ETV Bharat / city

ಅಸಂಘಟಿತ ಕಾರ್ಮಿಕರಿಗೆ ಮಾಸಿಕ 10 ಸಾವಿರ ರೂ. ನೀಡಿ; ಡಿಕೆಶಿ - ಕೊರೊನಾ ವೈರಸ್​

ಕೆಲಸ ಕಳೆದುಕೊಂಡಿರುವ ಬಡ ವೃತ್ತಿಪರರನ್ನು ಸರ್ಕಾರದ ವಿವಿಧ ಇಲಾಖೆಗಳ ಮೂಲಕ ಗುರುತಿಸಿ ಅವರಿಗೆ ಈ ತಿಂಗಳು ಹಾಗೂ ಮುಂದಿನ ತಿಂಗಳು ತಲಾ 10 ಸಾವಿರ ರೂ. ನೀಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.

dk-shivakumar-press-meet-about-lock-down-effects
ಡಿ. ಕೆ. ಶಿವಕುಮಾರ
author img

By

Published : Apr 18, 2020, 4:17 PM IST

ಬೆಂಗಳೂರು: ನರೇಗಾ ಯೋಜನೆಯಡಿ ಅಸಹಾಯಕ ಹಾಗೂ ಅಸಂಘಟಿತ ವೃತ್ತಿಪರರಿಗೆ ಸರ್ಕಾರ ಮಾಸಿಕ ತಲಾ 10 ಸಾವಿರ ರೂ. ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕೆಲಸ ಕಳೆದುಕೊಂಡಿರುವ ಬಡ ವೃತ್ತಿಪರರನ್ನು ಸರ್ಕಾರದ ವಿವಿಧ ಇಲಾಖೆಗಳ ಮೂಲಕ ಗುರುತಿಸಿ ಅವರಿಗೆ ಈ ತಿಂಗಳು ಹಾಗೂ ಮುಂದಿನ ತಿಂಗಳು ತಲಾ 10 ಸಾವಿರ ರೂ. ನೀಡಿ. ರಾಜ್ಯ ಬಂದ್ ಆಗಿ 28 ದಿನ ಆಗುತ್ತಾ ಬಂದಿದೆ. ಇವರ ಬಗ್ಗೆ ಯಾರೂ ಮಾತನಾಡಿಲ್ಲ. ಇಂಥವರು ನಮ್ಮ ಶಕ್ತಿ, ದೇಶದ ಬಲ. ಇವರನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ ಎಂದರು.

ನಾಳೆ ಬೆಳಗ್ಗೆ ಸಿಎಂರನ್ನು ಭೇಟಿ ಮಾಡಿ ಈ ಕುರಿತು ಮಾತನಾಡುತ್ತೇನೆ. ಅಸಂಘಟಿತ, ವೃತ್ತಿನಿರತ ಬಡವರು ಕೆಲಸವಿಲ್ಲದೇ ಕಂಗಾಲಾಗಿದ್ದಾರೆ. ಇವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಿ. ಎಸ್​. ಯಡಿಯೂರಪ್ಪ ಚಕಾರವೆತ್ತಿಲ್ಲ. ಲಾಕ್​ಡೌನ್​​ನಿಂದಾಗಿ ಬಡವರ ಬದುಕು ಬರಡಾಗಿದೆ. ರಸ್ತೆ ಬದಿ ವ್ಯಾಪಾರಿಗಳ ಜೀವನ ಅತಂತ್ರವಾಗಿದೆ. ಆದರೆ ಇವರ ಕುರಿತು ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಶಿವಕುಮಾರ್ ಆರೋಪಿಸಿದರು.

