ETV Bharat / city

ಗೃಹ ಸಚಿವರು ಜ್ಞಾನವಿಲ್ಲದ ಅರಗದ ಜ್ಞಾನೇಂದ್ರ: ಡಿಕೆಶಿ

author img

By

Published : Apr 7, 2022, 4:33 PM IST

ಬೆಂಗಳೂರು ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ನೀಡಿದ್ದ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಟುವಾಗಿ ಟೀಕಿಸಿದ್ದಾರೆ.

DK Shivakumar
ಕೆಪಿಸಿಪಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

ಬೆಂಗಳೂರು: 'ರಾಜ್ಯ ಗೃಹ ಸಚಿವರು ಜ್ಞಾನವಿಲ್ಲದ ಅರಗದ ಜ್ಞಾನೇಂದ್ರ' ಎಂದು ಕೆಪಿಸಿಪಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಿಡಿ ಕಾರಿದರು. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಒಬ್ಬ ಹೋಂ ಮಿನಿಸ್ಟರ್​ಗೆ ಬೇಸಿಕ್ ನಾಲೆಡ್ಜ್ ಇಲ್ಲ. ಅವರು ಯಾರ ಪರ ಮಾತನಾಡುತ್ತಿದ್ದಾರೆ. ಸರ್ಕಾರದ ಪರವಾಗಿ ಮಾತನಾಡುತ್ತಿದ್ದಾರಾ?. ಇಲ್ಲಾ ರಾಜ್ಯದ ಜನರ ಪರ ಮಾತನಾಡುತ್ತಿದ್ದಾರಾ?. ಹೋಗ್ಲಿ ಅವರ ಪಕ್ಷದ ಪರವಾಗಿ ಮಾತನಾಡುತ್ತಿದ್ದಾರಾ ಅನ್ನೋದು ಗೊತ್ತಿಲ್ಲ ಎಂದರು.

ನಾನು ಡಿಜಿ, ಆಯುಕ್ತರಿಗೆ ಮನವಿ‌ ಮಾಡುತ್ತೇನೆ. ಮೊದಲು ನಿಮ್ಮ ಗೃಹ ಸಚಿವರ ವಿರುದ್ಧ ದೂರು ದಾಖಲಿಸಿ. ನಾವು ಕೊಲೆಯನ್ನು ಖಂಡಿಸುತ್ತೇವೆ. ಆದರೆ ಸಾವನ್ನು ಪ್ರಚೋದಿಸುವುದು ಎಷ್ಟು ಸರಿ? ಪ್ರಚೋದನೆ ಹೇಳಿಕೆ ಕೊಟ್ಟು ವೈಷಮ್ಯ ಮೂಡಿಸುತ್ತಿದ್ದಾರೆ ಎಂದು ಆರೋಪಿಸಿದರು.

ಗೃಹ ಸಚಿವರನ್ನು ವಜಾ ಮಾಡಬೇಕು: ಗೃಹ ಸಚಿವ ಆರಗ ಜ್ಞಾನೇಂದ್ರ ಜಾತಿ ಧರ್ಮಗಳ ನಡುವೆ ವೈಷಮ್ಯ ಮೂಡಿಸುತ್ತಿದ್ದಾರೆ. ಸಿಎಂ ಬೊಮ್ಮಾಯಿ ಅವರು ಕೂಡಲೇ ಗೃಹ ಸಚಿವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು. ಮಾಡೋದೆಲ್ಲ ಮಾಡಿ ಸಂಜೆ ಅಪಾಲಜಿ ಕೊಡೋದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಅಲ್‌ಖೈದಾ ವಿಡಿಯೋ ಹಿಂದೆ ಆರ್‌ಎಸ್‌ಎಸ್‌: 'ಸಿದ್ದರಾಮಯ್ಯ ಗಾಳಿಯಲ್ಲಿ ಗುಂಡು ಹೊಡೆಯುತ್ತಿದ್ದಾರೆ'

ಏ.11ರಂದು ಪ್ರತಿಭಟನೆ: ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಫ್ರೀಡಂ‌ ಪಾರ್ಕ್​ನಲ್ಲಿ ಏ.11ರಂದು ಕಾಂಗ್ರೆಸ್‌ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ. ಜಿಲ್ಲಾ, ತಾಲೂಕು ಮಟ್ಟದಲ್ಲೂ ಪ್ರತಿಭಟನೆ ಮಾಡುತ್ತೇವೆ. ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಕೂಡ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.