ETV Bharat / city

ಡಿ.ಜೆ, ಕೆ.ಜಿ ಹಳ್ಳಿ ಗಲಭೆ ಪ್ರಕರಣ:  ನಷ್ಟದ ಲೆಕ್ಕ ಕಲೆ ಹಾಕ್ತಿದೆ ತನಿಖಾ ತಂಡ

ಘಟನಾ ಸ್ಥಳಕ್ಕೆ ಲೋಕೋಪಯೋಗಿ ಇಲಾಖೆ, ಆರ್​​ಟಿಒ ಅಧಿಕಾರಿಗಳು ಭೇಟಿ ಕೊಟ್ಟು ಸುಟ್ಟ ಸ್ಥಳದ ವೀಕ್ಷಣೆ ಮಾಡಿ, ನಷ್ಟದ ಬಗ್ಗೆ ರಿಪೋರ್ಟ್​ ಮಾಡಲಿದ್ದಾರೆ. ಹಾಗೆ ಬೆಂಕಿಯ ಕೆನ್ನಾಲಿಗೆ ತುತ್ತಾದ ಠಾಣೆಗಳ ಕಟ್ಟಡದ ಪರಿಸ್ಥಿತಿ ಹೇಗಿದೆ ಅನ್ನೋದರ ಬಗ್ಗೆಯೂ ಪರಿಶೀಲನೆ ನಡೆಸಲಿದ್ದಾರೆ.

author img

By

Published : Aug 18, 2020, 9:34 AM IST

Updated : Aug 18, 2020, 9:50 AM IST

Dj village, KG village riot case, investigation into loss
ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿ ಗಲಭೆ ಪ್ರಕರಣ, ಆಗಿರುವ ನಷ್ಟದ ಕುರಿತು ತನಿಖೆ ಶುರು

ಬೆಂಗಳೂರು: ಡಿ.ಜೆ ಹಳ್ಳಿ ಹಾಗೂ ಕೆ.ಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ತಂಡ ಆರೋಪಿಗಳ ಹೆಡೆಮುರಿ ಕಟ್ಟಿದ್ರೆ, ಮತ್ತೊಂದು ತಂಡ ಘಟನೆ ನಡೆದ ದಿನ ಆದ ನಷ್ಟದ ಲೆಕ್ಕಾಚಾರದ ಕಡೆಗೆ ಗಮನ ಹರಿಸಿದೆ.

ಹಿರಿಯಾ ಐಪಿಎಸ್ ಅಧಿಕಾರಿಗಳಾದ ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ಹಾಗೂ ಪೂರ್ವ ವಿಭಾಗ ಡಿಸಿಪಿ‌ ಶರಣಪ್ಪ ಅವರು ಇಲ್ಲಿಯವರೆಗೆ ದಾಖಲಾದ ಎಫ್ಐಆರ್ ಸಂಖ್ಯೆಗಳ ಆಧಾರ ಹಾಗೂ ನಷ್ಟಕ್ಕೆ ಒಳಗಾದ ಶಾಸಕರ ಮನೆ, ಕಚೇರಿ, ನವೀನ್ ಮನೆ, ಸಾರ್ವಜನಿಕರ ಮನೆ ಅಂಗಡಿ, ಡಿ.ಜೆ‌ ಹಳ್ಳಿ ಠಾಣೆ, ಕೆ.ಜಿ ಹಳ್ಳಿ ಠಾಣೆ, ಪೊಲೀಸ್ ವಾಹನ, ಸಾರ್ವಜನಿಕರ ವಾಹನಗಳ ಬಗ್ಗೆ ಲೆಕ್ಕಾಚಾರ ಶುರು ಮಾಡಿದ್ದಾರೆ. ಪ್ರಾಥಮಿಕವಾಗಿ 9.5 ಕೋಟಿ ರೂ. ನಷ್ಟವಾಗಿರುವ ವಿಚಾರ ತಿಳಿದು ಬಂದಿದೆ.

