ETV Bharat / city

ವೈದ್ಯನ ಪ್ರಮಾದದಿಂದ ಕೊಳೆಯುತ್ತಿರುವ ಯುವಕನ ದೇಹ.. ಡಾಕ್ಟರ್​ ವಿರುದ್ಧ ಕೇಸ್​ ದಾಖಲು.. - ಜ್ವರಕ್ಕೆ ಮಾಡಿದ ಇಂಜೆಕ್ಷನ್​ನಿಂದ ಕೊಳೆಯುತ್ತಿರುವ ದೇಹದ ಭಾಗ

ಸ್ವಲ್ಪ ಸಮಯದ ಬಳಿಕ ಇಂಜೆಕ್ಷನ್ ನೀಡಿದ್ದ ಸ್ಥಳದಲ್ಲಿ ಊತ ಕಾಣಿಸಿದೆ. ಬಳಿಕ ತೊಡೆ, ಬೆನ್ನಿನ ಹಿಂಭಾಗ ಮತ್ತು ಹೊಟ್ಟೆ ಬಳಿಯ ಚರ್ಮ ಕೊಳೆತು ಗಾಯದಂತಾಗಿದೆ. ಇದರಿಂದ ಹೆದರಿದ ಕುಟುಂಬಸ್ಥರು ಯುವಕನನ್ನು ಅದೇ ಕ್ಲಿನಿಕ್​ಗೆ ಕರೆ ತಂದಾಗ ಈ ವೇಳೆ ವೈದ್ಯರು ಇರಲಿಲ್ಲ. ಅಲ್ಲಿನ ಸಿಬ್ಬಂದಿಯೊಬ್ಬರು ಗಾಯಕ್ಕೆ ಹಚ್ಚಲು ಮುಲಾಮೊಂದನ್ನು ನೀಡಿ ಕಳುಹಿಸಿದ್ದಾರೆ..

doctors-blunder
ಡಾಕ್ಟರ್​ ವಿರುದ್ಧ ಕೇಸ್​ ದಾಖಲು
author img

By

Published : Jan 28, 2022, 4:58 PM IST

Updated : Jan 28, 2022, 5:21 PM IST

ಬೆಂಗಳೂರು : ಜ್ವರ ಕಾಣಿಸಿಕೊಂಡು ಚಿಕಿತ್ಸೆ ಪಡೆಯಲು ಬಂದಿದ್ದ ಯುವಕನಿಗೆ ವೈದ್ಯರೊಬ್ಬರು ಇಂಜೆಕ್ಷನ್​ ಮಾಡಿದ್ದರು. ಈಗ ಆ ಜಾಗದಲ್ಲಿ ದೇಹ ಕೊಳೆಯಲು ಶುರುವಾಗಿದೆ. ವೈದ್ಯರ ಪ್ರಮಾದಿಂದ ಬಡ ಕುಟುಂಬವೊಂದು ಸಂಕಷ್ಟಕ್ಕೀಡಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು ದಕ್ಷಿಣ ತಾಲೂಕು ಮೈಲಸಂದ್ರ ಗ್ರಾಮದ ನಿವಾಸಿ ಮುರುಳಿ ಎಂಬ ಯುವಕ ಅನಾರೋಗ್ಯ ಪೀಡಿತನಾಗಿ ಆಸ್ಪತ್ರೆ ಸೇರಿದವರು. ಜನವರಿ 6ರಂದು ಯುವಕ ಮುರುಳಿಗೆ ಜ್ವರ ಕಾಣಿಸಿತ್ತು. ಸಮೀಪದ ಸಾನ್ಸಿಯಾ ಕ್ಲಿನಿಕ್​ನಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ವೇಳೆ ವೈದ್ಯರು ಯುವಕನಿಗೆ ಇಂಜೆಕ್ಷನ್ ನೀಡಿ, ಮಾತ್ರೆ ಕೊಟ್ಟಿದ್ದಾರೆ.

