವಾರ್ಡ್ ರೋಗಿಗಳ ಜೊತೆ ಸಮಾಲೋಚನೆ ನಡೆಸಿದರು.

Dr. Sudhakar
ಡಾ.ಸುಧಾಕರ್

ಬೆಂಗಳೂರು: ವೈದ್ಯಕೀಯ ಶಿಕ್ಷಣ ಸಚಿವರಾದ ಬಳಿಕ ಡಾ.ಸುಧಾಕರ್ ಫುಲ್ ಆ್ಯಕ್ಟಿವ್ ಆಗಿದ್ದಾರೆ.‌ ಈ ಹಿನ್ನೆಲೆಯಲ್ಲಿ ಇಂದು ನಗರದ ಬೌರಿಂಗ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಜನರಲ್ ವಾರ್ಡ್ ರೋಗಿಗಳ ಜೊತೆ ಸಮಾಲೋಚನೆ ನಡೆಸಿದರು.

ಬೌರಿಂಗ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಡಾ.ಸುಧಾಕರ್

ಚಿಕಿತ್ಸೆ ಸರಿಯಾಗಿ ಸಿಗುತ್ತದೆಯಾ?, ಆಸ್ಪತ್ರೆಗೆ ಬಂದ ಕೂಡಲೇ ವೈದ್ಯರು ಸರಿಯಾಗಿ ಸ್ಪಂದಿಸುತ್ತಿದ್ದಾರಾ? ಅಂತ ವಿಚಾರಿಸಿದರು. ಐಸಿಯು ಕೌನ್ಸೆಲಿಂಗ್​ ಸೆಂಟರ್, ಐಸಿಯು ರೂಂ ಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಈ ವೇಳೆ ಸಚಿವ ಸುಧಾಕರ್ ಕಾಲಿಗೆ ಮಹಿಳೆಯೊಬ್ಬರು ಬಿದ್ದ ಪ್ರಸಂಗವೂ ನಡೆಯಿತು.‌ ತಮ್ಮ ಕುಟುಂಬಸ್ಥರಿಗೆ ನಿಮೋನಿಯಾ ಆಗಿದೆ, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನೀವು ನಮಗೆ ಸಹಾಯ ಮಾಡಿ, ಚಿಕಿತ್ಸೆ ಕೊಡಿಸಬೇಕೆಂದು ಮನವಿ ಮಾಡಿದರು. ಸಚಿವರ ಬಳಿ ಕಣ್ಣೀರಿಟ್ಟ ಕುಟುಂಬಕ್ಕೆ ಕೂಡಲೇ ಸರಿಯಾದ ಚಿಕಿತ್ಸೆ ನೀಡಿ ಎಂದು ವೈದ್ಯರಿಗೆ ಸೂಚನೆ ನೀಡಿದರು.‌‌

ಇದೇ ವೇಳೆ ಮಾತಾನಾಡಿದ ಅವರು, ಇಂದು ಬೆಳಗ್ಗೆ ವೈದ್ಯಕೀಯ ಇಲಾಖೆಗೆ ಚಾರ್ಜ್ ತೆಗೆದುಕೊಂಡಿದ್ದೇನೆ.‌ ಮುಂಜಾನೆ ಎಲ್ಲಾ ಆಸ್ಪತ್ರೆ ಮುಖ್ಯಸ್ಥರು ಹಾಗೂ ಇಲಾಖೆ ಅಧಿಕಾರಿಗಳ ಬಳಿ ಮಾಹಿತಿ ಪಡೆದಿದ್ದೇನೆ. ಎಲ್ಲಾ ಆಸ್ಪತ್ರೆಗಳನ್ನು ಹೇಗೆ ಉತ್ತಮಗೊಳಿಸಬೇಕು ಎಂದು ಚರ್ಚೆ ಮಾಡಲಾಗಿದೆ ಎಂದರು. ‌

ಖಾಸಗಿ ಸಂಸ್ಥೆಯವರ ಮೆಡಿಕಲ್ ಶುಲ್ಕ ಹೆಚ್ಚಳ ಪ್ರಸ್ತಾಪದ ಬಗ್ಗೆ ಮಾತನಾಡಿದ ಸಚಿವರು, ಖಾಸಗಿಯವರು ವರ್ಷದಿಂದ ವರ್ಷಕ್ಕೆ ಶುಲ್ಕ ಹೆಚ್ಚಳ ಮಾಡೋದು ಅಭ್ಯಾಸವಾಗಿದೆ. ಕಳೆದ ವರ್ಷ ಶೇ. 30 ನಷ್ಟು ಹೆಚ್ಚಳ ಮಾಡಿದ್ದಾರೆ. ಹೀಗಾಗಿ ಈ ವರ್ಷ ಇದನ್ನು ಪರಾಮರ್ಶಿಸುತ್ತಿದ್ದೇವೆ. ಈ ಬಾರಿ ಹೆಚ್ಚುವರಿ ಶುಲ್ಕ ನಿಗಧಿ ಮಾಡದೇ ಇದ್ದರೆ ವಿದ್ಯಾರ್ಥಿಗಳಿಗೆ ಒಳಿತು ಅಂತ ಹೇಳಿದರು.

ಯಾದಗಿರಿ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರಿನಲ್ಲಿ ವೈದ್ಯಕೀಯ ಕಾಲೇಜು ಇದೆ.‌ ರಾಮನಗರದಲ್ಲಿ ಈಗಾಗಲೇ ವಿಶ್ವವಿದ್ಯಾಲಯ ಮಾಡಬೇಕೆಂದು ಕೇಳಿದ್ದಾರೆ. ರಾಜೀವ್ ಗಾಂಧಿ ವಿವಿಯಲ್ಲಿ ಜಾಗ ಗುರುತಿಸಲಾಗಿದೆ. ‌ಆದರೆ ಅಲ್ಲಿ ಜಾಮೀನು ತಕರಾರು ಕೋರ್ಟ್‌ನಲ್ಲಿ ಇರೋದ್ರಿಂದ ಇದು ಬಗೆಹರಿಯಬೇಕಿದೆ.‌ ನಮ್ಮ ಸರ್ಕಾರದ ಆಶಯದಂತೆ ಪ್ರತಿ ಜಿಲ್ಲೆಗೆ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕೆಂದು ಇದೆ, ಅದನ್ನ ಪೂರ್ಣ ಮಾಡಲಾಗುವುದು ಎಂದರು.

ಕರ್ನಾಟಕ‌ ಬಂದ್ ವರದಿ ಜಾರಿ ಕುರಿತು ಮಾತನಾಡಿ, ಹೀಗೆ ಪದೇ ಪದೆ ಬಂದ್ ಮಾಡುವುದರಿಂದ ಉಪಯೋಗ ಇಲ್ಲ. ಬಂದ್ ಮಾಡುವುದರಿಂದ ವರದಿ ಜಾರಿಯಾಗುವುದಿಲ್ಲ. ಆದರೆ ಮುಷ್ಕರ ಮಾಡೋದು ಸರಿಯಲ್ಲ, ಸಿದ್ದರಾಮಯ್ಯ ಹಾಗೂ ದೇವೇಗೌಡರು ಹಿರಿಯ ರಾಜಕಾರಣಿಗಳಿದ್ದಾರೆ. ಅವರಿಗೆ ನಾವು ಹೇಳುವ ಅವಶ್ಯಕತೆ ಇಲ್ಲ ಅಂತ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.