ಬೆಂಗಳೂರು : ಇಂದು ಕಾಂಗ್ರೆಸ್ ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷರನ್ನಾಗಿ ಡಿ ಕೆ ಶಿವಕುಮಾರ್ ಅವರನ್ನ ನೇಮಿಸಿರೋದ್ದಕ್ಕೆ ರಾಜಕೀಯ ನಾಯಕರು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಾಜಿ ಕೆಪಿಸಿಸಿ ಅದ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಇಂದು ಕೆಪಿಸಿಸಿ ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ನೂತನ ಅಧ್ಯಕ್ಷರಿಗೆ ಶುಭಾಶಯ ಕೋರುತ್ತೇನೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಸಲಿ. ಡಿಕೆಶಿ ಒಬ್ಬ ಸೀನಿಯರ್ ಲೀಡರ್ ಅವರ ಅಧ್ಯಕ್ಷತೆಯಲ್ಲಿ ಪಕ್ಷ ಒಳ್ಳೆ ದಾರಿಯಲ್ಲಿ ಸಾಗುತ್ತದೆ. ನಾವೆಲ್ಲರೂ ಒಂದಾಗಿ ಹೋಗುತ್ತೇವೆ, ಏನೂ ಭಿನ್ನಾಭಿಪ್ರಾಯ ಇರೋದಿಲ್ಲ ಎಂದು ಹೇಳಿದರು.
ಸಚಿವ ಈಶ್ವರಪ್ಪ ಮಾತನ್ನಾಡಿ, ಡಿ ಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಅನ್ನೋ ವಿಚಾರ ಕೇಳಿ ಆಶ್ವರ್ಯವಾಯಿತು. ಕಾಂಗ್ರೆಸ್ ಗುಂಪುಗಾರಿಕೆಯಿಂದ ಯಾವಾಗ ಒಡೆದು ಹೋಗುತ್ತೋ ಗೊತ್ತಿಲ್ಲ. ಸಿದ್ದರಾಮಯ್ಯ ಅವರ ಗುಂಪು ಹಾಗೂ ಅವರಲ್ಲಿರುವ ಬೇರೆ ಬೇರೆ ಗುಂಪು ಡಿಕೆಶಿ ನೇತೃತ್ವದಲ್ಲಿ ಹೋಗಲು ಒಪ್ಪಲ್ಲ. ಕೆಪಿಸಿಸಿ ಗುಂಪುಗಳಾಗಿ ವಿಭಜನೆಯಾಗುತ್ತೆ ಅದರಲ್ಲಿ ಯಾವುದೇ ಅನುಮಾನವಿಲ್ಲ. ಇದರಿಂದ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಇಬ್ಬರು ವೀಕ್ ಆಗ್ತಾರೆ ಎಂದು ಭವಿಷ್ಯ ನುಡಿದರು.