ವೈದ್ಯನ ಪ್ರಮಾದದಿಂದ ಕೊಳೆಯುತ್ತಿರುವ ಯುವಕನ ದೇಹ

ಸ್ವಲ್ಪ ಸಮಯದ ಬಳಿಕ ಇಂಜೆಕ್ಷನ್ ನೀಡಿದ್ದ ಸ್ಥಳದಲ್ಲಿ ಊತ ಕಾಣಿಸಿದೆ. ಬಳಿಕ ತೊಡೆ, ಬೆನ್ನಿನ ಹಿಂಭಾಗ ಮತ್ತು ಹೊಟ್ಟೆ ಬಳಿಯ ಚರ್ಮ ಕೊಳೆತು ಗಾಯದಂತಾಗಿದೆ. ಇದರಿಂದ ಹೆದರಿದ ಕುಟುಂಬಸ್ಥರು ಯುವಕನನ್ನು ಅದೇ ಕ್ಲಿನಿಕ್​ಗೆ ಕರೆ ತಂದಾಗ ಈ ವೇಳೆ ವೈದ್ಯರು ಇರಲಿಲ್ಲ. ಅಲ್ಲಿನ ಸಿಬ್ಬಂದಿಯೊಬ್ಬರು ಗಾಯಕ್ಕೆ ಹಚ್ಚಲು ಮುಲಾಮೊಂದನ್ನು ನೀಡಿ ಕಳುಹಿಸಿದ್ದಾರೆ.

ಓದಿ: ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಮೊಮ್ಮಗಳು ಸೌಂದರ್ಯ ಆತ್ಮಹತ್ಯೆ

ಕ್ರಮೇಣ ಯುವಕನ ಆರೋಗ್ಯ ಸ್ಥಿತಿ ಹದಗೆಡುತ್ತಾ ಬಂದಿದೆ. ಮೂತ್ರದಲ್ಲಿ ರಕ್ತ, ನಿತ್ರಾಣ ಮತ್ತು ಎದೆ ನೋವು ಕಾಣಿಸಿದೆ. ಜೊತೆಗೆ ಇಂಜೆಕ್ಷನ್ ನೀಡಿದ ಜಾಗ, ತೊಡೆ ಭಾಗ ಮತ್ತು ಹೊಟ್ಟೆಯ ಕೆಳಭಾಗದಲ್ಲಿ ಗಾಯ ಹೆಚ್ಚಾಗಿ ರಕ್ತ ಮತ್ತು ಕೀವು ಒಸರಲು ಶುರುವಾಗಿದೆ.

ಈ ವೇಳೆ ಕುಟುಂಬಸ್ಥರು ಕ್ಲಿನಿಕ್ ಬಳಿ ಬಂದು ಗಲಾಟೆ ಮಾಡಿದ್ದಾರೆ.‌ ಪೊಲೀಸ್ ಠಾಣೆಗೆ ದೂರು ನೀಡುತ್ತೇವೆ ಎಂದಾಗ ಕ್ಲಿನಿಕ್​ ಸಿಬ್ಬಂದಿ ಜಿಗಣಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಯುವಕನನ್ನು ದಾಖಲಿಸಿ, ₹40 ಸಾವಿರ ನೀಡಿ ಸರ್ಜರಿ ಮಾಡಿಸಿದ್ದಾರೆ.

ಅಲ್ಲಿಯೂ ಆರೋಗ್ಯ ಸುಧಾರಿಸದಿದ್ದಾಗ ವೈದ್ಯನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಬಳಿಕ ವೈದ್ಯ ನಾಪತ್ತೆಯಾಗಿದ್ದಾನೆ. ಜೊತೆಗೆ ಮೊಬೈಲ್ ಸ್ವಿಚ್​ ಆಫ್ ಮಾಡಿಕೊಂಡಿದ್ದಾರೆ. ಈ ಕಡೆ ಬೌರಿಂಗ್​ ಆಸ್ಪತ್ರೆಯಲ್ಲಿ ಯುವಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆ ವೆಚ್ಚ ಭರಿಸಲಾಗದೇ ಕುಟುಂಬಸ್ಥರು ವೈದ್ಯನ ಪ್ರಮಾದದಿಂದಾದ ಅನ್ಯಾಯಕ್ಕೆ ನ್ಯಾಯ ಒದಗಿಸಲು ಆಗ್ರಹಿಸಿದ್ದಾರೆ.

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 28, 2022, 5:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.