ETV Bharat / city

ಡಿ.ಜೆ.ಹಳ್ಳಿ ಗಲಭೆಯಿಂದ ನಿಂತ ಶಾದಿ: ಅನುಮತಿ ಕೋರಿ ಠಾಣೆಗೆ ಬಂದ ವಧು-ವರ - ಡಿಜೆ ಹಳ್ಳಿ ಗಲಭೆ

ಡಿ.ಜೆ. ಹಳ್ಳಿ ಗಲಭೆಯಿಂದ ನಿಂತಿದ್ದ ಮದುವೆಗೆ ಅನುಮತಿ ಕೋರಿ ವಧು, ವರರು ಠಾಣೆ ಮೆಟ್ಟಿಲೇರಿದ ಘಟನೆ ನಗರದಲ್ಲಿ ನಡೆದಿದೆ.

dj-halli-marriage-permission
ಮದುವೆಯಾಗಲು ಪರ್ಮಿಷನ್
author img

By

Published : Aug 16, 2020, 3:42 PM IST

ಬೆಂಗಳೂರು: ಡಿ.ಜೆ.ಹಳ್ಳಿ ಗಲಭೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಯಾಗಿದ್ದು, ಇಂದು ನಡೆಯಬೇಕಿದ್ದ ಮದುವೆಗೆ ಅಡ್ಡಿಯಾಗಿದ್ದರಿಂದ ಅನುಮತಿ ಕೋರಿ ವಧು, ವರರು ಠಾಣೆಗೆ ಆಗಮಿಸಿದ್ದರು.

ಹಲವು ದಿನಗಳ ಹಿಂದೆ‌ ಗೋರಿಪಾಳ್ಯದ ಶಾದಿ ಮಹಲ್​​ವೊಂದರಲ್ಲಿ ವಧು ವಾಸಿಯಾ ಪರ್ವೀನಾ, ವರ ಸೈಯದ್ ಅಜರುದ್ದೀನ್ ಎಂಬುವರಿಗೆ ಮನೆಯವರು ಮದುವೆ ನಿಶ್ಚಯಿಸಿದ್ದರು‌‌. ನಿಷೇಧಾಜ್ಞೆ ತೆರವಾಗುವ ನಿರೀಕ್ಷೆಯೊಂದಿಗೆ ಮದುವೆ ತಯಾರಿ ಸಹ ಮಾಡಿಕೊಳ್ಳುತ್ತಿದ್ದರು.

ಮದುವೆಯಾಗಲು ಪರ್ಮಿಷನ್ ಕೊಡಿ ಎಂದು ಠಾಣೆ ಮೆಟ್ಟಿಲೇರಿದ ವಧು-ವರರು

ಆದ್ರೆ ‌144 ಸೆಕ್ಷನ್ ಜಾರಿ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿದ್ದ ಪೊಲೀಸರು ಜನರಿಗೆ ಓಡಾಡಲು ಬಿಡುತ್ತಿರಲಿಲ್ಲ. ಈ ಸಲುವಾಗಿ ಮದುವೆ ಮಾಡಿಕೊಳ್ಳಲು ಅನುಮತಿ ಕೋರಿ ವಧು-ವರರು ಠಾಣೆ ಮೆಟ್ಟಿಲೇರಿದ್ದಾರೆ. ಇವರ ಮನವಿಗೆ ಸ್ಪಂದಿಸಿದ ಇನ್‌ಸ್ಪೆಕ್ಟರ್ ಕೇಶವಮೂರ್ತಿ ವಿವಾಹಕ್ಕೆ ಅನುಮತಿಸಿ ಶುಭ ಹಾರೈಸಿ ಕಳುಹಿಸಿಕೊಟ್ಟರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.