ದೊಡ್ಡಬಳ್ಳಾಪುರ: ಮದುವೆ ಲಗ್ನ ಪತ್ರಿಕೆ ಹಂಚಲು ಸಂಬಂಧಿಕರಲ್ಲಿಗೆ ತೆರಳಿದ್ದಾಗ ಅರ್ಚಕ ಮನೆ ಮತ್ತು ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ನಗ-ನಾಣ್ಯ ದೋಚಿದ್ದಾರೆ. ತಾಲೂಕಿನ ಆಲಹಳ್ಳಿಯ ಆಂಜನೇಯ ದೇವಸ್ಥಾನ ಹಾಗೂ ಅರ್ಚಕರ ಮನೆಯಲ್ಲಿ ಗುರುವಾರ ರಾತ್ರಿ ಘಟನೆ ನಡೆದಿದೆ. ದೇಗುಲದ ಹುಂಡಿ ಮತ್ತು ಮನೆಯಲ್ಲಿದ್ದ 2.5 ಕೆ.ಜಿ. ತೂಕದ ಬೆಳ್ಳಿ ಗಟ್ಟಿ, ದೇವರ ಚಿನ್ನದ ಪದಕ ಹಾಗೂ ಮನೆಯಲ್ಲಿಟ್ಟಿದ್ದ 95 ಸಾವಿರ ರೂ. ನಗದು ಕಳವಾಗಿದೆ.
ಗುರುವಾರ ಸಂಜೆ ಅರ್ಚಕರು ಮೈಸೂರಿಗೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ಕಳ್ಳರು, ದೇವಸ್ಥಾನ ಹಾಗೂ ಮನೆಗೆ ನುಗ್ಗಿದ್ದಾರೆ. ಶುಕ್ರವಾರ ಬೆಳಿಗ್ಗೆ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಅರ್ಚಕ ಭಾರ್ಗವ್ ಪೊಲೀಸರಿಗೆ ದೂರು ನೀಡಿದ್ದು, ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಇದನ್ನೂ ಓದಿ: 300 ವರ್ಷ ಹಳೆಯ ಶಿವ ದೇಗುಲ ನೆಲಸಮ: ರಾಜಸ್ಥಾನ ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