ETV Bharat / city

ಇಡಿ ವಿಚಾರಣೆಗೆ ಹಾಜರಾದ ಕರ್ನಾಟಕ ಕಾಂಗ್ರೆಸ್​ ಅಧ್ಯಕ್ಷ ಡಿ ಕೆ ಶಿವಕುಮಾರ್​ - ಹಣಕಾಸಿನ ಕೊಡುಗೆಗೆ ಸಂಬಂಧಿಸಿದಂತೆ ತನಿಖೆ

ಒಂದು ಕಡೆ ರಾಹುಲ್​ ಗಾಂಧಿ ನೇತೃತ್ವದಲ್ಲಿ ಕರ್ನಾಟಕದಲ್ಲಿ ಭಾರತ್​ ಜೋಡೋ ಯಾತ್ರೆ ಮುಂದುವರೆದಿದೆ. ರಾಜ್ಯದಲ್ಲಿ ಯಾತ್ರೆಯ ಸಂಘಟನೆಯ ನೇತೃತ್ವ ವಹಿಸಿದ್ದ ಪ್ರದೇಶ ಕಾಂಗ್ರೆಸ್​ ಅಧ್ಯಕ್ಷ ಡಿ ಕೆ ಶಿವಕುಮಾರ್​ ಇಂದು ಇಡಿ ವಿಚಾರಣೆಗೆ ಹಾಜರಾಗಿದ್ದಾರೆ.

DK Shivakumar reaches the ED office in Delhi
ಇಡಿ ವಿಚಾರಣೆಗೆ ಹಾಜರಾದ ಕರ್ನಾಟಕ ಕಾಂಗ್ರೆಸ್​ ಅಧ್ಯಕ್ಷ ಡಿ ಕೆ ಶಿವಕುಮಾರ್​
author img

By

Published : Oct 7, 2022, 12:12 PM IST

Updated : Oct 7, 2022, 12:19 PM IST

ನವದೆಹಲಿ: ಕರ್ನಾಟಕ ಕಾಂಗ್ರೆಸ್ ಮುಖ್ಯಸ್ಥ ಡಿಕೆ ಶಿವಕುಮಾರ್ ದೆಹಲಿಯ ಇಡಿ ಕಚೇರಿ ತಲುಪಿದ್ದು, ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರು ಆಗಿದ್ದಾರೆ.

ಇಡಿ ವಿಚಾರಣೆಗೆ ಹಾಜರಾದ ಕರ್ನಾಟಕ ಕಾಂಗ್ರೆಸ್​ ಅಧ್ಯಕ್ಷ ಡಿ ಕೆ ಶಿವಕುಮಾರ್​
ಇಡಿ ವಿಚಾರಣೆಗೆ ಹಾಜರಾದ ಕರ್ನಾಟಕ ಕಾಂಗ್ರೆಸ್​ ಅಧ್ಯಕ್ಷ ಡಿ ಕೆ ಶಿವಕುಮಾರ್​

ಯಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ಗೆ ನೀಡಿದ ಹಣಕಾಸಿನ ಕೊಡುಗೆಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದಂತೆ. ಈ ತನಿಖೆಗೆ ಸಂಬಂಧಿಸಿದಂತೆ ಇಡಿ ತನಿಖೆ ಮುಂದುವರೆಸಿದ್ದು, ಹಣಕಾಸು ವ್ಯವಹಾರಗಳ ಬಗ್ಗೆ ಪ್ರಶ್ನಿಸಲು ಇಡಿ ಅಧಿಕಾರಿಗಳು ಡಿಕೆ ಶಿವಕುಮಾರ್ ಹಾಗೂ ಅವರ ಸಹೋದರ ಸಂಸದ ಡಿಕೆ ಸುರೇಶ್ ಗೆ ನೋಟೀಸ್​ ಜಾರಿ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಡಿ ಕೆ ಶಿವಕುಮಾರ್ ಇಂದು ಇಡಿ ಅಧಿಕಾರಿಗಳ ವಿಚಾರಣೆಗೆ ಹಾಜರಾಗಿದ್ದಾರೆ.

ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನಡೆಯಬೇಕಿದ್ದ ವಿಚಾರಣೆಗೆ ಹಾಜರಾಗುವುದರಿಂದ ವಿನಾಯಿತಿ ನೀಡುವಂತೆ ಡಿಕೆ ಶಿವಕುಮಾರ್​​ ಇಡಿಗೆ ಮನವಿ ಮಾಡಿದ್ದರು. ಆದರೆ ಇಡಿ ಡಿಕೆಶಿ ಮನವಿ ತಳ್ಳಿ ಹಾಕಿದ್ದು ಇಂದು ವಿಚಾರಣೆಗೆ ಹಾಜರಾಗಲೇಬೇಕು ಎಂದು ಹೇಳಿತ್ತು.

ಸೆಪ್ಟೆಂಬರ್ 23, 2022 ರ ಸಮನ್ಸ್‌ನ ಪ್ರಕಾರ ಅಕ್ಟೋಬರ್ 7, 2022 ರಂದು ನಿಮ್ಮ ಹೇಳಿಕೆ ರೆಕಾರ್ಡಿಂಗ್‌ಗಾಗಿ ನಮ್ಮ ಕಚೇರಿಯಲ್ಲಿ ಹಾಜರಾಗುವಂತೆ ಮತ್ತೊಮ್ಮೆ ನಿಮಗೆ ನಿರ್ದೇಶಿಸಲಾಗಿದೆ ಎಂದು ಇಡಿ ಸಹಾಯಕ ನಿರ್ದೇಶಕ ಕುಲದೀಪ್ ಸಿಂಗ್ ಕಳುಹಿಸಿದ್ದ ಇಮೇಲ್ ನಲ್ಲಿ ತಿಳಿಸಿದ್ದರು. ಹೀಗಾಗಿ ಡಿಕೆಶಿ ಇಂದು ವಿಚಾರಣೆಗೆ ಹಾಜರಾಗಿದ್ದಾರೆ.

ಇದನ್ನು ಓದಿ:ಗಾಯಗೊಂಡ ಆನೆ ಮರಿ ರಕ್ಷಣೆಗೆ ಎಲ್ಲ ಕ್ರಮ: ರಾಹುಲ್ ಗಾಂಧಿಗೆ ಪತ್ರ ಬರೆದ ಸಿಎಂ

Last Updated : Oct 7, 2022, 12:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.