ಬೆಂಗಳೂರು: ಹ್ಯಾಟ್ರಿಕ್ ಹಿರೋ ಶಿವರಾಜ್ಕುಮಾರ್ ಅಭಿನಯದ 'ಟಗರು' ಸಿನಿಮಾದಲ್ಲಿ 'ಡಾಲಿ'ಯಾಗಿ ಅಬ್ಬರಿಸಿದ್ಧ ಧನಂಜಯ್ ಈಗ 'ಸಲಗ' ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಎಸಿಪಿ ಆಗಿ ಮಿಂಚಲಿರುವ ಡಾಲಿ ಧನಂಜಯ್ ಪ್ರೇಕ್ಷಕನಿಗೆ ಇನ್ನಷ್ಟು ಮನರಂಜನೆ ನೀಡಲಿದ್ದಾರೆ. ದುನಿಯಾ ವಿಜಿ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳ್ತಿರುವ 'ಸಲಗ' ಚಿತ್ರದಲ್ಲಿ ಬಹುತೇಕ ಟಗರು ಚಿತ್ರ ತಂಡವೇ ಈ ಸಿನಿಮಾದಲ್ಲೂ ಕೆಲಸ ಮಾಡುತ್ತಿದ್ದಾರೆ. ಇನ್ನೂ ಎಸಿಪಿ ಸಮರ್ಥ್ ಪಾತ್ರಕ್ಕೆ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರೇ ಸ್ಪೂರ್ತಿ ಎಂಬ ಮಾತುಗಳು ಕೇಳಿ ಬರುತ್ತಿವೆ.
ಅಣ್ಣಾಮಲೈ ಲುಕ್ನಲ್ಲಿ ಡಾಲಿ ಧನಂಜಯ್: ಸಿನಿ ಪಯಣದಲ್ಲಿ ಮೊದಲ ಬಾರಿಗೆ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸುತ್ತಿದ್ದು, ಈ ಪಾತ್ರಕ್ಕಾಗಿ ಚಿತ್ರತಂಡ ಹಲವು ಪೊಲೀಸ್ ಅಧಿಕಾರಿಗಳ ಭೇಟಿ ಮಾಡಿದೆ. ಅಣ್ಣಾಮಲೈ ಅವರ ಮ್ಯಾನರಿಸಂನಲ್ಲೇ ಧನಂಜಯ್ ಅವರಿಗೂ ಶೇವ್ ಮಾಡಿಸಿ ಪೊಲೀಸ್ ಹೇರ್ ಕಟ್ ಮಾಡಿಸಿ ಪಕ್ಕಾ ಪೊಲೀಸ್ ಅಧಿಕಾರಿಯ ಲುಕ್ ನಲ್ಲಿ ಧನಂಜಯ್ ಕಾಣಿಸುವಂತೆ ಮಾಡಿದ್ದಾರೆ.
ಈಗಾಗಲೇ ಸಲಗ ಎರಡನೇ ಹಂತದ ಶೂಟಿಂಗ್ ಶುರುವಾಗಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಲಗ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಅಲ್ಲದೆ ಚಿತ್ರದಲ್ಲಿ ಟಗರು ಚಿತ್ರದಲ್ಲಿದ್ದ ಪವರ್ ಪುಲ್ ಡೈಲಾಗ್ಗಳು ಇರಲಿವೆ.