ಬೆಂಗಳೂರು: ಚಂದನವನದಲ್ಲಿ ‘ಡಿಎನ್ಎ’ ಎಂಬ ಶೀರ್ಷಿಕೆಯಡಿ ಸಿನಿವೊಂದು ತಯಾರಾಗಿದ್ದು,ಕೊರೊನಾ ವೈರಸ್ ಹಾವಳಿ ಮುಗಿದ ನಂತರ ಈ ಸಿನಿಮಾ ಪ್ರಚಾರದ ಕಾರ್ಯ ಮುಗಿಸಿಕೊಂಡು ತೆರೆಮೇಲೆ ಬರಲಿದೆ.
ಈ ಚಿತ್ರ ಎರಡು ಸುಂದರ ಕುಟುಂಬಗಳ ನಡುವಿನ ಕಥಾ ವಸ್ತು ಹೊಂದಿದೆ. ಹೆಸರಾಂತ ಸಾಹಿತಿ ದೇವನೂರು ಮಹಾದೇವರ ಅವರ ‘ಸಂಬಂಜ ಅನ್ನೋದು ದೊಡ್ಡದು ಕನಾ...ಸಾಲನ್ನ ಚಿತ್ರದ ಉಪ ಶೀರ್ಷಿಕೆ ಆಗಿ ಮತ್ತು ಅವರ ಒಂದು ಕವಿತೆಯನ್ನ ಬಳಸಿಕೊಳ್ಳಲಾಗಿದೆ.
ಚಾಮರಾಜನಗರದ ಪ್ರಕಾಶ್ ರಾಜ್ ಮೇಹು ಕಥೆ, ಚಿತ್ರಕಥೆ ರಚನೆ ಮಾಡಿ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಬೆಂಗಳೂರು, ಮೈಸೂರು ಮತ್ತಿರರ ಭಾಗದಲ್ಲಿ ಚಿತ್ರಿಕರಿಸಲಾಗಿದ್ದು,ಹಾಡುಗಳನ್ನ ಮಾರಿ ಕಣಿವೆ ಡ್ಯಾಂ, ಕೆಆರ್ಎಸ್ ಸುತ್ತ ಮುತ್ತ ಚಿತ್ರೀಕರಣ ಮಾಡಿದ್ದಾರೆ. ಇನ್ನು,ಪೋಷಕ ಪಾತ್ರಗಳಲ್ಲಿ ಅಚ್ಯುತ್ ಕುಮಾರ್ ಹಾಗೂ ಯಮುನಾ ಮುಖ್ಯ ಪಾತ್ರ ನಿರ್ವಹಿಸಿದ್ದಾರೆ. ಇವರ ಮಕ್ಕಳ ಪಾತ್ರವರ್ಗದಲ್ಲಿ ಧ್ರುವ ಹಾಗೂ ಮೇಘ ಇದ್ದಾರೆ.
ಚಿತ್ರದಲ್ಲಿ ಶ್ರೀ ಅಲ್ಲಮ ಪ್ರಭು ಕವನವನ್ನ ಸಂದರ್ಭಕ್ಕೆ ಸರಿಯಾಗಿ ಸೇರಿಸಿಕೊಳ್ಳಲಾಗಿದೆ. ರವಿಕುಮಾರ್ ಸಾನ ಛಾಯಾಗ್ರಹಣ ಮಾಡಿದ್ದು,ಮಾತೃ ಶ್ರೀ ಎಂಟೆರ್ಪ್ರೈಸಸ್ ಅಡಿ ಮೈಲಾರಿ ಎಂಬುವವರು ಮೊದಲ ಬಾರಿಗೆ ನಿರ್ಮಾಪಕರಾಗಿದ್ದಾರೆ.