ಆದರೆ, ಸದ್ಯ ಘಟನಾ ಸ್ಥಳಕ್ಕೆ ಲೋಕೋಪಯೋಗಿ ಇಲಾಖೆ, ಆರ್​​ಟಿಒ ಅಧಿಕಾರಿಗಳು ಭೇಟಿ ಕೊಟ್ಟು, ಸುಟ್ಟ ಸ್ಥಳದ ವೀಕ್ಷಣೆ ಮಾಡಿ ನಷ್ಟದ ಬಗ್ಗೆ ರಿಪೋರ್ಟ್​ ಮಾಡಲಿದ್ದಾರೆ. ಹಾಗೆ ಬೆಂಕಿಯ ಕೆನ್ನಾಲಿಗೆಗೆ ತುತ್ತಾದ ಠಾಣೆಗಳ ಕಟ್ಟಡ ಪರಿಸ್ಥಿತಿ ಹೇಗಿದೆ ಅನ್ನೋದರ ಬಗ್ಗೆಯೂ ಪರಿಶೀಲನೆ ನಡೆಸಲಿದ್ದಾರೆ. ಒಂದು ವೇಳೆ ಬೆಂಕಿಯ ಕೆನ್ನಾಲಿಗೆ ಜಾಸ್ತಿ ತಾಗಿದ್ದರೆ ಠಾಣೆಯನ್ನ ಡೆಮಾಲಿಷ್​ ಮಾಡುವ ಸಾಧ್ಯತೆ ಇದೆ. ಹಾಗೆ ಇನ್ನೂ ಕೂಡಾ ಎಫ್ಐಆರ್ ಸಂಖ್ಯೆ ಹೆಚ್ಚಾಗುತ್ತಿದ್ದು, ನಷ್ಟದ ಮೌಲ್ಯ ಜಾಸ್ತಿಯಾಗುವ ಸಾಧ್ಯತೆ ಇದೆ.

ಮತ್ತೊಂದೆಡೆ, ಪ್ರತಿ ನಷ್ಟದ ಮೌಲ್ಯವನ್ನ ಸದ್ಯ ಬಂಧಿತರಾದ ಆರೋಪಿಗಳು ಭರಿಸಬೇಕಾಗುತ್ತದೆ. ಈಗಾಗಲೇ ಸರ್ಕಾರ ಈ ನಿರ್ಧಾರ ಮಾಡಿದ್ದು, ಪ್ರತಿ ಆರೋಪಿಗಳಿಂದ ನಷ್ಟ ವಸೂಲಿ ಮಾಡುವ ಸಾಧ್ಯತೆ ಇದೆ.

ಗಲಭೆ ಕೋರರ ಮೇಲೆ ಟೆರರ್ ಕಾಯ್ದೆ:

ಬಂಧಿತ ಆರೋಪಿಗಳಿಗೆ ಜಾಮೀನು ಸಿಗಲೇಬಾರದು ಎಂದು ಪಣ ತೊಟ್ಟಿರುವ ಪೊಲೀಸರು, ಸದ್ಯ ಪ್ರಕರಣದ ಆರೋಪಿಗಳ ಮೇಲೆ ದೆಹಲಿ ಮಾದರಿಯಲ್ಲಿ ಭಯೋತ್ಪಾದಕರ ವಿರುದ್ಧ ಬಳಕೆ ಮಾಡುವ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ, ಯುಎಪಿಎ ಕಾಯ್ದೆ ಬಳಕೆ ಮಾಡಲು ಪೊಲೀಸರು ಚಿಂತನೆ ನಡೆಸಿದ್ದಾರೆ. ಹಾಗೆ ಗೂಂಡಾ ಕಾಯ್ದೆ ಅಡಿ ಆರೋಪಿಗಳನ್ನ ಮಟ್ಟ ಹಾಕಲು ಪೊಲೀಸರು ಇಂಚಿಂಚು ಮಾಹಿತಿ ಕಲೆ ಹಾಕುತ್ತಿದ್ದಾರೆ.

Last Updated : Aug 18, 2020, 9:50 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.