ETV Bharat / city

ವಾತಾವರಣ ವೈಪರಿತ್ಯರಿಂದ ಬೆಂಗಳೂರಿಗರಿಗೆ ಕಾಯಿಲೆಗಳ ಸಮಸ್ಯೆ: ಉತ್ತಮ ಆರೋಗ್ಯಕ್ಕಾಗಿ ಇಲ್ಲಿದೆ ವೈದ್ಯರ ಸಲಹೆ - ಚಳಿ ವಾತಾವರಣ ಇದ್ದಾಗ ಕಾಡುವ ಸಮಸ್ಯೆಗಳು

ವಾತಾವರಣ ಬದಲಾವಣೆಯಿಂದ ಜನರಲ್ಲಿ ಕೆಮ್ಮು, ಜ್ವರ, ಶೀತದಂತಹ ಅನಾರೋಗ್ಯ (climate change health issues) ಸಮಸ್ಯೆಗಳು ಕಾಡುತ್ತವೆ. ಇಂತಹ ಸಂದರ್ಭದಲ್ಲಿ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕಾಗುತ್ತದೆ. ಉತ್ತಮ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ವೈದ್ಯ ರಾಜು ಕೃಷ್ಣಮೂರ್ತಿಯವರು ಸಲಹೆಗಳನ್ನು ನೀಡಿದ್ದಾರೆ.

Doctor suggestion for climate change health issues
ಬೆಂಗಳೂರಿಗರಿಗೆ ಆರೋಗ್ಯ ಸಮಸ್ಯೆ
author img

By

Published : Nov 13, 2021, 7:19 PM IST

ಬೆಂಗಳೂರು: ಹವಾಮಾನ ವೈಪರಿತ್ಯದಿಂದ ರಾಜಧಾನಿ ಬೆಂಗಳೂರಿನ ಜನರಿಗೆ ಕೆಮ್ಮು, ಜ್ವರ, ಶೀತದಂತಹ (climate change health issues) ಆನಾರೋಗ್ಯ ಸಮಸ್ಯೆಗಳು ಕಾಡುತ್ತಿವೆ. ಇದರಿಂದ ನಗರದ ಬಹುತೇಕ ಕ್ಲಿನಿಕ್​ಗಳು ಜನರಿಂದ ತುಂಬಿವೆ. ಟ್ರಾಫಿಕ್​ ಮಧ್ಯ ಮಳೆಗೆ ಸಿಲುಕಿ ನೆನೆದು ಎರಡು ದಿನ ಕಳೆಯುತ್ತಿದ್ದಂತೆ ನೆಗಡಿ ಶುರುವಾಗಿ ಜ್ವರ ಕಾಣಿಸಿಕೊಳ್ಳುತ್ತಿದ್ದು, ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ವೈದ್ಯ ರಾಜು ಕೃಷ್ಣಮೂರ್ತಿಯವರು ಕೆಲ ಸಲಹೆಗಳನ್ನು ನೀಡಿದ್ದಾರೆ.

