ಬೆಂಗಳೂರು: ಕೊರೊನಾ ಪಾಸಿಟಿವ್ ಬಂದವ್ರಲ್ಲಿ ಶೇ. 80 ರಿಂದ 85ರಷ್ಟು ಮಂದಿಗೆ ಏನೂ ತೊಂದರೆ ಆಗಲ್ಲ. ಹೀಗಾಗಿ ರೋಗ ಲಕ್ಷಣ ಇಲ್ಲದವರು ಮನೆಯಲ್ಲೇ ಚಿಕಿತ್ಸೆ ಪಡೆಯಿರಿ. ಇವರು ಯಾವುದೇ ಆತಂಕ, ಭಯ ಪಡಬಾರದು ಎಂದು ಬಿಎಂಸಿಯ ಹಿರಿಯ ಪ್ರಾಧ್ಯಾಪಕ ಡಾ. ಶಶಿಭೂಷಣ್ ರಾಜ್ಯದ ಜನರಿಗೆ ಧೈರ್ಯ ತುಂಬಿದ್ದಾರೆ.
ಹೋಂ ಐಸೊಲೇಶನ್ನಲ್ಲಿರುವವರ ಮೇಲೆ ಪ್ರತ್ಯೇಕ ನಿಗಾ ಇಡುತ್ತಿದ್ದೇವೆ ಎಂದಿದ್ದಾರೆ. ಹೀಗಾಗಿ ಶೇ.15ರಷ್ಟು ಮಂದಿಗೆ ಮಾತ್ರ ಆಸ್ಪತ್ರೆಯ ಆವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ರೆಮ್ಡೆಸಿವಿರ್ ಮತ್ತು ಆಕ್ಸಿಜನ್ ಎಲ್ಲಾ ರೋಗಿಗಳಿಗೆ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮಾಹಿತಿ ಎಲ್ಲರಿಗೂ ತಲುಪಿಸಿ ಎಂದು ಡಾ. ಶಶಿಭೂಷಣ್ ಮನವಿ ಮಾಡಿದ್ದಾರೆ.