ETV Bharat / city

ಬ್ರಾಹ್ಮಣ ಮಹಾಸಭಾದಿಂದ ಸಮುದಾಯದ ಬಡವರಿಗೆ ಉಚಿತ ಪಡಿತರ ವಿತರಣೆ..

ಬೆಂಗಳೂರಿನಲ್ಲಿರುವ ಸುಮಾರು ಐದು ಸಾವಿರ ಬಡ ಬ್ರಾಹ್ಮಣರನ್ನು ಗುರುತಿಸಿ ಪಡಿತರ ಕಿಟ್ ವಿತರಣೆ ಮಾಡಲು ಬ್ರಾಹ್ಮಣ ಮಹಾಸಭಾ ಯೋಜನೆ ರೂಪಿಸಿದೆ. ಈ ಕಾರ್ಯಕ್ಕೆ ಇಂದು ಚಾಲನೆ ನೀಡಲಾಯಿತು.

Distribution of free rations from poor Brahmins
ಬ್ರಾಹ್ಮಣ ಮಹಾಸಭಾದಿಂದ ಬಡ ಬ್ರಾಹ್ಮಣರಿಗೆ ಉಚಿತ ಪಡಿತರ ವಿತರಣೆ
author img

By

Published : Apr 8, 2020, 8:54 PM IST

ಬೆಂಗಳೂರು : ದೇಶದಾದ್ಯಂತ ಲಾಕ್‌ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಬ್ರಾಹ್ಮಣ ಮಹಾಸಭಾ ಮತ್ತು ಅಖಿಲ ಕರ್ನಾಟಕ ಸ್ಮಾರ್ಥ ಬ್ರಾಹ್ಮಣ ಸಂಘದ ವತಿಯಿಂದ ಸಮುದಾಯದ ಬಡ ಬ್ರಾಹ್ಮಣರಿಗೆ ಪಡಿತರ ವಿತರಿಸುವ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ್ ಚಾಲನೆ ನೀಡಿದರು.

ನಗರದ ಮಲ್ಲೇಶ್ವರದ ವೈಯ್ಯಾಲಿಕಾವಲ್ ರಸ್ತೆಯಲ್ಲಿರುವ ರಾಘವೇಂದ್ರ ಸ್ವಾಮಿ ಮತ್ತು ಶ್ರೀ ದತ್ತಾತ್ರೇಯ ದೇವಸ್ಥಾನ ಬಳಿಯ ಸಾಂಸ್ಕೃತಿಕ ಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ್‌ ನಾರಾಯಣ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಗೋಪಾಲಯ್ಯ ಭಾಗವಹಿಸಿದ್ದರು. ಈ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಬ್ರಾಹ್ಮಣ ಸಮುದಾಯದ ಬಡವರಿಗೆ ಪಡಿತರ ವಿತರಿಸಲಾಯಿತು.

ಬೆಂಗಳೂರಿನಲ್ಲಿರುವ ಸುಮಾರು ಐದು ಸಾವಿರ ಬಡ ಬ್ರಾಹ್ಮಣರನ್ನು ಗುರುತಿಸಿ ಪಡಿತರ ಕಿಟ್ ವಿತರಣೆ ಮಾಡಲು ಬ್ರಾಹ್ಮಣ ಮಹಾಸಭಾ ಯೋಜನೆ ರೂಪಿಸಿದೆ. ಈ ಕಾರ್ಯಕ್ಕೆ ಇಂದು ಚಾಲನೆ ನೀಡಲಾಯಿತು. ನಾಳೆಯಿಂದ ಬ್ರಾಹ್ಮಣ ಮಹಾಸಭಾ ಮತ್ತು ಅಖಿಲ ಕರ್ನಾಟಕ ಸ್ಮಾರ್ಥ ಬ್ರಾಹ್ಮಣ ಸಂಘವು ಸಮಾಜದ ಬಡ ಬ್ರಾಹ್ಮಣರಿಗೆ ಉಚಿತವಾಗಿ ಪಡಿತರ ವಿತರಿಸಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.