  • ಚಳಿ ವಾತಾವರಣ ಇದ್ದಾಗ ಕಾಡುವ ಸಮಸ್ಯೆಗಳು
  1. ಅಸ್ತಮಾ ಇರೋರಿಗೆ ಉಸಿರಾಟಕ್ಕೂ ಹೆಚ್ಚು ತೊಂದರೆಯುಂಟು ಮಾಡಬಹುದು
  2. ಸೈನಸ್ ಸಮಸ್ಯೆ ಇರುವವರಿಗೆ ಮೂಗು ಕಟ್ಟುವಿಕೆ
  3. ಅರ್ಧತಲೆನೋವು
  4. ಶೀತದಿಂದ ಕಿವಿನೋವು
  5. ಗಂಟಲುನೋವು, ಅಷ್ಟೇ ಅಲ್ಲದೇ ಈ ಸಮಯದಲ್ಲಿ ತಲೆಕೂದಲು ಉದುರುವುದು, ತಲೆಯ ಹೊಟ್ಟು ಹೆಚ್ಚಾಗುವುದು. ತ್ವಚೆಯ ಚರ್ಮ ಒಡೆಯುವುದು
  • ಆಹಾರ ಪದ್ಧತಿ ಹೀಗಿರಲಿ
  1. ಹೆಚ್ಚು ಕಾಯಿಸಿದ ನೀರು ಕುಡಿಯಬೇಕು
  2. ತಾಜಾ ಆಹಾರದ ಸೇವನೆ
  3. ಜೇನುತುಪ್ಪು ಸೇವಿಸೋದ್ರಿಂದ ದೇಹದ ಉಷ್ಣತೆ ಕಾಪಾಡುತ್ತೆ
  4. ಬೆಚ್ಚನೆಯ ಉಡುಪು ಧರಿಸಿ ಹಾಗೂ ಮೈ ಕೈ ಬೆಚ್ಚಗಿಟ್ಟುಕೊಳ್ಳಿ
  • ಏನು ಮಾಡಬಾರದು..?
  1. ಫ್ರಿಡ್ಜ್​ನಲ್ಲಿ ಶೇಖರಿಸಿದ ಆಹಾರವನ್ನು ತಿನ್ನಬಾರದು.
  2. ಅತಿಯಾದ ಮಸಾಲ ಪದಾರ್ಥಗಳು, ಕರಿದ ತಿನಿಸುಗಳನ್ನು ಸೇವಿಸುವುದನ್ನು ನಿಯಂತ್ರಿಸಬೇಕು
  • ಜ್ವರ ಕುರಿತು ಭಯ ಬೇಡ ಕಾಳಜಿ ಇರಲಿ..

ಜ್ವರ, ಕೆಮ್ಮು, ನೆಗಡಿ ಬಂತು ಅಂತ ಗಾಬರಿ ಭಯ ಪಡುವ ಅಗತ್ಯವಿಲ್ಲ. ವಾತಾವರಣದಲ್ಲಿ ಈ ರೀತಿ ಬದಲಾವಣೆಗಳು ಆದಾಗ ಸಹಜವಾಗಿ ಅನಾರೋಗ್ಯ ಕಾಡುತ್ತೆ‌. ಹೀಗಾಗಿ, ಆತಂಕ ಪಡದೇ ಮನೆಯಲ್ಲೇ ವಿಶ್ರಾಂತಿ ಪಡೆಯುವುದು ಸೂಕ್ತ.

ಉತ್ತಮ ಆರೋಗ್ಯಕ್ಕಾಗಿ ಡಾ. ರಾಜು ಕೃಷ್ಣಮೂರ್ತಿ ಸಲಹೆ

ಮುಂಚೆ ಎಲ್ಲ ನೆಗಡಿ ಕೆಮ್ಮು ಬಂದರೆ ಜನರು ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಇತ್ತೀಚೆಗೆ ಜನರಿಗೆ ಕಾಯಿಲೆ ಕುರಿತು ಜಾಗೃತಿ ಹೆಚ್ಚಾಗಿದೆ. ಈಗ ಜನರು ಜ್ವರ ಕೆಮ್ಮು ಬಂದರೂ ಕೊರೊನಾ ಎಂದು ಅಪಾರ್ಥ ಮಾಡಿಕೊಳ್ತಾರೆ. ಗಾಬರಿಯಲ್ಲಿ ಅನಾವಶ್ಯಕ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುತ್ತಾರೆ. ರೋಗ ಲಕ್ಷಣಗಳು ಕಂಡು ಬಂದು, ವೈದ್ಯರು ಸಲಹೆ ನೀಡಿದ್ದರಷ್ಟೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಅಂತಾ ವೈದ್ಯ ರಾಜು ಕೃಷ್ಣಮೂರ್ತಿ ಸಲಹೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.