ಅಸಂಘಟಿತ ಹಾಗೂ ವೃತ್ತಿನಿರತ ಬಡವರ ಕಷ್ಟಗಳ ಕುರಿತು ಡಿ. ಕೆ. ಶಿವಕುಮಾರ ಸುದ್ದಿಗೋಷ್ಠಿ

ಇವತ್ತು ನಾನು ಕಾಂಗ್ರೆಸ್​ ಅಧ್ಯಕ್ಷನಾಗಿ ಮಾತನಾಡುತ್ತಿಲ್ಲ. ಶ್ರೀಸಾಮಾನ್ಯರ ಧ್ವನಿಯಾಗಿ ಶಾಸಕರು ಮತ್ತು ವೃತ್ತಿಪರರಿಂದ ಮಾಹಿತಿ ಪಡೆದು ಅವರ ನೋವನ್ನು ಅರಿತು ಮಾತನಾಡುತ್ತಿದ್ದೇನೆ. ರಾಜ್ಯದ ಲೇಬರ್​ ಮಂತ್ರಿಗಳು ಎಲ್ಲಿದ್ದಾರೋ ಗೊತ್ತಿಲ್ಲ. ಟಾಸ್ಕ್ ಪೋರ್ಸ್ ರಚನೆ ಮಾಡಿದ ನಿಮ್ಮ ಕಾಲಜ್ಞಾನಕ್ಕೆ ಧನ್ಯವಾದಗಳು ಎಂದು ಹೇಳಿದರು.

ರೈತರ ಬದುಕು ಬರಡಾಗಿದೆ. ಬೆಳೆದ ತರಕಾರಿ, ಹಣ್ಣು ಕೊಳ್ಳುವವರಿಲ್ಲ. ನಾವು ಪ್ರತಿಪಕ್ಷದವರು ಕೈಗೊಂಡ ಕಾಳಜಿ ನಿಮ್ಮ ಮುಂದಿದೆ. ಸರ್ಕಾರ ಬಡವರಿಗಾಗಿ ಏನು ಮಾಡುತ್ತಿದೆ ಎಂಬುದನ್ನು ವಿಡಿಯೋ ಮಾಡಿ ತೋರಿಸಿ ಎಂದು ಆಗ್ರಹಿಸಿದರು.

ಮಾಧ್ಯಮ ವರದಿಗಳು ಜನರ ಸಮಸ್ಯೆಯನ್ನು ಬಿಚ್ಚಿಡುತ್ತಿವೆ. ಅಲ್ಪಸಂಖ್ಯಾತ ಸಮುದಾಯದವರು ಮಾವಿನ ಕಾಯಿ ಕುಯ್ಯುತ್ತಿದ್ದರು, ಆದರೆ ಅವರನ್ನು ತೋಟಕ್ಕಿಳಿಯುವುದು ಬೇಡ ಎನ್ನುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಈ ಭಾವನೆ ಹುಟ್ಟಿಸಿದವರು ಯಾರು? ಎಂದು ಪ್ರಶ್ನಿಸಿದರು.

ಸರ್ಕಾರದ ಪ್ಲಾನ್ ಆಫ್ ಆ್ಯಕ್ಷನ್ ಏನು? ಜನರ ಸಮಸ್ಯೆಗೆ ನಿಮ್ಮ ಪರಿಹಾರ ಏನು? ಶಿಕ್ಷಕರ‌ ಪರಿಸ್ಥಿತಿ ಬಗ್ಗೆ ಏನು ಹೇಳುತ್ತೀರಿ? ಆನ್ಲೈನ್ ಮೂಲಕ ಪಾಠ ಮಾಡಿ ಎನ್ನುತ್ತೀರಿ, ಹಳ್ಳಿಯಲ್ಲಿ ಏನಿದೆ ವ್ಯವಸ್ಥೆ. ಅವರಿಗೆ ನೀವು ಯಾವ ವ್ಯವಸ್ಥೆ ಕೊಟ್ಟಿದ್ದೀರಿ? ರಾಜ್ಯದಲ್ಲಿ 1.69 ಲಕ್ಷ ವೃತ್ತಿಪರ ಕುಶಲಕರ್ಮಿಗಳು ಇದ್ದಾರಂತೆ. 500 ರೂ. ಹಾಕ್ತೀನಿ ಅಂತಿದ್ದಾರೆ. ಏನಕ್ಕೆ ಸಾಲುತ್ತೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.