ಬೆಂಗಳೂರು : ಕೊರೊನಾ ಸೋಂಕಿನ ನಿಯಂತ್ರಣಕ್ಕೆ ಸರ್ಕಾರ ರಾತ್ರಿ ಕರ್ಫ್ಯೂ ಸೇರಿ ಹಲವು ಕಠಿಣ ನಿಯಮಗಳನ್ನು ಕೈಗೊಂಡಿದೆ. ಈ ನಡುವೆ ಹಲವರು ಲಾಕ್ಡೌನ್ ಬಗ್ಗೆ ಕೇಳುತ್ತಿದ್ದಾರೆ. ಈ ಬಗ್ಗೆ ಆತಂಕ ಪಡುವುದು ಬೇಡ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದರು.
ಫೇಸ್ಬುಕ್ ಲೈವ್ನಲ್ಲಿ ಮಾತನಾಡಿದ ಅವರು, ಜನರ ಜೊತೆ ನಾವು ಹತ್ತಿರದ ಸಂಪರ್ಕ ಇಟ್ಟುಕೊಂಡು ಜನಪರ ಕೆಲಸ ಮಾಡುತ್ತಿದ್ದೇವೆ. ಜನ ಸಂಪರ್ಕ ಸಭೆ ಎಲ್ಲಾ ಠಾಣೆಗಳಲ್ಲೂ ಮಾಡುತ್ತಿದ್ದೇವೆ.
ಸಾರ್ವಜನಿಕರು ತಮ್ಮ ಅಹವಾಲುಗಳನ್ನ ನಮ್ಮ ಬಳಿ ಹೇಳುತ್ತಿದ್ದಾರೆ. ಪೊಲೀಸ್ ಠಾಣೆಗೆ ಬರಲು ಸಾಧ್ಯವಾಗದವರಿಗೆ ಸೋಷಿಯಲ್ ಮೀಡಿಯಾದಲ್ಲಿ ಜನರ ಜೊತೆ ಸಂಪರ್ಕದಲ್ಲಿದ್ದೀವಿ ಎಂದರು.
- " class="align-text-top noRightClick twitterSection" data="">
ಇಂತಹ ಸಮಯದಲ್ಲಿ ಜನರ ಸಹಕಾರ ಅಗತ್ಯವಾಗಿದೆ. ಹಲವರು ಲಾಕ್ಡೌನ್ ಬಗ್ಗೆ ಕೇಳ್ತಿದ್ದಾರೆ. ಲಾಕ್ಡೌನ್ ಬಗ್ಗೆ ಆತಂಕ ಬೇಡ. ಅದರ ಬಗ್ಗೆ ತೀರ್ಮಾನ ಮಾಡಲಿಕ್ಕೆ ಹೈಪವರ್ ಕಮಿಟಿ ಇದೆ. ನಾವು ನಮ್ಮ ಜವಾಬ್ದಾರಿಯನ್ನು ಸರಿಯಾಗಿ ಮಾಡಬೇಕು ಎಂದರು.
ಮುಂಬೈ, ದೆಹಲಿ ಮತ್ತು ಯುಪಿಯ ಲಖನೌಗಳಲ್ಲೂ ಸಮಸ್ಯೆಗಳಿವೆ. ಎಲ್ಲಾ ಕಡೆ ಕೋವಿಡ್ ನಿಯಂತ್ರಣದ ಬಗ್ಗೆ ಚರ್ಚೆಯಾಗುತ್ತಿದೆ. ಪೊಲೀಸ್ ಇಲಾಖೆಯಲ್ಲಿ ಬಹುತೇಕ ಜನ ಸೆಕೆಂಡ್ ವ್ಯಾಕ್ಸಿನ್ ಪಡೆದಿದ್ದಾರೆ. ಜನ ಯಾವುದೇ ವದಂತಿಗಳಿಗೆ ಕಿವಿಗೊಡದೇ ವ್ಯಾಕ್ಸಿನೇಷನ್ ಮಾಡಿಸಿಕೊಳ್ಳಬೇಕು.
ನೈಟ್ ಕರ್ಫ್ಯೂ ತುಂಬಾ ಕಟ್ಟುನಿಟ್ಟಾಗಿ ಫಾಲೋ ಮಾಡಲಾಗುತ್ತಿದೆ. ಜನರು ಕೋವಿಡ್ ನಿಯಮಗಳನ್ನು ಪಾಲಿಸಬೇಕಿದೆ. ಹೋಮ್ ಡೆಲಿವರಿಯವರಿಗೆ ಯಾವುದೇ ಅಡಚಣೆಯಿಲ್ಲ ಎಂದು ಸ್ಪಷ್ಟಪಡಿಸಿದರು.